ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಅಮರನಾಥ ಯಾತ್ರೆ ಸುಗಮವಾಗಿ ನಡೆಯಲು ಎಲ್ಲ ಕ್ರಮಗಳನ್ನು ಕೈಗೊಂಡಿದೆ ಎಂದು ಭಾರತೀಯ ಸೇನೆ ಹೇಳಿದೆ.
56 ದಿನಗಳ ವಾರ್ಷಿಕ ತೀರ್ಥಯಾತ್ರೆ ಜೂನ್ 28 ರಿಂದ ಪ್ರಾರಂಭವಾಗಲಿದೆ. ಇನ್ನು ಅಮರನಾಥ ದೇಗುಲ ಮಂಡಳಿ (ಎಸ್‌ಎಎಸ್‌ಬಿ) ಏಪ್ರಿಲ್ 22 ರಂದು ತಾತ್ಕಾಲಿಕವಾಗಿ ತೀರ್ಥಯಾತ್ರೆಯ ನೋಂದಣಿ ಸ್ಥಗಿತಗೊಳಿಸಿತ್ತು.
ನಾವು ನಮ್ಮ ಕಡೆಯಿಂದ ಅಮರನಾಥ ಯಾತ್ರೆಗೆ ಸಿದ್ಧರಾಗಿದ್ದೇವೆ ಮತ್ತು ಯಾತ್ರೆಯನ್ನು ಸುಗಮವಾಗಿ ನಡೆಸಲು ಬೇಕಾದ ಎಲ್ಲ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಹೇಳಿದ್ದಾರೆ.