ಮುಂಬೈ: ಭಾರತ ಕಂಡ ಅತ್ಯುತ್ತಮ ಹಾಸ್ಯನಟ ರಾಜು ಶ್ರೀವಾಸ್ತವ್ ಅವರ ಸಾವಿನ ಸುದ್ದಿಯನ್ನು ಮರೆಯುವ ಮುನ್ನವೇ ಮನರಂಜನಾ ಕ್ಷೇತ್ರಕ್ಕೆ ಮತ್ತೊಂದು ಆಘಾತ ಎದುರಾಗಿದೆ. ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ (The Great Indian Laughter Challenge) ಶೋ ಖ್ಯಾತಿಯ ಪರಾಗ್ ಕನ್ಸಾರಾ (51) ಬುಧವಾರ ನಿಧನರಾಗಿದ್ದಾರೆ. ಪರಾಗ್ ಅವರ ಗೆಳೆಯ ಮತ್ತು ಸ್ಯ್ಟಾಂಡ್ ಅಪ್ ಕಾಮಿಡಿಯನ್ ಸುನೀಲ್ ಪಾಲ್ ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.
ಹಲೋ ಫ್ರೆಂಡ್ಸ್, ಹಾಸ್ಯ ಮನರಂಜನೆಯ ವಲಯದಿಂದ ಮತ್ತೊಂದು ಆಘಾತಕಾರಿ ಹಾಗೂ ದುಃಖದ ಸುದ್ದಿ ಬಂದಿದೆ. ಲಾಫ್ಟರ್ ಚಾಲೆಂಜ್ನ ಕೋ-ಕಂಟೆಸ್ಟಂಟ್ ಕನ್ಸಾರಾ ಜಿ ವಿಧಿವಶರಾಗಿದ್ದಾರೆ. ರಿವರ್ಸ್ ಥಿಂಕಿಂಗ್ ಕಾಮಿಡಿಯ ಮೂಲಕ ನಮ್ಮನ್ನೆಲ್ಲ ನಗಿಸಿ ನಲಿಸುತ್ತಿದ್ದ ಪರಾಗ್ ಇನ್ನಿಲ್ಲ. ಇಡೀ ಜಗತ್ತನ್ನೇ ನಗಿಸುವವರ ಕುಟುಂಬಕ್ಕೆ ಏಕಿಂಥ ಸ್ಥಿತಿ ಬರುತ್ತದೆ ಎಂದು ತಿಳಿಯುವುದಿಲ್ಲ. ಕಾಮಿಡಿಯ ಗಟ್ಟಿ ಸ್ತಂಭಗಳು ಒಂದೊಂದಾಗಿ ನಮ್ಮನ್ನು ಬಿಟ್ಟು ಹೋಗುತ್ತಿವೆ ಎಂದು ಸುನೀಲ್ ಪಾಲ್ ಇನ್ ಸ್ಟಾ ನಲ್ಲಿ ಬರೆದಿದ್ದಾರೆ.
ರಾಜು ಶ್ರೀವಾಸ್ತವ್, ದೀಪೇಶ್ ಭಾನ್, ಅಶೋಕ್ ಸುಂದ್ರಾನಿ ಮತ್ತು ಅನಂತ್ ಶ್ರೀಮಣಿ ಸೇರಿದಂತೆ ಇತ್ತೀಚೆಗೆ ಅಗಲಿದ ಇತರ ಹಾಸ್ಯನಟರನ್ನು ಕೂಡ ಸುನೀಲ್ ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ತಂದೆ ಬಗ್ಗೆ ಹಾಸ್ಯ..ಕೋಪಗೊಂಡು ಶೋನಿಂದ ಹೊರನಡೆದ ನಟ ಅಭಿಷೇಕ್ ಬಚ್ಚನ್