ETV Bharat / entertainment

ಅಪಾರ್ಟ್​ಮೆಂಟ್​​ನಲ್ಲಿ ಶವವಾಗಿ ಪತ್ತೆಯಾದ ಯುವ ನಟಿ.. ಖಿನ್ನತೆಗೊಳಗಾಗಿ ಆತ್ಮಹತ್ಯೆ ಶಂಕೆ! - ಬಿದಿಶಾ ಡಿ ಮಜುಂದಾರ್ ಆತ್ಮಹತ್ಯೆ

ಪ್ರಸಿದ್ಧ ನಟಿ ಪಲ್ಲವಿ ಡೇ ಅವರ ಅನುಮಾನಾಸ್ಪದ ಸಾವಿನ ಬೆನ್ನಲ್ಲೇ ಇದೀಗ ಮತ್ತೋರ್ವ ಯುವ ನಟಿ ಅಪಾರ್ಟ್​ಮೆಂಟ್​​ನಲ್ಲಿ ಶವವಾಗಿ ಪತ್ತೆಯಾಗಿದ್ದು, ಬೆಂಗಾಳಿ ಚಿತ್ರರಂಗ ಶಾಕ್​​ಗೊಳಗಾಗಿದೆ.

Model Bidisha Majumder Found Dead
Model Bidisha Majumder Found Dead
author img

By

Published : May 26, 2022, 3:21 PM IST

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಕೇವಲ 21 ವರ್ಷದ ರೂಪದರ್ಶಿ, ನಟಿ ಬಿದಿಶಾ ಡಿ ಮಜುಂದಾರ್​​ ತಾವು ವಾಸವಾಗಿದ್ದ ಅಪಾರ್ಟ್​​ಮೆಂಟ್​​ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನಟಿ ಆತ್ಮಹತ್ಯೆಗೆ ಶರಣಾಗಿರುವ ಸ್ಥಳದಲ್ಲಿ ಡೆತ್​ನೋಟ್​ ಲಭ್ಯವಾಗಿದ್ದು, ಪೊಲೀಸರು ಮೃತದೇಹವನ್ನ ವಶಕ್ಕೆ ಪಡೆದುಕೊಂಡು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.

ಕಳೆದ ನಾಲ್ಕು ತಿಂಗಳಿಂದ ಬಾಡಿಗೆ ಅಪಾರ್ಟ್​​ಮೆಂಟ್​​ನಲ್ಲಿ ನಟಿ ವಾಸವಾಗಿದ್ದು, ಮೇ. 25ರ ಬುಧವಾರ ಸಂಜೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಬಾಗಿಲು ಮುರಿದು ರೂಮ್​​ನೊಳಗೆ ಹೋಗಿ ನೋಡಿದಾಗ ನಟಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಘಟನಾ ಸ್ಥಳಕ್ಕೆ ಈಗಾಗಲೇ ಬ್ಯಾರಕ್​ಪುರ ಪೊಲೀಸರು ಭೇಟಿ ನೀಡಿದ್ದು, ಪ್ರಕರಣದ ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಅನನ್ಯ ಗುಹಾ ಕಾರಿನ ಮೇಲೆ ಬಿದ್ದ ಮರ.. ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾದ ನಟಿ

ಪ್ರಾಥಮಿಕ ಮಾಹಿತಿ ಪ್ರಕಾರ ನಟಿ ಬಿದಿಶಾ, ಅನುಭಾವ್​ ಬೇರಾ ಎಂಬ ಗೆಳೆಯನೊಂದಿಗೆ ಸಂಬಂಧವಿಟ್ಟುಕೊಂಡಿದ್ದು, ಆತನೊಂದಿಗೆ ಮೇಲಿಂದ ಮೇಲೆ ಜಗಳವಾಡ್ತಿದ್ದರಂತೆ. ಇದರಿಂದ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಮಾಡಲಿಂಗ್ ಕ್ಷೇತ್ರದಲ್ಲಿ ಹೆಚ್ಚು ಹೆಸರು ಮಾಡಿರುವ ಬಿದಿಶಾ, 2021ರಲ್ಲಿ ಬಾರ್​-ದಿ ಕ್ಲೌನ್​ ಎಂಬ ಕಿರುಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಲಗ್ಗೆ ಹಾಕಿದ್ದರು. ಕಳೆದ ಕೆಲ ದಿನಗಳ ಹಿಂದೆ ಬಂಗಾಳದ ಪ್ರಸಿದ್ಧ ನಟಿ ಪಲ್ಲವಿ ಡೇ ಅವರ ಅನುಮಾನಾಸ್ಪದ ಸಾವಿನ ಬೆನ್ನಲ್ಲೇ ಮತ್ತೋರ್ವ ನಟಿ ಸಾವನ್ನಪ್ಪಿದ್ದು, ಬೆಂಗಾಳಿ ಚಿತ್ರರಂಗ ಶಾಕ್​​​ಗೊಳಗಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.