ETV Bharat / entertainment

ನಿಕರಾಗುವಾ ಸುಂದರಿಗೆ 'ಮಿಸ್‌ ಯುನಿವರ್ಸ್‌' ಕಿರೀಟ​: ಭಾರತದ ಪ್ರತಿಭೆ ಶ್ವೇತಾ ಶಾರದಾಗೆ ನಿರಾಶೆ - ಶ್ವೇತಾ ಶಾರದಾ

Miss Universe 2023: 84 ಸ್ಪರ್ಧಿಗಳ ಪೈಕಿ ನಿಕರಾಗುವಾದ ಶೆನ್ನಿಸ್ ಪಲಾಸಿಯೊಸ್ ಪ್ರತಿಷ್ಠಿತ ಮಿಸ್‌ ಯುನಿವರ್ಸ್‌ 2023 ವಿಜೇತರಾಗಿ ಹೊರಹೊಮ್ಮಿದರು. ಭಾರತದ ಪ್ರತಿನಿಧಿ ಶ್ವೇತಾ ಶಾರದಾ ಅಗ್ರ ಹತ್ತರೊಳಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ.

Shweta Sharda
ಶ್ವೇತಾ ಶಾರದಾ
author img

By ETV Bharat Karnataka Team

Published : Nov 19, 2023, 1:26 PM IST

ಸ್ಯಾನ್ ಸಾಲ್ವಡಾರ್‌ನ ಎಲ್ ಸಾಲ್ವಡಾರ್‌ನಲ್ಲಿರುವ ಜೋಸ್ ಅಡಾಲ್ಫೊ ಪಿನೆಡಾ ಅರೆನಾದಲ್ಲಿ ನಡೆದ ಮಿಸ್‌ ಯುನಿವರ್ಸ್‌ 2023 ಈವೆಂಟ್​ನಲ್ಲಿ ನಿಕರಾಗುವಾದ ಶೆನ್ನಿಸ್ ಪಲಾಸಿಯೊಸ್ ಪ್ರತಿಷ್ಟಿತ ಕಿರೀಟ ಮುಡಿಗೇರಿಸಿಕೊಂಡರು. 72ನೇ ಮಿಸ್‌ ಯೂನಿವರ್ಸ್‌ ಸ್ಪರ್ಧೆಯಲ್ಲಿ 84 ರಾಷ್ಟ್ರಗಳ ಸ್ಪರ್ಧಿಗಳು ಭಾಗವಹಿಸಿದ್ದರು. ಈ ಪೈಕಿ ಟಾಪ್ 20ರಲ್ಲಿ ಯಶಸ್ವಿಯಾಗಿ ಸ್ಥಾನ ಪಡೆದ ಭಾರತದ ಪ್ರತಿನಿಧಿ ಶ್ವೇತಾ ಶಾರದಾ ಅವರು ಟಾಪ್ 10 ಲಿಸ್ಟ್​ನಿಂದ ಹೊರಬಿದ್ದರು.

ಭಾರತ ಪ್ರತಿನಿಧಿಸಿರುವ 23 ವರ್ಷದ ಶ್ವೇತಾ ಶಾರದಾ ಮೂಲತಃ ಚಂಡೀಗಢದವರು. ಕಳೆದ ಆಗಸ್ಟ್‌ನಲ್ಲಿ ನಡೆದ ಮಿಸ್‌ ದಿವಾ ಯುನಿವರ್ಸ್‌ 2023 ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಜೊತೆಗೆ ಮಿಸ್‌ ಬಾಡಿ ಬ್ಯೂಟಿಫ‌ುಲ್‌, ಮಿಸ್‌ ಟ್ಯಾಲೆಂಟೆಡ್‌, ಟಾಪ್‌ 5 ಮಿಸ್‌ ಫೋಟೋಜೆನಿಕ್‌, ಟಾಪ್‌ 6 ಮಿಸ್‌ ರ್‍ಯಾಂಪ್‌ ವಾಕ್‌ ಟೈಟಲ್‌ ಕೂಡ ಇವರು ಗೆದ್ದುಕೊಂಡಿದ್ದಾರೆ.

ಶ್ವೇತಾ ಶಾರದಾ ರೂಪದರ್ಶಿ, ನರ್ತಕಿಯಾಗಿ ಕೂಡ ಗುರುತಿಸಿಕೊಂಡಿದ್ದಾರೆ. ಹಿಂದಿಯ ಪಾಪ್ಯುಲರ್ ಶೋಗಳಾದ ಡ್ಯಾನ್ಸ್ ದೀವಾನೆ, ಡ್ಯಾನ್ಸ್ ಪ್ಲಸ್ ಮತ್ತು ಡ್ಯಾನ್ಸ್ ಇಂಡಿಯಾ ಡ್ಯಾನ್ಸ್‌ನಲ್ಲಿ ಭಾಗವಹಿಸಿ ಜನಪ್ರಿಯತೆ ಸಂಪಾದಿಸಿದ್ದಾರೆ.

ಇದನ್ನೂ ಓದಿ: ಭಾರತದ ಸೌಂದರ್ಯ ಪಸರಿಸಿದ ಶ್ವೇತಾ ಶಾರ್ದಾ: ಆಕರ್ಷಕ ವೇಷಭೂಷಣದಲ್ಲಿ ಭುವನ ಸುಂದರಿ ಸ್ಪರ್ಧಿಗಳು

ಎಲ್ ಸಾಲ್ವಡಾರ್‌ನಲ್ಲಿ ನಡೆದ ಈ ಭವ್ಯವಾದ ಈವೆಂಟ್ ಅನ್ನು ಮಾಜಿ ವಿಶ್ವ ಸುಂದರಿ ಒಲಿವಿಯಾ ಕಲ್ಪೋ ಹೋಸ್ಟ್ ಮಾಡಿದರು. ಅವರಿಗೆ ಜೀನಿ ಮಾಯ್ ಮತ್ತು ಮರಿಯಾ ಮೆನೌನೊಸ್ ಸಹ-ಬೆಂಬಲಿಗರಾಗಿ ಕಾರ್ಯಕ್ರಮ ಮುನ್ನಡೆಸಿದರು. ಜಾಗತಿಕ ಗಮನವನ್ನು ಸೆಳೆಯುತ್ತಿರುವ ಮಿಸ್ ಯೂನಿವರ್ಸ್ ಈವೆಂಟ್​ ಮಹಿಳೆಯರ ಸೌಂದರ್ಯ ಮತ್ತು ಬುದ್ಧಿವಂತಿಕೆಯನ್ನು ಎತ್ತಿಹಿಡಿಯುತ್ತಿದೆ. ಎಲ್ ಸಾಲ್ವಡಾರ್‌ನ ಅಧ್ಯಕ್ಷ ನಯೀಬ್ ಬುಕೆಲೆ ಕೂಡ ಈ ವರ್ಷದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: ಭುವನ ಸುಂದರಿ ಸ್ಪರ್ಧೆ 2023 : ಭಾರತ ಪ್ರತಿನಿಧಿಸುತ್ತಿರುವ ಶ್ವೇತಾ ಶಾರ್ದಾ ಆಕರ್ಷಕ ಫೋಟೋಗಳಿಲ್ಲಿವೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.