ETV Bharat / headlines

ಕೊರೊನಾ ಉಲ್ಬಣ: ಹೆಚ್​ಎಎಲ್​ ಉದ್ಯೋಗಿಗಳಿಗೆ ರಜೆ ಘೋಷಣೆ

author img

By

Published : Apr 23, 2021, 5:05 PM IST

ಕೊರೊನಾ ಸಂಖ್ಯೆ ಹೆಚ್ಚಳ ಹಿನ್ನೆಲೆ ಹೆಚ್​ಎಎಲ್​ ಸಂಸ್ಥೆ ತನ್ನ ಸಿಬ್ಬಂದಿಗಳಿಗೆ ವೇತನ ಸಹಿತ ರಜೆ ಘೋಷಣೆ ಮಾಡಿದೆ. ಬೆಂಗಳೂರಿನಲ್ಲಿ ಏಪ್ರಿಲ್ 23 ರಿಂದ 27 ರವರೆಗೆ, ಲಖನೌ / ಕಾನ್ಪುರದಲ್ಲಿ 21 ರಿಂದ 23 ರವರೆಗೆ, ನಾಸಿಕ್​ನಲ್ಲಿ 21 ರಿಂದ 24 ರವರೆಗೆ ಹೆಚ್​ಎಎಲ್​​ ಮುಚ್ಚಲಾಗಿದೆ.

HAL declares holiday for its employees Bengaluru

ಬೆಂಗಳೂರು: ಎಚ್‌ಎಎಲ್ ತನ್ನ ವಿವಿಧ ಸಂಕೀರ್ಣಗಳು ಮತ್ತು ವಿಭಾಗದಲ್ಲಿ ಕೆಲಸ ಮಾಡುವ ನೌಕರರಿಗೆ ರಜೆ ನೀಡಿದೆ.

ಬೆಂಗಳೂರಿನಲ್ಲಿ ಏಪ್ರಿಲ್ 23 ರಿಂದ 27 ರವರೆಗೆ, ಲಖನೌ / ಕಾನ್ಪುರದಲ್ಲಿ 21 ರಿಂದ 23 ರವರೆಗೆ, ನಾಸಿಕ್​ನಲ್ಲಿ 21 ರಿಂದ 24 ರವರೆಗೆ ಹೆಚ್​ಎಎಲ್​​ ಮುಚ್ಚಲಾಗಿದೆ. ಕೋವಿಡ್​ ಸಂಬಂಧ ಎಚ್ಚರಿಕೆ ವಹಿಸುವಂತೆ ನೌಕರರಿಗೆ ಸೂಚಿಸಲಾಗಿದೆ. ಸಂಸ್ಥೆಯು ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸುತ್ತದೆ ಎಂದು ವಕ್ತಾರ ಗೋಪಾಲ್ ಸುತಾರ್ ಮಾಹಿತಿ ನೀಡಿದ್ದಾರೆ.

ಪಿಎಸ್‌ಯುಗಳ ಕಾರ್ಯನಿರ್ವಹಣೆಗೆ ಸರ್ಕಾರ ಅನುಮತಿ ನೀಡಿತ್ತು. ಆದರೆ, ಕೊರೊನಾ ಸಮುದಾಯ ಹರಡುವಿಕೆ ನಿಯಂತ್ರಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಈ ರಜಾ ದಿನವು ಯಾವುದೇ ಕಾರ್ಮಿಕರ ವೇತನದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕೂಡ ಸ್ಪಷ್ಟಪಡಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.