ETV Bharat / headlines

ಕೊರೊನಾಗೆ ಔಷಧಿ ಕಂಡು ಹಿಡಿದ ಡಿಆರ್‌ಡಿಒ; ಮೊದಲ ಬ್ಯಾಚ್ ಬಿಡುಗಡೆ - ಡಿಆರ್‌ಡಿಒ ಅಭಿವೃದ್ಧಿಪಡಿಸಿದ 2-ಡಿಯೋಕ್ಸಿ-ಡಿ-ಗ್ಲೂಕೋಸ್ (2-ಡಿಜಿ)

ಡಿಆರ್‌ಡಿಒ ಅಭಿವೃದ್ಧಿಪಡಿಸಿದ 2-ಡಿಯೋಕ್ಸಿ-ಡಿ-ಗ್ಲೂಕೋಸ್ (2-ಡಿಜಿ) ಔಷಧದ ಮೊದಲ ಬ್ಯಾಚ್ ಅನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಬಿಡುಗಡೆ ಮಾಡಿದ್ದಾರೆ.

rajnath-singh-to-release-1st-batch-of-drdos-2dg-medicine-today

author img

By

Published : May 17, 2021, 4:00 PM IST

Updated : May 17, 2021, 4:06 PM IST

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದ 2-ಡಿಯೋಕ್ಸಿ-ಡಿ-ಗ್ಲೂಕೋಸ್ (2-ಡಿಜಿ) (2-Deoxy-D-glucose (2-DG) ಔಷಧದ ಮೊದಲ ಬ್ಯಾಚ್​​ಅನ್ನು ಬಿಡುಗಡೆ ಮಾಡಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಆಂಟಿ-ಕೋವಿಡ್ ಡ್ರಗ್ 2 ಡಿಜಿ ಯನ್ನು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಅವರಿಗೆ ಹಸ್ತಾಂತರಿಸುವ ಮೂಲಕ ಬಿಡುಗಡೆ ಮಾಡಿದರು.

ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಈ ಔಷಧವು ಹೊಸ ಭರವಸೆಯ ಬೆಳಕನ್ನು ಮೂಡಿಸಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಮುಂದುವರೆದು ಮಾತನಾಡಿರುವ ಅವರು, ಇದು ನಮ್ಮ ದೇಶದ ವೈಜ್ಞಾನಿಕ ಪರಾಕ್ರಮಕ್ಕೆ ಉತ್ತಮ ಉದಾಹರಣೆಯಾಗಿದೆ. ನಾವು ವಿಶ್ರಾಂತಿ ಪಡೆಯುವ ಅಗತ್ಯವಿಲ್ಲ, ಅಥವಾ ನಾವು ಸುಸ್ತಾಗಲೂಬಾರದು. ಏಕೆಂದರೆ ಈ ಅಲೆಯು ಎರಡನೇ ಬಾರಿಗೆ ಬಂದಿದೆ. ನಮ್ಮ ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ವೈದ್ಯಕೀಯ ಕ್ಷೇತ್ರವು ಕೂಡ ತನ್ನ ನಿವೃತ್ತ ವೈದ್ಯರನ್ನು ಮರಳಿ ಕೆಲಸಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಿದೆ ಎಂದು ಹೇಳಲು ನನಗೆ ಸಂತೋಷವಾಗಿದೆ. ಅವರ ಸೇವೆಯ ನಂತರವೂ ಈ ಅಭಿಯಾನಕ್ಕೆ ಸೇರ್ಪಡೆಗೊಳ್ಳುತ್ತಿರುವ ಅಂತಹ ವೈದ್ಯರನ್ನು ನಾನು ಹೃತ್ಪೂರ್ವಕವಾಗಿ ಪ್ರಶಂಸಿಸುತ್ತೇನೆ ಎಂದಿದ್ದಾರೆ.

ಆಮ್ಲಜನಕದ ಪೂರೈಕೆಯ ವಿಷಯವಾಗಲಿ, ಐಸಿಯು ಹಾಸಿಗೆಗಳನ್ನು ಖಾತ್ರಿಪಡಿಸಿಕೊಳ್ಲುವ ವಿಷಯ, ದ್ರವ ಆಮ್ಲಜನಕದ ಸಾಗಣೆಗೆ ಕ್ರಯೋಜೆನಿಕ್ ಟ್ಯಾಂಕರ್‌ಗಳ ವ್ಯವಸ್ಥೆ ಇರಲಿ ಒಟ್ಟಾರೆ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಸಿಂಗ್ ಇದೇ ವೇಳೆ ಹೇಳಿದರು.

ಏನಿದು 2-ಡಿಯೋಕ್ಸಿ-ಡಿ-ಗ್ಲೂಕೋಸ್ (2-ಡಿಜಿ) ?

ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಕರೆಯನ್ನು ಅನುಸರಿಸಿ, ಡಿಆರ್‌ಡಿಒ 2-ಡಿಜಿಯ COVID ವಿರೋಧಿ ಚಿಕಿತ್ಸಕವನ್ನು ಅಭಿವೃದ್ಧಿಪಡಿಸುವ ಪ್ರಯತ್ನವನ್ನು ಕೈಗೊಂಡಿತು. ಏಪ್ರಿಲ್ 2020 ರಲ್ಲಿ, ಸಾಂಕ್ರಾಮಿಕ ರೋಗದ ಮೊದಲ ತರಂಗದಲ್ಲಿ, INMAS-DRDO ವಿಜ್ಞಾನಿಗಳು ಹೈದರಾಬಾದ್‌ನ ಸೆಲ್ಯುಲಾರ್ ಮತ್ತು ಆಣ್ವಿಕ ಜೀವಶಾಸ್ತ್ರದ (ಸಿಸಿಎಂಬಿ) ಸಹಾಯದಿಂದ ಪ್ರಯೋಗಗಳನ್ನು ನಡೆಸಿದರು ಮತ್ತು ಈ ಅಣುವು SARS-CoV-2 ವೈರಸ್ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಕಂಡುಹಿಡಿದರು ಹಾಗೆ ಇದು ವೈರಸ್​ ಬೆಳವಣಿಗೆಯನ್ನು ತಡೆಯುವ ಸಂಬಂಧ ಪ್ರಮುಖ ಪಾತ್ರ ವಹಿಸಲಿದೆ.

ಈ ಫಲಿತಾಂಶಗಳ ಆಧಾರದ ಮೇಲೆ, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್ಕೊ) ಮೇ 2020 ರಲ್ಲಿ ಕೊರೊನಾ ರೋಗಿಗಳಲ್ಲಿ 2-ಡಿಜಿಯ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಅನುಮತಿ ನೀಡಿತು.

2020 ರ ಮೇ ನಿಂದ ಅಕ್ಟೋಬರ್ ವರೆಗೆ ನಡೆಸಿದ ಹಂತ II ಪ್ರಯೋಗಗಳಲ್ಲಿ (ಡೋಸ್-ರೇಂಜಿಂಗ್ ಸೇರಿದಂತೆ), COVID-19 ರೋಗಿಗಳಲ್ಲಿ ಔಷಧಿ ಸುರಕ್ಷಿತವಾಗಿದೆ ಎಂದು ಕಂಡುಬಂದಿದೆ. ಸೋಂಕಿತರ ಚೇತರಿಕೆಯಲ್ಲಿ ಗಮನಾರ್ಹ ಸುಧಾರಣೆಯನ್ನು ತೋರಿಸಿದೆ. ಹಂತ II (ಎ) ಅನ್ನು ಆರು ಆಸ್ಪತ್ರೆಗಳಲ್ಲಿ ಮತ್ತು ಎರಡನೇ ಹಂತದ (ಬಿ) (ಡೋಸ್-ರೇಂಜಿಂಗ್) ಕ್ಲಿನಿಕಲ್ ಪ್ರಯೋಗವನ್ನು ದೇಶಾದ್ಯಂತ 11 ಆಸ್ಪತ್ರೆಗಳಲ್ಲಿ ನಡೆಸಲಾಗಿದೆ.

ಯಶಸ್ವಿ ಫಲಿತಾಂಶಗಳ ಆಧಾರದ ಮೇಲೆ, ಡಿಸಿಜಿಐ 2020 ರ ನವೆಂಬರ್‌ನಲ್ಲಿ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳಿಗೆ ಅನುಮತಿ ನೀಡಿತು. ಡಿಸೆಂಬರ್ ರಿಂದ ಮಾರ್ಚ್ 2021 ರ ನಡುವೆ 220 ರೋಗಿಗಳ ಮೇಲೆ ಕ್ಲಿನಿಕಲ್ ಪ್ರಯೋಗವನ್ನು ದೆಹಲಿ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡುನಲ್ಲಿ ಮಾಡಲಾಯಿತು.

ಈ ಔಷಧವು ಪುಡಿ ರೂಪದಲ್ಲಿ ಸ್ಯಾಚೆಟ್​ನಲ್ಲಿ ಬರುತ್ತದೆ. ಅದನ್ನು ನೀರಿನಲ್ಲಿ ಕರಗಿಸಿ ಕುಡಿಯಬೇಕಾಗುತ್ತದೆ. ಇದು ವೈರಸ್-ಸೋಂಕಿತ ಕೋಶಗಳಲ್ಲಿ ಸಂಗ್ರಹಗೊಂಡು ವೈರಲ್ ಸಂಶ್ಲೇಷಣೆ ಮತ್ತು ಶಕ್ತಿಯ ಉತ್ಪಾದನೆಯನ್ನು ನಿಲ್ಲಿಸುವ ಮೂಲಕ ವೈರಸ್ ಬೆಳವಣಿಗೆಯನ್ನು ತಡೆಯುತ್ತದೆ.

ವೈರಸ್ ಸೋಂಕಿತ ಕೋಶಗಳಲ್ಲಿ ಇದರ ಆಯ್ದ ಶೇಖರಣೆ ಈ ಔಷಧಿಯನ್ನು ಅನನ್ಯಗೊಳಿಸುತ್ತದೆ. ಈಗ ಇರುವ ಕೊರೊನಾ ಎರಡನೇ ಅಲೆಯಲ್ಲಿ ಹೆಚ್ಚಿನ ಸಂಖ್ಯೆಯ ರೋಗಿಗಳು ತೀವ್ರ ಆಮ್ಲಜನಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಮತ್ತು ಆಸ್ಪತ್ರೆಗೆ ಕಡ್ಡಾಯವಾಗಿ ದಾಖಲು ಮಾಡಬೇಕಾಗುತ್ತದೆ. ಆದರೆ ಸೋಂಕಿತ ಕೋಶಗಳಲ್ಲಿ ಈ ಔಷಧದ ಕಾರ್ಯಾಚರಣೆಯ ಕಾರ್ಯವಿಧಾನದಿಂದಾಗಿ ಅಮೂಲ್ಯವಾದ ಜೀವಗಳನ್ನು ಉಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಹಾಗೆ ಇದು ಸೋಂಕಿತರ ಆಸ್ಪತ್ರೆಯ ವಾಸ್ತವ್ಯವನ್ನು ಕಡಿಮೆ ಮಾಡುತ್ತದೆ.

Last Updated : May 17, 2021, 4:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.