ETV Bharat / headlines

PHOTOS: ಚಿಕ್ಕ ವಯಸ್ಸಿನಲ್ಲೇ ದುರಂತ ಅಂತ್ಯ ಕಂಡ ಕನ್ನಡದ ಶ್ರೇಷ್ಠ ನಟ-ನಟಿಯರಿವರು! - ಶಂಕರ್ ನಾಗ್

ಕನ್ನಡ ಚಿತ್ರರಂಗದ ಇತಿಹಾಸವನ್ನು ಕೆದಕುತ್ತಾ ಹೋದಂತೆ ಕೆಲವು ನಟ, ನಟಿಯರು ಅಪಘಾತದಲ್ಲಿ ದುರಂತ ಅಂತ್ಯ ಕಂಡರೆ, ಇನ್ನು ಕೆಲವರು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬರುತ್ತದೆ. ಕೆಲವು ಘಟನೆಗಳು ಆತ್ಮಹತ್ಯೆಯೋ ಅಥವಾ ಕಿರುಕುಳದಿಂದ ಸಾವನ್ನಪ್ಪಿದರೋ ಅನ್ನೋದು ತಿಳಿಯದೇ ನಿಗೂಢವಾಗಿಯೇ ಉಳಿದಿವೆ. ಹೀಗೆ ಅಕಾಲಿಕ ಮರಣ ಹೊಂದಿ ಮಿಂಚಿ ಮರೆಯಾದ ಕೆಲವು ನಟ ನಟಿಯರ ಬಗೆಗಿನ ಮಾಹಿತಿ ಇಲ್ಲಿದೆ ಓದಿ.

kannada cinema stars who died in young age
ದುರಂತ ಅಂತ್ಯ ಕಂಡ ಕನ್ನಡದ ನಟ-ನಟಿಯರಿವರು
author img

By

Published : Jun 15, 2021, 10:30 AM IST

Updated : Oct 29, 2021, 7:55 PM IST

ಕನ್ನಡ ಸಿನಿರಂಗದಲ್ಲಿ ವಿಶಿಷ್ಠವಾಗಿ ತಮ್ಮದೇ ಶೈಲಿಯ ಛಾಪು ಮೂಡಿಸಿದ್ದ ಅನೇಕ ಕಲಾವಿದರು ತಮ್ಮ ನಿಜ ಜೀವನದಲ್ಲಿ ಮಾತ್ರ ದುರಂತ ಅಂತ್ಯ ಕಂಡರು. ಕೆಲವು ನಟ, ನಟಿಯರು ಅಪಘಾತದಲ್ಲಿ ಸಾವನ್ನಪ್ಪಿದ್ರು. ಇನ್ನು ಕೆಲವರು ಆತ್ಮಹತ್ಯೆಯ ದಾರಿ ತುಳಿದರು. ಕೆಲವು ಘಟನೆಗಳಲ್ಲಿ ತಾರೆಯರದ್ದು, ಆತ್ಮಹತ್ಯೆಯೋ ಅಥವಾ ಕಿರುಕುಳದಿಂದ ಸಾವನ್ನಪ್ಪಿದ್ದರೋ ಅನ್ನೋದೇ ತಿಳಿಯದಾಯ್ತು. ಈ ಘಟನೆಗಳು ಇತಿಹಾಸದ ಪುಟಗಳಲ್ಲಿ ಹಾಗೆಯೇ ಉಳಿದಿವೆ.

ಕಲ್ಪನಾ

'ಚಂದನವನದ ಮಿನುಗುತಾರೆ' ಎಂದೇ ಖ್ಯಾತಿ ಗಳಿಸಿದವರು ಅಪರೂಪದ ಪ್ರತಿಭಾಶಾಲಿ ಕಲ್ಪನಾ. ಡಾ.ರಾಜ್ ಕುಮಾರ್ ಅವರ ಜೊತೆ ಹಲವು ಚಿತ್ರದಲ್ಲಿ ನಟಿಸಿದ ಇವರು, ಕನ್ನಡದ ಜೊತೆಗೆ ತಮಿಳು, ತೆಲುಗು, ತುಳು ಮತ್ತು ಮಲಯಾಳಂ ಚಿತ್ರಗಳಲ್ಲೂ ಮನೋಜ್ಞವಾಗಿ ನಟಿಸಿದ್ದರು. ಮಾನಸಿಕ ಖಿನ್ನತೆಯಿಂದ ನರಳುತ್ತಿದ್ದ ಮಿನುಗುತಾರೆ 1979 ಮೇ 12 ರಂದು (35 ವಯಸ್ಸು) ಬೆಳಗಾವಿಯ ಸಂಕೇಶ್ವರ ಹತ್ತಿರದ ಐಬಿಯಲ್ಲಿ 56 ನಿದ್ದೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆ ಮಾಡಿಕೊಂಡರು. ಸುಮಾರು ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಕಲ್ಪನಾ ಫಿಲ್ಮ್‌ಫೇರ್ ಮತ್ತು ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದರು.

ಮಂಜುಳಾ

ಕನ್ನಡದ ಮುದ್ದು ಮುಖದ ಚೆಲುವೆ ಎಂದರೆ ನಟಿ ಮಂಜುಳಾ. ರೋಮ್ಯಾಂಟಿಕ್ ಮತ್ತು ಬಜಾರಿ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಇವರು, ಕನ್ನಡ ಸೇರಿದಂತೆ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿದ್ದರು. 70 ಮತ್ತು 80ರ ದಶಕದಲ್ಲಿ ಕನ್ನಡ ಚಲನಚಿತ್ರರಂಗದ ಯಶಸ್ವಿ ಮತ್ತು ಪ್ರಮುಖ ನಟಿಯಾಗಿದ್ದ ಕುಮಾರಿ ಮಂಜುಳಾ 1986 ಸೆಪ್ಟೆಂಬರ್ 12 ರಂದು ತಮ್ಮ31ನೇ ವಯಸ್ಸಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ನಿಧನರಾದರು.

ಶಂಕರ್ ನಾಗ್

ಕನ್ನಡ ನಾಡು 'ಮರೆಯಲಾಗದ ಮಾಣಿಕ್ಯ' ಎಂದರೆ ಶಂಕರ್ ನಾಗ್ ಅವರು. ಕನ್ನಡ ಭಾಷೆ ಮತ್ತು ಚಿತ್ರರಂಗಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡ ಇವರು ಅಲ್ಪ ಸಮಯದಲ್ಲೇ ಕನ್ನಡಿಗರ ಮನ ಗೆದ್ದಿದ್ದರು. ಚಿತ್ರರಸಿಕರ ಕರಾಟೆ ಕಿಂಗ್​ ಆಗಿದ್ದು ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಕೊಂಡಿದ್ದಾರೆ. ಕನ್ನಡ ಚಿತ್ರರಂಗದ ತಂತ್ರಜ್ಞರು, ನಿರ್ದೇಶಕರು ಈಗಲೂ ಸಹ ಶಂಕ್ರಣ್ಣನನ್ನು ನೆನೆಯುತ್ತಾರೆ. 1990 ಸೆಪ್ಟೆಂಬರ್ 30 ರಂದು ದಾವಣಗೆರೆ ಸಮೀಪ ಸಂಭವಿಸಿದ ಕಾರು ಅಪಘಾತದಲ್ಲಿ ಇವರು ನಿಧನರಾದರು. ದುರಂತ ಘಟಿಸಿದಾಗ ಅವರ ವಯಸ್ಸು ಕೇವಲ 35!.

ಸುನೀಲ್

ಸ್ಯಾಂಡಲ್‌ವುಡ್ ಕಂಡ ಸುಂದರ ನಟ, ಚಾಕ್ಲೆಟ್ ಹೀರೊ ಎಂದರೆ ಸುನೀಲ್. ಸಿನಿರಂಗದಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯತೆಗಳಿಸಿದ್ದ ನಟ ಇವರು. ನಟಿಸಿದ್ದು ಬೆರಳೆಣಿಕೆ ಸಿನಿಮಾವಷ್ಟೇ. ಆದರೆ ಸಂಪಾದಿಸಿದ್ದು ಲಕ್ಷಾಂತರ ಅಭಿಮಾನಿ ಬಳಗ. ಇವರು ಕೇವಲ 30ನೇ ವಯಸ್ಸಿನಲ್ಲಿ ಅಪಘಾತದಲ್ಲಿ ಇಹಲೋಕ ತ್ಯಜಿಸಿದರು. ಚಿತ್ರೀಕರಣ ಮುಗಿಸಿ ನಿರ್ಮಾಪಕ ಮತ್ತು ಮಾಲಶ್ರೀ ಜೊತೆ ಬೆಂಗಳೂರಿಗೆ ಬರುವ ವೇಳೆ 1994 ಜುಲೈ 24 ರಂದು ಬಾಗಲಕೋಟೆಯ ಬಳಿ ಕಾರು ಅಪಘಾತದಲ್ಲಿ ದುರಂತ ಅಂತ್ಯ ಕಂಡರು.

ಸಿಲ್ಕ್ ಸ್ಮಿತಾ

ಆಂಧ್ರ ಪ್ರದೇಶದವರಾದ ಸಿಲ್ಕ್ ಸ್ಮಿತಾ 1979ರಲ್ಲಿ ವಂಡಿಚಕ್ಕರಂ ಎಂಬ ತಮಿಳು ಚಿತ್ರದಲ್ಲಿ ಸಿಲ್ಕ್ ಎಂಬ ಪಾತ್ರವನ್ನು ನಿರ್ವಹಿಸಿ ಎಲ್ಲರ ಗಮನ ಸೆಳೆದಿದ್ದರು. 80ರ ದಶಕದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದು, 17 ವರ್ಷಗಳ ವೃತ್ತಿ ಜೀವನದಲ್ಲಿ ಮಲಯಾಳಂ, ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳ ಚಿತ್ರರಂಗದಲ್ಲಿ 450 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಸ್ಮಿತಾ 1996 ಸೆಪ್ಟೆಂಬರ್ 23 ರಂದು ಚೆನ್ನೈನ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದರು.

ನಿವೇದಿತಾ ಜೈನ್

ನಿವೇದಿತಾ ಜೈನ್ ಅಭಿನಯಿಸಿದ್ದು ಕೇವಲ ಏಳು ಚಿತ್ರಗಳಲ್ಲಿ. ಆದರೆ ಸುಂದರ ವದನ ಮತ್ತು ಅಷ್ಟೇ ಪ್ರತಿಭೆಯಿಂದ ಆಗಿನ ಕಾಲದ ಯುವಕರ ನಿದ್ದೆಗೆಡಿಸಿದ್ದ ನಟಿಯಾಗಿದ್ದರು. ಚಿಕ್ಕಮಗಳೂರಿನ ಚಿಕ್ಕ ಮಲ್ಲಿಗೆ ಎಂದು ಕರೆಯಿಸಿಕೊಳ್ಳುತ್ತಿದ್ದ ಇವರು ಶಿವರಂಜಿನಿ ಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಿದರು. ಬಳಿಕ 1994 ರಲ್ಲಿ 'ಮಿಸ್ ಬೆಂಗಳೂರು' ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. ವಿಪರ್ಯಾಸವೆಂದರೆ 1998 ಮೇ 17 ರಂದು ತಮ್ಮ ಮನೆಯ ಎರಡನೇ ಮಹಡಿಯಿಂದ ಕಾಲು ಜಾರಿ ಬಿದ್ದು ಆಸ್ಪತ್ರೆಗೆ ದಾಖಲಾದರು. ಸುಮಾರು 25 ದಿನಗಳವರೆಗೆ ಕೋಮಾದಲ್ಲೇ ಇದ್ದ ಈ ನಟಿ ನಂತರ ಕೊನೆಯುಸಿರೆಳೆಯುತ್ತಾರೆ. ಸಾವನ್ನಪ್ಪಿದಾಗ ಇವರ ವಯಸ್ಸು ಕೇವಲ 19!.

ವಿಮಾನ ಅಪಘಾತದಲ್ಲಿ ಸೌಂದರ್ಯ ಸಾವು

ಭಾರತ ಚಿತ್ರರಂಗ ಕಂಡ ಸೌಂದರ್ಯವತಿ ಮತ್ತು ಪ್ರತಿಭಾವಂತ ನಟಿ ಎಂದರೆ ಸೌಂದರ್ಯ. ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ 90ರ ದಶಕದ ಟಾಪ್ ನಟಿಯಾಗಿ 100 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಸಾಕಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು. ಸಿನಿಮಾ ರಂಗವಲ್ಲದೆ ರಾಜಕೀಯದಲ್ಲೂ ತೊಡಗಿಕೊಂಡಿದ್ದ ಸೌಂದರ್ಯ ತಮ್ಮ 32ನೇ ವಯಸ್ಸಿನಲ್ಲಿ 2004 ಏಪ್ರಿಲ್ 17 ರಂದು ಬೆಂಗಳೂರು ಸಮೀಪ ಜಕ್ಕೂರಿನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದರು.

ಚಿರಂಜೀವಿ ಸರ್ಜಾ : ಚಿರಂಜೀವಿ ಸರ್ಜಾ 35 ನೇ ವರ್ಷ ವಯಸ್ಸಿಗೆ ಹೃದಯಾಘಾತದಿಂದ ತೀರಿಕೊಂಡರು

ಸಂಚಾರಿ ವಿಜಯ್

ಸ್ಯಾಂಡಲ್​ವುಡ್​ನಲ್ಲಿ ವಿಭಿನ್ನ ನಟನಾ ಶೈಲಿಯ ಮೂಲಕ ಗುರುತಿಸಿಕೊಂಡ ನಟ ಸಂಚಾರಿ ವಿಜಯ್ ಇನ್ನು ನೆನಪು ಮಾತ್ರ. ಕನ್ನಡ ಚಿತ್ರರಂಗದಲ್ಲಿ ಹತ್ತಾರು ವಿಶಿಷ್ಠ ಪಾತ್ರಗಳನ್ನು ಮಾಡಬೇಕಿದ್ದ ಸಂಚಾರಿ ವಿಜಯ್ ಬೈಕ್ ಅಪಘಾತಕ್ಕೆ ತುತ್ತಾಗಿ, ಇಂದು ನಸುಕಿನ ಜಾವ ಇಹಲೋಕ ತ್ಯಜಿಸಿದರು.

ಜೂನ್ 12, 2021 ರಾತ್ರಿ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ವಿಜಯ್ ಅವರನ್ನು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಅಪೊಲೊ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಿದುಳಿನ ಶಸ್ತ್ರಚಿಕಿತ್ಸೆ ಮಾಡಿ ಅನೇಕ ಗಂಟೆಗಳು ಕಳೆದರೂ ಇವರಿಗೆ ಪ್ರಜ್ಞೆ ಬರಲೇ ಇಲ್ಲ. ತದ ನಂತರ ಬ್ರೈನ್ ಡೆಡ್ ಆಗಿ ಮೃತಪಟ್ಟರು. ಸರಳತೆಯ ಸಾಕಾರಮೂರ್ತಿಯಾಗಿದ್ದ ನಟನ ಪ್ರತಿಭೆಗೆ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳು ಸಂದಿವೆ.

ನವೀನ್‌ ಮಯೂರ್

ನಿನಗೋಸ್ಕರ, ಲವಲವಿಕೆ, ನಲ್ಲ, ಸ್ಪರ್ಶ ಚಿತ್ರಗಳ ಮೂಲಕ ಗುರುತಿಸಿಕೊಂಡಿದ್ದ ನವೀನ್ ಮಯೂರ್ 2010 ಅಕ್ಟೋಬರ್ 3 ರಂದು ಜಾಂಡೀಸ್ ಕಾಯಿಲೆಯಿಂದ ನಿಧನರಾದರು.

ರಾಜೇಶ್

ರಿಯಾಲಿಟಿ ಶೋಗಳ ಮೂಲಕ ಜನಪ್ರಿಯತೆಗಳಿಸಿದ್ದ ರಾಜೇಶ್ ಅಕಾಲಿಕ ಮರಣ ಹೊಂದಿದ್ರು. ಕೊನೆಗಾಲದಲ್ಲಿ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ಇವರು ತಮ್ಮ ನಿವಾಸದ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರು.

ಅನಿಲ್, ಉದಯ್​ ದುರಂತ ಅಂತ್ಯ

'ಮಾಸ್ತಿಗುಡಿ' ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ನಡೆದ ಘಟನೆಯನ್ನು ಕನ್ನಡ ಚಿತ್ರರಂಗ ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್‌ನಲ್ಲಿ ತಿಪ್ಪಗೊಂಡನಹಳ್ಳಿ ಕೆರೆಗೆ ಧುಮುಕಿ ಖಳನಟರಾದ ಅನಿಲ್ ಕುಮಾರ್ ಮತ್ತು ಉದಯ್ ಸಾವಿಗೀಡಾದರು.

ಪುನೀತ್ ರಾಜ್ ಕುಮಾರ್: ಇದೀಗ ಪುನೀತ್ ರಾಜ್ ಕುಮಾರ್ 46 ನೇ ವಯಸ್ಸಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Last Updated : Oct 29, 2021, 7:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.