ETV Bharat / entertainment

ಭಾತರದ ಲೋಕಲ್​ ರೈಲಿನಲ್ಲಿ "ದಿ ಕ್ವಿಕ್ ಸ್ಟೈಲ್" ಡ್ಯಾನ್ಸ್​: ಫಿದಾ ಆದ ಅಭಿಮಾನಿಗಳು.. - ETV Bharath Kannada news

ಮುಂಬೈ ಲೋಕಲ್​ ಟ್ರೈನ್​ನಲ್ಲಿ ದಿ ಕ್ವಿಕ್ ಸ್ಟೈಲ್ ನಾರ್ವೇಯ ಡ್ಯಾನ್ಸ್ - ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್​ - ವಿರಾಟ್​ ಜೊತೆಗಿನ ರೀಲ್ಸ್​ಗೆ ಅನುಷ್ಕಾ ಕಮೆಂಟ್​

Norwegian dance group The Quick Style grooves in Mumbai local train
ದಿ ಕ್ವಿಕ್ ಸ್ಟೈಲ್
author img

By

Published : Mar 15, 2023, 3:55 PM IST

ಹೈದರಾಬಾದ್: ಕಳೆದ ವರ್ಷ ಅಂತರ್ಜಾಲದಲ್ಲಿ ಜನರ ಮೆಚ್ಚುಗೆಗ ಪಾತ್ರರಾಗಿದ್ದ ನಾರ್ವೆಯ ದಿ ಕ್ವಿಕ್ ಸ್ಟೈಲ್ ಎಂಬ ಡ್ಯಾನ್ಸ್ ಗ್ರೂಪ್​ ಮುಂಬೈನಲ್ಲಿ ರೀಲ್ಸ್​ ಮಾಡಿ ಹಾಕಿದೆ. ಈ ರೀಲ್ಸ್​ ಫುಲ್​​ ವೈರಲ್​ ಆಗುತ್ತಿದೆ. ಕಳೆದ ವರ್ಷ ಬಾಲಿವುಡ್​ ಸಿನಿಮಾಗಳ ಹಾಡಿಗೆ ಈ ನಾರ್ವೆಯ ಕ್ವಿಕ್ ಸ್ಟೈಲ್ ಎಂಬ ಡ್ಯಾನ್ಸ್​ ಗ್ರೂಪ್​ ಮಾಡಿದ್ದ ನೃತ್ಯಗಳು ವೈರಲ್​ ಆಗಿದ್ದವು ಮತ್ತು ಈ ತಂಡ ಹೆಚ್ಚಿನ ಅಭಿಮಾನಿಗಳನ್ನು ಗಳಿಸಿತ್ತು

ತನು ವೆಡ್ಸ್ ಮನು ಚಿತ್ರದ ಸಾದಿ ಗಲ್ಲಿ ಮತ್ತು ಬಾರ್ ಬಾರ್ ದೇಖೋ ಚಿತ್ರದ ಕಾಲಾ ಚಶ್ಮಾ ಮುಂತಾದ ಜನಪ್ರಿಯ ಹಾಡುಗಳಿಗೆ ನೃತ್ಯ ಮಾಡುತ್ತಿದ್ದ ತಂಡ ಮುಂಬೈನ ಲೋಕಲ್​ ಟ್ರೈನ್​ನಲ್ಲಿ ಕುಣಿದು ಕುಪ್ಪಳಿಸಿದ್ದ ವಿಡಿಯೋ ಮಾಡಿದ್ದು, ಇನ್​ಸ್ಟಾ ಖಾತೆಯಲ್ಲಿ ಈ ನೃತ್ಯವನ್ನು ಹಂಚಿಕೊಂಡಿದ್ದಾರೆ. ನಗರದ ಲೋಕಲ್ ರೈಲಿನಲ್ಲಿ ಲೆಕೆ ಪೆಹ್ಲಾ ಪೆಹ್ಲಾ ಪ್ಯಾರ್ ಎಂಬ ಹಾಡಿಗೆ ಗ್ರೂಪ್​ ಡ್ಯಾನ್ಸ್​ ಮಾಡಿತ್ತು.

ಈ ನೃತ್ಯದ ಪೋಸ್ಟ್​ನ್ನು ನಾರ್ವೆಯ ಕ್ವಿಕ್ ಸ್ಟೈಲ್ ತಂಡ ಭಾರತದ ಲೋಕಲ್​ ರೈಲಿನಲ್ಲಿ ನಮ್ಮ ಮೊದಲ ಪ್ರದರ್ಶನ ಎಂದು ಬರೆದುಕೊಂಡು ಮಂಬೈಗೆ ಹ್ಯಾಷ್​ ಟ್ಯಾಗ್​ ಮಾಡಿ ಹಂಚಿಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಕಾಣಿಸಿಕೊಳ್ಳುತ್ತಿದ್ದಂತೆ ವೈರಲ್​ ಆಗಿದೆ. ಅಲ್ಲದೇ ಅಭಿಮಾನಿಗಳು ಕಮೆಂಟ್​ಗಳಲ್ಲಿ ಮುಂಬೈನಲ್ಲಿ ಇದ್ದಿರಾ? ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ.

ಒಬ್ಬ ಬಳಕೆದಾರ, "ಏನು!!! ಅವರು ಮುಂಬೈನಲ್ಲಿದ್ದಾರೆ? ನಾನು ಆ ಲೋಕಲ್ ರೈಲಿನಲ್ಲಿರಲು ಬಯಸುತ್ತೇನೆ." "ಲೋಕಲ್ ಮುಂಬೈ ರೈಲಿನಲ್ಲಿ ನೀವು ಹೇಗೆ ಜಾಗವನ್ನು ಪಡೆದುಕೊಂಡಿದ್ದೀರಿ?!?!" ಇನ್ನೊಬ್ಬ ಫಾಲೋವರ್​ ಪ್ರಶ್ನೆ ಮಾಡಿದ್ದಾನೆ. ಮುಂಬೈ ಇಂಡಿಯನ್ಸ್​​ ತಂಡದ ಇನ್​ಸ್ಟಾ ಖಾತೆಯಿಂದ ಕಮೆಂಟ್​ ಬಂದಿದ್ದು, ಮುಂಬೈ ಲೋಕಲ್​ + ಕ್ವಿಕ್ ಸ್ಟೈಲ್ = ಅದ್ಭುತ ಅನುಭವ ಎಂದು ಬರೆದುಕೊಂಡಿದ್ದಾರೆ.

ಇತ್ತೀಚೆಗೆ, ಮುಂಬೈನಲ್ಲಿ ವಿರಾಟ್ ಕೊಹ್ಲಿಯೊಂದಿಗೆ ಸಿಬ್ಬಂದಿಯನ್ನು ಗುರುತಿಸಲಾಯಿತು, ಅದರ ಬಗ್ಗೆ ಸ್ವತಃ ಕ್ರಿಕೆಟಿಗರು ತಮ್ಮ ಟ್ವಿಟರ್​ ಖಾತೆಯಲ್ಲಿ "ನಾನು ಮುಂಬೈನಲ್ಲಿ ಯಾರನ್ನು ಭೇಟಿಯಾಗಿದ್ದೇನೆ ಎಂದು ಊಹಿಸಿ" ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿ, ನೃತ್ಯ ತಂಡವನ್ನು ಟ್ಯಾಗ್ ಮಾಡಿದ್ದಾರೆ. ಕ್ವಿಕ್ ಸ್ಟೈಲ್ ನಂತರ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ಗೆ ತೆಗೆದುಕೊಂಡು ವಿರಾಟ್ ಕೊಹ್ಲಿಯನ್ನು ಒಳಗೊಂಡ ಡ್ಯಾನ್ಸ್ ರೀಲ್ ಅನ್ನು ಪೋಸ್ಟ್ ಮಾಡಿದೆ. ವಿರಾಟ್ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾ ಈ ರೀಲ್ ಬಗ್ಗೆ ಫೈರ್ ಎಮೋಜಿಗಳೊಂದಿಗೆ ಕಾಮೆಂಟ್ ಮಾಡಿದ್ದಾರೆ.

ವಿರಾಟ್​ ಜೊತೆಗೆ ಮಾಡಿರುವ ಡ್ಯಾನ್ಸ್​ನ ವಿಡಿಯೋದಲ್ಲಿ, ಗುಂಪಿನ ಡ್ಯಾನ್ಸರ್​ ಒಬ್ಬ ಕ್ರಿಕೆಟ್ ಬ್ಯಾಟ್ ಅನ್ನು ಎತ್ತಿಕೊಂಡು ಅದನ್ನು ಏನು ಮಾಡಬೇಕು ಎಂದು ಗೊಂದಲದಲ್ಲಿ ನೋಡುತ್ತಿರುತ್ತಾನೆ, ಆಗ ವಿರಾಟ್ ಕೊಹ್ಲಿ ಬಂದು ಬ್ಯಾಟ್​ ಹೇಗೆ ಹಿಡಿಯುವುದು ಎಂದು ತೋರಿಸುತ್ತಾರೆ. ನಂತರ ವಿರಾಟ್​ ಜೊತೆಗೆ ಕ್ವಿಕ್ ಸ್ಟೈಲ್ ಗ್ರೂಪ್​ ಎಲ್ಲ ಸೇರಿಕೊಂಡು ಡ್ಯಾನ್ಸ್​ ಮಾಡುತ್ತಾರೆ. ಈ ಡ್ಯಾನ್ಸ್​ನಲ್ಲಿ ವಿರಾಟ್​ ಬ್ಯಾಟ್​ ಹಿಡಿದು ಬುಜ ಕುಣಿಸಿದ್ದಾರೆ.

ಇದನ್ನೂ ಓದಿ: ನನ್ನ ಜೀವನದ ಅತ್ಯುತ್ತಮ ಕ್ಷಣ.. ಆಸ್ಕರ್​ ಬಗ್ಗೆ ಜೂ. ಎನ್​ಟಿಆರ್​ ಹರ್ಷ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.