ETV Bharat / entertainment

'ನೈಟ್ ಕರ್ಫ್ಯೂ' ಮೂಲಕ‌ ಮತ್ತೆ ಬಣ್ಣದ ಲೋಕಕ್ಕೆ ಮಾಲಾಶ್ರೀ ಕಮ್‌ ಬ್ಯಾಕ್ - ನಟಿ ರಂಜನಿ ರಾಘವನ್

ನಟಿ ಮಾಲಾಶ್ರೀ 'ನೈಟ್ ಕರ್ಫ್ಯೂ' ಸಿನಿಮಾ ಮೂಲಕ‌ ಮತ್ತೆ ಬಣ್ಣದ ಲೋಕಕ್ಕೆ ಕಮ್‌ ಬ್ಯಾಕ್ ಮಾಡುತ್ತಿದ್ದಾರೆ. ಇದೊಂದು ಆ್ಯಕ್ಷನ್-ಥ್ರಿಲ್ಲರ್ ಚಿತ್ರವಾಗಿದ್ದು, ಮೆಡಿಕಲ್ ಮಾಫಿಯಾ ಕುರಿತಾದ ಕಥೆ ಒಳಗೊಂಡಿದೆ. ಈ ಹಿಂದೆ 'ಪುಟಾಣಿ ಸಫಾರಿ' ನಿರ್ದೇಶನ ಮಾಡಿದ್ದ ರವೀಂದ್ರ ವೆಂಶಿ ಈ ಚಿತ್ರಕ್ಕೆ ಕಥೆ ಬರೆದು, ‌ನಿರ್ದೇಶನ ಮಾಡಿದ್ದಾರೆ.

ನೈಟ್ ಕರ್ಫ್ಯೂ
ನೈಟ್ ಕರ್ಫ್ಯೂ
author img

By

Published : Jun 2, 2022, 7:51 AM IST

ಕನ್ನಡ ಚಿತ್ರರಂಗದಲ್ಲಿ ಕನಸಿನ‌ ರಾಣಿಯಾಗಿ ಸಿಲ್ವರ್ ಸ್ಕ್ರೀನ್ ಮೇಲೆ‌ ವಿಜೃಂಭಿಸಿದ ನಟಿ ಮಾಲಾಶ್ರೀ, ಕೊರೊನಾ ವೇಳೆ ಪತಿ ರಾಮ್ ಅವರನ್ನ ಕಳೆದುಕೊಂಡರು. ಜೀವನದಲ್ಲಿ ಉತ್ಸಾಹ ಕಳೆದುಕೊಳ್ಳದೆ ಇದೀಗ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿದ್ದಾರೆ. ಹೌದು, 'ನೈಟ್ ಕರ್ಫ್ಯೂ' ಸಿನಿಮಾ ಮೂಲಕ‌ ಮತ್ತೆ ಬಣ್ಣದ ಲೋಕಕ್ಕೆ ಕಮ್‌ ಬ್ಯಾಕ್ ಮಾಡುತ್ತಿದ್ದಾರೆ.

ಬಹುತೇಕ ಸಿನಿಮಾ ಚಿತ್ರೀಕರಣ ಮುಗಿಸಿರೋ ಚಿತ್ರತಂಡ, ಈಗ ಅಧಿಕೃತವಾಗಿ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಿದ್ದಾರೆ. ಈ ವೇಳೆ ನಟಿ ಮಾಲಾಶ್ರೀ, ರಂಜನಿ ರಾಘವನ್, ನಟ ಪ್ರಮೋದ್ ಶೆಟ್ಟಿ, ಬಲರಾಜ್ವಾಡಿ, ವರ್ಧನ್ ,ಅಶ್ವಿನಿ, ನಿರ್ದೇಶಕ ರವೀಂದ್ರ ವೆಂಶಿ ಉಪಸ್ಥಿತಿ ಇದ್ದರು. ಇದೊಂದು ಆಕ್ಷನ್-ಥ್ರಿಲ್ಲರ್ ಚಿತ್ರವಾಗಿದ್ದು ಮೆಡಿಕಲ್ ಮಾಫಿಯಾ ಕುರಿತಾದ ಕಥೆ ಒಳಗೊಂಡಿದೆ. ಈ ಹಿಂದೆ 'ಪುಟಾಣಿ ಸಫಾರಿ' ನಿರ್ದೇಶನ ಮಾಡಿದ್ದ ರವೀಂದ್ರ ವೆಂಶಿ ಈ ಚಿತ್ರಕ್ಕೆ ಕಥೆ ಬರೆದು, ‌ನಿರ್ದೇಶನ ಮಾಡಿದ್ದಾರೆ.

ನೈಟ್ ಕರ್ಫ್ಯೂ ಚಿತ್ರತಂಡದ ಮಾಧ್ಯಮಗೋಷ್ಟಿ

ಸಿನಿಮಾ ಕುರಿತು ಮೊದಲಿಗೆ ಮಾತನಾಡಿದ ನಟಿ ರಂಜನಿ ರಾಘವನ್, ಈ‌ ಚಿತ್ರದಲ್ಲಿ ನಾನು ವೈದ್ಯೆ ಪಾತ್ರ ಮಾಡಿದ್ದೇನೆ. ಫಸ್ಟ್ ಟೈಮ್ ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಅವರ ಜೊತೆ ಸ್ಕ್ರೀನ್ ಹಂಚಿಕೊಂಡಿರುವುದನ್ನ ಮರೆಯಲು ಸಾಧ್ಯವಿಲ್ಲ ಎಂದರು.

ನಂತರ ಮಾತನಾಡಿದ ಮಾಲಾಶ್ರೀ, ಈ ಸಿನಿಮಾ ನನಗೆ ಹೊಸ ಚೈತನ್ಯ ಕೊಡ್ತು. ಯಾಕೆಂದರೆ, ಇವರೆಲ್ಲರೂ ನನ್ನನ್ನ ದುರ್ಗಿ ಮಾಡಿದ್ದಾರೆ. ಇದು ಕೊರೊನಾ ಟೈಮ್​ನಲ್ಲಿ ಹೇಳಿದ ಕಥೆ. ನಾನು ಈ ಕಥೆಯನ್ನ ಮಾಡಬಾರದು ಅಂತ ಅಂದುಕೊಂಡಿದ್ದೆ. ಈ ಚಿತ್ರದಲ್ಲಿ ಎರಡು ವಿಷಯಗಳು ಜನರಿಗೆ ಇಷ್ಟ ಆಗುತ್ತದೆ. ಸಿನಿಮಾದಲ್ಲಿ ಆ್ಯಕ್ಷನ್ ಸಿಕ್ವೇನ್ಸ್ ಗಳು ಬಹಳ ವಿಭಿನ್ನವಾಗಿವೆ. ಈ ಸಿನಿಮಾ ನೋಡಿ ಬಂದ ಪ್ರೇಕ್ಷಕರು, ಅದನ್ನು ಒಪ್ಪಿಕೊಳ್ಳುತ್ತಾರೆ, ಈ ಸಿನಿಮಾ ನನಗೆ ಒಳ್ಳೆಯ ಕಮ್ ಬ್ಯಾಕ್ ಆಗುತ್ತದೆ ಅಂತ ನಂಬಿದ್ದೀನಿ ಎಂದರು.

'ನೈಟ್ ಕರ್ಫ್ಯೂ' ಸಿನಿಮಾ ಒಪ್ಪಿಕೊಳ್ಳುವುದಕ್ಕೆ ಕಾರಣ ನನ್ನ ಮಕ್ಕಳು. ಯಾಕೆಂದ್ರೆ, ರಾಮು ಇಲ್ಲದ‌ ಮೇಲೆ ನನಗೆ ನನ್ನ ಮಕ್ಕಳು ಈ ಕಥೆಯನ್ನ ಕೇಳಿ, ಅಮ್ಮ ನೀನು ಈ ಸಿನಿಮಾ ಮಾಡು ಅಂತ ಹೇಳಿದರು. ಅದಕ್ಕೆ ಒಪ್ಪಿಕೊಂಡೆ. ಮುಂದಿನ ದಿನಗಳಲ್ಲಿ ನನ್ನ ಮಗಳು ಸಹ ಚಿತ್ರರಂಗಕ್ಕೆ ಬರುವುದು ಖಚಿತ ಎಂದರು.

ಈ ಚಿತ್ರದಲ್ಲಿ ಖಳ‌ನಟರಾಗಿ ಪ್ರಮೋದ್ ಶೆಟ್ಟಿ, ಬಲ ರಾಜ್ವಾಡಿ ಕಾಣಿಸಿಕೊಂಡಿದ್ದಾರೆ. ನಟ ವರ್ಧನ್, ಅಶ್ವಿನಿ, ಸಾಧು ಕೋಕಿಲ ಹಾಗು ರಂಗಾಯಣ ರಘು ವಿಭಿನ್ನ ಪಾತ್ರ ಮಾಡಿದ್ದಾರೆ. ಸ್ವರ್ಣಗಂಗಾ ಫಿಲಂಸ್ ಬ್ಯಾನರ್ ಅಡಿಯಲ್ಲಿ ಬಿ.ಎಸ್ ಚಂದ್ರಶೇಖರ್ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಪ್ರಮೋದ್ ಭಾರತೀಯ ಸಿನಿಮಾಟೋಗ್ರಫಿ ಇದೆ.

ಇದನ್ನೂ ಓದಿ: ಯೋಗರಾಜ್ ಭಟ್ ನಿರ್ಮಾಣದ ಪದವಿಪೂರ್ವ ಚಿತ್ರದ ಹಾಡುಗಳಿಗೆ ವಿಜಯಪ್ರಕಾಶ್​ ಧ್ವನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.