ಬಂಗುಯಿ(ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್): ಬಂಡುಕೋರರು ನಡೆಸಿದ ಭೀಕರ ದಾಳಿಯಲ್ಲಿ ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ನ ವಾಯವ್ಯ ಭಾಗದಲ್ಲಿ ಸುಮಾರು ಇಬ್ಬರು ಸೈನಿಕರು ಸೇರಿದಂತೆ 30 ಮಂದಿ ಸಾವನ್ನಪ್ಪಿದ್ದಾರೆ.
ಭಯೋತ್ಪಾದಕರ ದಾಳಿ ಭಾನುವಾರ ನಡೆದಿದೆ. ಮಂಗಳವಾರ ಅಧಿಕಾರಿಗಳು ದಾಳಿಯ ಕುರಿತು ಪೂರ್ಣ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳ ಮಾಹಿತಿಯಂತೆ, ಕ್ಯಾಮರೂನ್ ರಾಷ್ಟ್ರದ ಗಡಿಗೆ ಸಮೀಪದಲ್ಲಿರುವ ಕೈಟಾ ಮತ್ತು ಬೇಯೆಂಗೌ ಗ್ರಾಮಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ.
-
#UPDATE Rebel attacks in the northwest of the Central African Republic at the weekend claimed at least 30 civilian lives and those of two soldiers, local officials said https://t.co/Txtvbao3Ej pic.twitter.com/riQx89KqfG
— AFP News Agency (@AFP) November 30, 2021 " class="align-text-top noRightClick twitterSection" data="
">#UPDATE Rebel attacks in the northwest of the Central African Republic at the weekend claimed at least 30 civilian lives and those of two soldiers, local officials said https://t.co/Txtvbao3Ej pic.twitter.com/riQx89KqfG
— AFP News Agency (@AFP) November 30, 2021#UPDATE Rebel attacks in the northwest of the Central African Republic at the weekend claimed at least 30 civilian lives and those of two soldiers, local officials said https://t.co/Txtvbao3Ej pic.twitter.com/riQx89KqfG
— AFP News Agency (@AFP) November 30, 2021
ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ನ ರಾಜಧಾನಿ ಬಂಗುಯಿ ನಗರದಿಂದ ಉತ್ತರಕ್ಕೆ ಸುಮಾರು 500 ಕಿಲೋಮೀಟರ್ ದೂರದಲ್ಲಿ ಈ ಗ್ರಾಮಗಳಿವೆ ಎಂದು ಪ್ರಾದೇಶಿಕ ಆಡಳಿತಾಧಿಕಾರಿ ಇಸೈ ಗ್ಬಾನಿನ್ ಸ್ಪಷ್ಟನೆ ನೀಡಿದ್ದು, 3R ಬಂಡುಕೋರರಿಂದ ಈ ದಾಳಿ ನಡೆದಿದೆ ಎಂದು ಇಸೈ ಗ್ಬಾನಿನ್ ಆರೋಪಿಸಿದ್ದಾರೆ.
ಯಾರಿವರು 3R ಬಂಡುಕೋರರು?
ಇವರು ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ನ ಬಂಡುಕೋರರಾಗಿದ್ದು, Return, Reclamation, Rehabilitation ( ರಿಟರ್ನ್, ರಿಕ್ಲಾಮೇಷನ್, ರಿಹ್ಯಾಬಿಲಿಟೇಷನ್) ಎಂಬ ಸಿದ್ಧಾಂತಗಳ ಅಡಿಯಲ್ಲಿ ಕೆಲಸ ಮಾಡುವ ಕಾರಣದಿಂದ ಈ ಸಂಘಟನೆಯನ್ನು 3R ಎಂದು ಕರೆಯಲಾಗುತ್ತದೆ.
ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ನ ವಾಯವ್ಯ ಭಾಗದಲ್ಲಿ ಫುಲಾನಿ ಜನಸಮುದಾಯವನ್ನು ರಕ್ಷಿಸುವ ಸಲುವಾಗಿ 2015ರ ಡಿಸೆಂಬರ್ನಲ್ಲಿ ಹುಟ್ಟಿಕೊಂಡ ಈ ಸಂಘಟನೆ, ಈಗಾಗಲೇ ಸೆಂಟ್ರಲ್ ಆಫ್ರಿಕನ್ ಸರ್ಕಾರದ ವಿರುದ್ಧದ ಅನೇಕ ಅಪರಾಧಗಳಲ್ಲಿ ಭಾಗಿಯಾಗಿದೆ.
ಇದನ್ನೂ ಓದಿ: ನೈಜೀರಿಯಾ ಜೈಲಿನ ಮೇಲೆ ಉಗ್ರರ ದಾಳಿ ; 11 ಮಂದಿ ಸಾವು, 262 ಕೈದಿಗಳು ಪರಾರಿ