ETV Bharat / headlines

ಈವರೆಗೆ ಭಾರತಕ್ಕೆ ವಿದೇಶಗಳು ಕಳುಹಿಸಿದ ಕೋವಿಡ್​ ಪರಿಹಾರ ಸಾಮಗ್ರಿ ಎಷ್ಟು ಗೊತ್ತಾ?

ಕೆನಡಾ, ಥಾಯ್ಲೆಂಡ್​ , ನೆದರ್ಲ್ಯಾಂಡ್ಸ್, ಆಸ್ಟ್ರಿಯಾ, ಜೆಕ್ ರಿಪಬ್ಲಿಕ್, ಇಸ್ರೇಲ್, ಯುಎಸ್, ಜಪಾನ್, ಮಲೇಷ್ಯಾ, ಯುಎಸ್ (ಗಿಲಿಯಾಡ್), ಯುಎಸ್ (ಸೇಲ್ಸ್‌ಫೋರ್ಸ್) ಮತ್ತು ಥಾಯ್ಲೆಂಡ್​ ನ ಭಾರತೀಯ ಸಮುದಾಯದಿಂದ ಈ ವರೆಗೆ ಪ್ರಮುಖ ವೈದ್ಯಕೀಯ ಸಾಮಗ್ರಿಗಳನ್ನು ಪಡೆದುಕೊಳ್ಳಲಾಗಿದೆ

india-got-3l-remdesivir-vials-over-6k-o2-concentrators-from-abroad

author img

By

Published : May 10, 2021, 4:04 PM IST

ನವದೆಹಲಿ: ಕಳೆದ 13 ದಿನಗಳಲ್ಲಿ ಭಾರತವು ಮೂರು ಲಕ್ಷ ರೆಮ್ಡೆಸಿವಿರ್ ಬಾಟಲ್​​​ಗಳು, 6,738 ಆಮ್ಲಜನಕ ಸಾಂಧ್ರಕಗಳು ಹಾಗೂ 3,856 ಆಮ್ಲಜನಕ ಸಿಲಿಂಡರ್‌ಗಳು ಮತ್ತು 16 ಆಮ್ಲಜನಕ ಉತ್ಪಾದನಾ ಘಟಕಗಳನ್ನು ಜಾಗತಿಕ ಸಮುದಾಯದಿಂದ ಪಡೆದುಕೊಂಡಿದೆ ಎಂದು ಅಧಿಕೃತ ಮಾಹಿತಿ ಹೊರಬಿದ್ದಿದೆ.

ಹಾಗೆಯೇ ಏಪ್ರಿಲ್ 4 ರಿಂದ ಮೇ 8 ರವರೆಗೆ ಒಟ್ಟು 4,668 ವೆಂಟಿಲೇಟರ್‌ಗನ್ನು ಸಹ ಭಾರತಕ್ಕೆ ಕಳುಹಿಸಲಾಗಿದೆ. ಕೆನಡಾ, ಥಾಯ್ಲೆಂಡ್​, ನೆದರ್ಲ್ಯಾಂಡ್ಸ್, ಆಸ್ಟ್ರಿಯಾ, ಜೆಕ್ ರಿಪಬ್ಲಿಕ್, ಇಸ್ರೇಲ್, ಯುಎಸ್, ಜಪಾನ್, ಮಲೇಷ್ಯಾ, ಯುಎಸ್ (ಗಿಲಿಯಾಡ್), ಯುಎಸ್ (ಸೇಲ್ಸ್‌ಫೋರ್ಸ್) ಮತ್ತು ಥಾಯ್ಲೆಂಡ್​​ ದೇಶಗಳು ಭಾರತದ ಪರಿಸ್ಥಿತಿಗೆ ಸ್ಫಂದಿಸಿದ್ದು, ಅದರಲ್ಲೂ ಪ್ರಮುಖವಾಗಿ ಮುಖ್ಯವಾದ ವೈದ್ಯಕೀಯ ವಸ್ತುಗಳಾದ 2,404 ಆಮ್ಲಜನಕ ಸಾಂದ್ರಕಗಳು, 25,000 ರೆಮ್ಡೆಸಿವಿರ್ ಬಾಟಲುಗಳು , 218 ವೆಂಟಿಲೇಟರ್‌ಗಳು, ಮತ್ತು 6,92,208 ಪರೀಕ್ಷಾ ಕಿಟ್‌ಗಳನ್ನು ಈ ದೇಶಗಳಿಂದ ಸ್ವೀಕರಿಸಲಾಗಿದೆ.

ವಿದೇಶಿ ಕೋವಿಡ್ ಪರಿಹಾರ ಸಾಮಗ್ರಿಗಳ ರಶೀದಿ ಮತ್ತು ಹಂಚಿಕೆಗಳ ಮಾಹಿತಿ ಸಂಗ್ರಹ ಮಾಡಲು ಕೇಂದ್ರ ಆರೋಗ್ಯ ಸಚಿವಾಲಯದಲ್ಲಿ ಸಮನ್ವಯ ಕೋಶವನ್ನು ರಚಿಸಲಾಗಿದೆ. ಈ ಕೋಶವು ಏಪ್ರಿಲ್ 26 ರಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಅನ್ನು ಆರೋಗ್ಯ ಸಚಿವಾಲಯವು ಮೇ 2 ರಿಂದ ರೂಪಿಸಲಾಗಿದೆ.

ವಿದೇಶದಿಂದ ಪಡೆದ ಸಾಮಗ್ರಿಗಳ ಪರಿಣಾಮಕಾರಿ ಹಂಚಿಕೆ ಮತ್ತು ತ್ವರಿತ ವಿತರಣೆಗೆ ಕೇಂದ್ರ ಸರ್ಕಾರ ಸುವ್ಯವಸ್ಥಿತ ಕಾರ್ಯವಿಧಾನವನ್ನು ವಿನ್ಯಾಸಗೊಳಿಸಿದೆ. ಇದು ವೈದ್ಯಕೀಯ ಮೂಲಸೌಕರ್ಯಕ್ಕೆ ಪೂರಕವಾಗಿ ಸಹಾಯ ಮಾಡುತ್ತದೆ ಮತ್ತು ಆಸ್ಪತ್ರೆಗೆ ದಾಖಲಾದ ಕೊರೊನಾ ಸೋಂಕಿತರ ವೈದ್ಯಕೀಯ ನಿರ್ವಹಣೆಯನ್ನು ಇನ್ನಷ್ಟು ಬಲಪಡಿಸುತ್ತದೆ.

ಏಮ್ಸ್ ನಿರ್ದೇಶಕ, ಪ್ರೊಫೆಸರ್ ರಂದೀಪ್ ಗುಲೇರಿಯಾ, ವೈದ್ಯಕೀಯ ಸಲಕರಣೆಗಳ ರೂಪದಲ್ಲಿ ವಿದೇಶಿ ಸಹಾಯವನ್ನು ಕಳುಹಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.