ETV Bharat / headlines

ತಂದೆಯ ಕೃಪೆ... 2.5 ಕಿ.ಮೀ. ಪ್ರವಾಹ ಈಜಿ, ಬೆಳ್ಳಿ ಪದಕಕ್ಕೆ ಮುತ್ತಿಟ್ಟ ಬೆಳಗಾವಿ ಬಾಕ್ಸರ್​​! - flood in karnataka

ಬೆಳಗಾವಿ ಜಿಲ್ಲೆ ಮನ್ನೂರು ಗ್ರಾಮದ ನಿಶಾನ್​ ಮನೋಹರ್​​ ಕದಂ ಎಂಬ ಬಾಕ್ಸರ್​ ಕ್ರೀಡಾಪಟು 45 ನಿಮಿಷಗಳಲ್ಲಿ 2.5 ಕಿಮೀ ಪ್ರವಾಹದಲ್ಲಿ ಈಜಿ, ಬಾಕ್ಸರ್​ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. .

45 ನಿಮಿಷದಲ್ಲಿ 2.5ಕಿಮೀ ಈಜಿ ಬೆಳ್ಳಿ ಪದಕ ಗೆದ್ದ ಬಾಕ್ಸರ್​​
author img

By

Published : Aug 13, 2019, 5:34 AM IST

Updated : Aug 13, 2019, 7:32 AM IST

ಬೆಂಗಳೂರು/ಬೆಳಗಾವಿ: ಮನಸಿದ್ದರೆ ಮಾರ್ಗ ಎಂಬ ಒಂದು ಮಾತಿದೆ. ಈ ಮಾತನ್ನು ಅದೆಷ್ಟು ಜನ ನಿಜ ಮಾಡ್ತಾರೋ ಗೊತ್ತಿಲ್ಲ. ಆದ್ರೆ ಇಲ್ಲೋರ್ವ ಛಲ ಬಿಡದ ಯುವಕ ಈ ಮಾತನ್ನು ಸಾಬೀತು ಮಾಡಿದ್ದಾನೆ.

ಬೆಳಗಾವಿ ಜಿಲ್ಲೆ ಮನ್ನೂರು ಗ್ರಾಮದ ನಿಶಾನ್​ ಮನೋಹರ್​​ ಕದಂ ಎಂಬ ಬಾಕ್ಸರ್​ ಕ್ರೀಡಾಪಟು 45 ನಿಮಿಷಗಳಲ್ಲಿ 2.5 ಕಿಮೀ ಪ್ರವಾಹದ ನೀರಿನಲ್ಲಿ ಈಜಿ ಹೋಗಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.

boxer-swims-2-dot-5km-in-45-min-to-attend-event-wins-silver
45 ನಿಮಿಷದಲ್ಲಿ 2.5ಕಿಮೀ ಈಜಿ ಬೆಳ್ಳಿ ಪದಕ ಗೆದ್ದ ಬಾಕ್ಸರ್​​

ಹೌದು, ಆಗಸ್ಟ್​​ 7ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬಾಕ್ಸಿಂಗ್​ ಚಾಂಪಿಯನ್​ಶಿಪ್​ ಇತ್ತು. ಆದ್ರೆ ಆ ಸಮಯದಲ್ಲಿ ಬೆಳಗಾವಿ ಸುತ್ತಮುತ್ತ ಭೀಕರ ಪ್ರವಾಹ ಇದ್ದು, ಎಲ್ಲಾ ಹಳ್ಳಿಗಳು ಮುಳುಗಡೆಯಾಗಿದ್ದವು. ಈ ಪ್ರವಾಹದಲ್ಲಿ ಸಿಲುಕಿದ್ದವರ ಪೈಕಿ ಮನ್ನೂರು ನಿವಾಸಿ ನಿಶಾನ್ ಮನೋಹರ್ ಕದಂ ಒಬ್ಬರಾಗಿದ್ದರು.

ಈ ಕ್ರೀಡಾ ಪಟು ಆಗಸ್ಟ್ 7 ರಂದು ಬೆಂಗಳೂರಲ್ಲಿ ನಡೆಯಲಿದ್ದ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಅವರ ಗ್ರಾಮ ನೀರಲ್ಲಿ ಮುಳುಗಿತ್ತು. ಕತ್ತು ಮಟ್ಟದವರೆಗೆ ಆ ಪ್ರದೇಶದಲ್ಲಿ ನೀರು ತುಂಬಿತ್ತು. ಮನ್ನೂರು ಊರಿಗೆ ಸಂಪರ್ಕ ಕಲ್ಪಿಸುತ್ತಿದ್ದ ಮೂರು ರಸ್ತೆಗಳು ಸಹ ಪ್ರವಾಹದಿಂದ ಹಾನಿಯಾಗಿದ್ದವು.

ಆದ್ರೆ ನಿಶಾನ್​​​ ತಂದೆ ಚಾಂಪಿಯನ್​ಶಿಪ್​ನಲ್ಲಿ ಭಾಗವಹಿಸಬೇಕೆಂದಿದ್ದ ಮಗನ ಆಸೆಗೆ ತಣ್ಣಿರೆರೆಚಲಿಲ್ಲ. ಕ್ರೀಡೆಯಲ್ಲಿ ಭಾಗಿಯಾಗೆಂದು ಮನೋಹರ್​ಗೆ ಧೈರ್ಯ ತುಂಬಿದರು. ನಂತರ ಬಾಕ್ಸಿಂಗ್ ಕಿಟ್ ಅನ್ನು ಪ್ಲಾಸ್ಟಿಕ್​ನಲ್ಲಿ ಸುತ್ತಿಕೊಂಡು ಬರೋಬ್ಬರಿ 2.5 ಕಿಮೀ ಈಜಿ ಬೆಳಗಾವಿಗೆ ಸಂಪರ್ಕ ಕಲ್ಪಿಸುವ ರಸ್ತೆ ಬಳಿ ತಲುಪಿದರು. ಇನ್ನು 3.45ಕ್ಕೆ ಈಜಲು ಪ್ರಾರಂಭಿಸಿದ ನಿಶಾನ್​ 4.30ಕ್ಕೆ ರಸ್ತೆ ಸೇರಿದರು. ನಂತರ ತಮ್ಮ ತಂಡದೊಂದಿಗೆ ರೈಲಿನಲ್ಲಿ ಬೆಂಗಳೂರು ಸೇರಿದರು.

ಕೊನೆಗೂ ನಿಶಾನ್​ ಬೆಂಗಳೂರು ತಲುಪಿ ಬಾಕ್ಸಿಂಗ್​ನಲ್ಲಿ ಬೆಳ್ಳಿ ಪದಕವನ್ನು ಗೆದ್ದೇ ತೀರಿದರು. ಇನ್ನು ಈ ಬಗ್ಗೆ ಮಾತನಾಡಿರುವ ನಿಶಾನ್​​, ನಾನು ಈ ದಿನಕ್ಕಾಗಿ ಕಾಯುತ್ತಿದ್ದೆ. ಈ ಸಂದರ್ಭವನ್ನು ಯಾವುದೇ ಕಾರಣಕ್ಕೂ ಮಿಸ್​ ಮಾಡಿಕೊಳ್ಳಲು ನಾನು ಬಯಸಿರಲಿಲ್ಲ ಎಂದು ಹೇಳಿದ್ದಾರೆ. ಪ್ರವಾಹ ಇದ್ದಿದ್ದರಿಂದ ಯಾವ ವಾಹನವೂ ಗ್ರಾಮದೊಳಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಇನ್ನು ಈಜಿ ಹೋಗದ ಹೊರತು ಬೇರೆ ದಾರಿ ಕಾಣಲಿಲ್ಲ ಅಂತ ತಮ್ಮ ಕಷ್ಟವನ್ನು ನಿಶಾನ್​ ಬಿಚ್ಚಿಟ್ಟರು.

ಈ ಬಾರಿ ನನ್ನ ಬ್ಯಾಡ್​​ ಲಕ್​ನಿಂದ ಚಿನ್ನದ ಪದಕವನ್ನು ಮಿಸ್​ ಮಾಡಿಕೊಂಡಿದ್ದೇನೆ. ಆದ್ರೆ ಮುಂದಿನ ಬಾರಿ ನಾನು ಚಿನ್ನದ ಪದಕವನ್ನು ಪಡೆದೇ ತೀರುತ್ತೇನೆ ಎಂದು ನಿಶಾನ್​ ವಿಶ್ವಾಸದ ಮಾತುಗಳನ್ನಾಡಿದ್ದಾರೆ.

Intro:Body:

giri

Conclusion:
Last Updated : Aug 13, 2019, 7:32 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.