ETV Bharat / entertainment

ಉಂಚೈ ಸಿನಿಮಾ ಬಿಡುಗಡೆ: ಸಿದ್ದಿ ವಿನಾಯಕ ಮಂದಿರಕ್ಕೆ ಮಗನ ಜೊತೆ ಬಿಗ್​ ಬಿ ಭೇಟಿ.. ವಿಶೇಷ ದರ್ಶನ! - ಸೂರಜ್ ಬರ್ಜತ್ಯ ನಿರ್ದೇಶನ

2015ರಲ್ಲಿ ಸಲ್ಮಾನ್​ ಖಾನ್​ ನಟನೆಯ 'ಪ್ರೇಮ್​ ರತನ್​ ಧನ್​ ಪಾಯೋ' ಚಿತ್ರದ ಬಳಿಕ ಸೂರಜ್​ ಬರ್ಜತ್ಯ ಈ ಚಿತ್ರದ ಮೂಲಕ ಕಮ್​ ಬ್ಯಾಕ್​ ಮಾಡಿದ್ದಾರೆ.

ಉಂಚೈ ಸಿನಿಮಾ ಬಿಡುಗಡೆ: ಸಿದ್ದಿ ವಿನಾಯಕ ಮಂದಿರಕ್ಕೆ ಮಗನ ಜೊತೆ ಬಿಗ್​ ಬಿ
http://10.10.50.80:6060//finalout3/odisha-nle/thumbnail/11-November-2022/16901106_339_16901106_1668168058882.png
author img

By

Published : Nov 11, 2022, 6:26 PM IST

ಮುಂಬೈ: ಬಾಲಿವುಡ್​ನ ಚಾರ್ಮಿಂಗ್​ ತಂದೆ - ಮಗ ಆಗಿರುವ ಅಮಿತಾಬ್​ ಬಚ್ಚನ್​ ಮತ್ತು ಅಭಿಷೇಕ್​ ಬಚ್ಚನ್​ ಅವರು ಇಂದು ಮುಂಬೈನ ಸಿದ್ದಿ ವಿನಾಯಕ ಮಂದಿರಕ್ಕೆ ಭೇಟಿ ನೀಡಿದರು. ಬಿಗ್​ ಬಿ ಅವರ ಬಹುನಿರೀಕ್ಷಿತ ಚಿತ್ರ ಉಂಚೈ ಬಿಡುಗಡೆಗೊಂಡಿದ್ದು, ಸಿನಿಮಾದ ಯಶಸ್ಸಿಗೆ ತಂದೆ ಮಗ ದೇವರ ಮೊರೆ ಹೋದರು. ಅಪ್ಪ- ಮಗ ಇಬ್ಬರೂ ಬಿಳಿ ಕುರ್ತಾ ಪೈಜಾಮದ ಜೊತೆ ನೆಹರೂ ಜಾಕೆಟ್​ನಲ್ಲಿ ಕಂಗೊಳಿಸಿದರು.

ಇನ್ನು 'ಉಂಚೈ' ಸಿನಿಮಾವನ್ನು ಸೂರಜ್ ಬರ್ಜತ್ಯ ನಿರ್ದೇಶನ ಮಾಡಿದ್ದು, ಅನುಪಮ್​ ಖೇರ್​​, ಬೊಮ್ಮನ್​ ಇರಾನಿ, ಡ್ಯಾನಿ ಡೆನ್ಜಾಂಗ್ಪಾ, ಪರಿಣಿತಿ ಚೋಪ್ರಾ ಮತ್ತು ನೀನಾ ಗುಪ್ತ ಪ್ರಮುಖ ತಾರಾಗಣದಲ್ಲಿದ್ದಾರೆ. 2015ರಲ್ಲಿ ಸಲ್ಮಾನ್​ ಖಾನ್​ ನಟನೆಯ 'ಪ್ರೇಮ್​ ರತನ್​ ಧನ್​ ಪಾಯೋ' ಚಿತ್ರದ ಬಳಿಕ ಸೂರಜ್​ ಬರ್ಜತ್ಯ ಈ ಚಿತ್ರದ ಮೂಲಕ ಕಮ್​ ಬ್ಯಾಕ್​ ಮಾಡಿದ್ದಾರೆ.

ಉಂಚೈ ಸಿನಿಮಾ ಮೂವರು ಸ್ನೇಹಿತರ ಕುರಿತಾಗಿದೆ. ಅಮಿತಾಬ್​ ಬಚ್ಚನ್​, ಅನುಪಮ್​ ಖೇರ್​ ಮತ್ತು ಬೊಮ್ಮನ್​ ಇರಾನಿ ಮೂವರು ಸ್ನೇಹಿತರು ಮೌಂಟ್​​ ಎವರೆಸ್ಟ್​​ ಶಿಖರ ಏರುವ ಕುರಿತದ ಕಥಾ ಹಂದರವನ್ನು ಈ ಚಿತ್ರ ಹೊಂದಿದೆ. ಸಿನಿಮಾದಲ್ಲಿ ಪರಿಣಿತ ಚೋಪ್ರಾ ಈ ಮೂರು ಸ್ನೇಹಿತರಿಗೆ ಟ್ರಕ್​ ಗೈಡ್​ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ಜೀವನದ ಇಳಿ ಸಂಜೆಯಲ್ಲಿ ನಾಲ್ವರು ಅಮಿತಾಬ್​ ಬಚ್ಚನ್​, ಅನುಪಮ್​ ಖೇರ್​​, ಬೊಮ್ಮನ್​ ಇರಾನಿ, ಡ್ಯಾನಿ ಡೆನ್ಜಾಂಗ್ಪಾ ನಾಲ್ವರು ಗೆಳೆಯರು ಮೌಂಟ್​ ಎವರೆಸ್ಟ್​​ ಏರುವ ಯೋಜನೆ ರೂಪಿಸಿ ಚರ್ಚೆ ಮಾಡುತ್ತಾರೆ. ಆದರೆ, ವಯೋ ಸಹಜದಿಂದಾಗಿ ಡ್ಯಾನಿ ಡೆನ್ಜಾಂಗ್ಪಾ ಸಾವನ್ನಪ್ಪುತ್ತಾರೆ. ಉಳಿದ ಮೂವರು ಸ್ನೇಹಿತರು ಡ್ಯಾನಿ ಚಿತಾ ಭಸ್ಮದೊಂದಿಗೆ ಮೌಂಟ್​ ಎವರೆಸ್ಟ್​ ಏರಲು ಮುಂದಾಗುತ್ತಾರೆ. ಇವರಿಗೆ ಪರಿಣಿತಿ ಚೋಪ್ರಾ ಮಾರ್ಗದರ್ಶನ ಮಾಡುತ್ತಾರೆ. ಈ ವೇಳೆ ಅವರ ಪ್ರಯಾಣಕ್ಕೆ ನೀನಾ ಮತ್ತು ಸಾರಿಕಾ ಕೂಡ ಜೊತೆಯಾಗುತ್ತಾರೆ.

ಇದನ್ನೂ ಓದಿ: ಬಣ್ಣದ ಲೋಕದಿಂದ ಬಿಡುವು ಮಾಡಿಕೊಂಡು ತಾಯ್ತನ ಅನುಭವಿಸುತ್ತಿರುವ ಸೆಲೆಬ್ರಿಟಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.