ಡೊಡೊಮಾ(ತಾಂಜಾನಿಯಾ): ಚಾಲಕ ಜನಸಂದಣಿಯ ಕಾರನ್ನು ಚಲಾಯಿಸಿದ ಪರಿಣಾಮವಾಗಿ 14 ಮಂದಿ ಸಾವನ್ನಪ್ಪಿ, 22 ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ತಾಂಜಾನಿಯಾದಲ್ಲಿ ನಡೆದಿದೆ ಎಂದು ತಾಂಜಾನಿಯಾ ಅಧ್ಯಕ್ಷೀಯ ಕಚೇರಿ ಸೋಮವಾರ ಮಾಹಿತಿ ನೀಡಿದೆ.
ಪೊಲೀಸರ ಪ್ರಕಾರ ಆಗ್ನೇಯ ಮೆಟ್ವಾರಾ ಪ್ರದೇಶದ ಲಿಡುಂಬೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವೇಗವಾಗಿ ಬರುತ್ತಿದ್ದ ಸ್ಕ್ಯಾನಿಯ ಕಾರು ನಿಯಂತ್ರಣ ಕಳೆದುಕೊಂಡಿದೆ. ಈ ವೇಳೆ ಜನಸಂದಣಿಯ ಮೇಲೆ ಕಾರನ್ನು ಚಾಲಕ ಚಲಾಯಿಸಿದ್ದಾನೆ. ಘಟನೆಯಲ್ಲಿ 14 ಜನ ಸಾವನ್ನಪ್ಪಿದ್ದು, 22 ಮಂದಿ ಗಾಯಗೊಂಡಿದ್ದಾರೆ.
ತಾಂಜೇನಿಯಾದ ಅಧ್ಯಕ್ಷ ಸಾಮಿಯಾ ಸುಲುಹು ಹಸನ್ ಅವರು ಮಾರಣಾಂತಿಕ ಅಪಘಾತದ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದು, ಗಾಯಾಳುಗಳ ಶೀಘ್ರ ಚೇತರಿಕೆಗೆ ಆಶಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ: ಮೂವರು ಪೊಲೀಸರ ದುರ್ಮರಣ