ETV Bharat / entertainment

ಬಿಗ್​ ಬಾಸ್​: ಮನೆಯವರ ಪತ್ರ ಪಡೆಯಲು ಸ್ಪರ್ಧಿಗಳಿಗೆ ವಿಭಿನ್ನ ಟಾಸ್ಕ್!​ - ಈಟಿವಿ ಭಾರತ ಕನ್ನಡ

BBK10: ಬಿಗ್​ ಬಾಸ್​ ಈ ವಾರ ಸ್ಪರ್ಧಿಗಳಿಗೆ ವಿಶೇಷ ಟಾಸ್ಕ್​ವೊಂದನ್ನು ನೀಡಿದ್ದು, ಅದರಲ್ಲಿ ಗೆದ್ದವರು ತಮ್ಮ ಮನೆಯಿಂದ ಕಳುಹಿಸಿರುವ ಪತ್ರವನ್ನು ಪಡೆದುಕೊಳ್ಳಬಹುದು.

Kannada Bigg Boss Season 10 new task for contestants
ಬಿಗ್​ ಬಾಸ್​: ಮನೆಯಿಂದ ಬಂದ ಪತ್ರ ಪಡೆಯಲು ಸ್ಪರ್ಧಿಗಳಿಗೆ ವಿಭಿನ್ನ ಟಾಸ್ಕ್!​
author img

By ETV Bharat Karnataka Team

Published : Nov 16, 2023, 5:47 PM IST

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್​ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದೆ. ದಿನಕ್ಕೊಂದು ಟ್ವಿಸ್ಟ್, ಹೊಸ ಕಥೆ, ಪ್ರೀತಿ, ಸ್ನೇಹ, ಮನಸ್ತಾಪ ಹೀಗೆ ನಾನಾ ವಿಷಯಗಳ ಸಲುವಾಗಿ ದೊಡ್ಮನೆ ಹೆಚ್ಚು​ ಸಖತ್​ ಸದ್ದು ಮಾಡುತ್ತಿದೆ. ಎರಡು ದಿನಗಳ ಹಿಂದೆಯಷ್ಟೇ ದೀಪಾವಳಿ ಹಬ್ಬದ ಖುಷಿಗಾಗಿ ಮನೆ ಮಂದಿಗೆ ಬಿಗ್​ ಬಾಸ್​ ಮನೆಯಡುಗೆಯನ್ನು ತರಿಸಿಕೊಟ್ಟಿದ್ದರು. ಇದನ್ನು ತಿಂದು ತೃಪ್ತಿಪಟ್ಟ ಸ್ಪರ್ಧಿಗಳು ಮನೆಯವರನ್ನು ನೆನೆದು ಭಾವುಕರಾಗಿದ್ದರು.

ಇದೀಗ ಮನೆಯವರಿಂದ ಸ್ಪರ್ಧಿಗಳಿಗೆ ಪತ್ರವೂ ಬಂದಿದೆ. ಆದರೆ ಇದು ಅಷ್ಟು ಸುಲಭವಾಗಿ ಮನೆ ಮಂದಿ ಕೈಗೆ ಸಿಗುತ್ತಿಲ್ಲ. ಒಂದೊಂದು ಪತ್ರಕ್ಕೂ ಒಂದಿಷ್ಟು ಟಾಸ್ಕ್​ಗಳನ್ನು ಕೊಟ್ಟು ಅದರಲ್ಲಿ ಗೆದ್ದವರಿಗೆ ಮಾತ್ರವೇ ಬಿಗ್​ ಬಾಸ್​ ಪತ್ರವನ್ನು ಕೊಡುವುದಾಗಿ ಹೇಳಿದ್ದಾರೆ. ಈಗಾಗಲೇ ವಿನಯ್​ ಗೌಡ ಮತ್ತು ನಮ್ರತಾ ಗೌಡ ಮನೆಯಿಂದ ಬಂದ ಪತ್ರಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲವು ಸದಸ್ಯರು ಪತ್ರವನ್ನು ಪಡೆದುಕೊಳ್ಳಲು ವಿಫಲರಾಗಿದ್ದಾರೆ. ಇನ್ನುಳಿದ ಸ್ಪರ್ಧಿಗಳ ಅದೃಷ್ಟ ಪರೀಕ್ಷೆ ಇನ್ನಷ್ಟೇ ನಡೆಯಬೇಕಿದೆ.

ಇಂದಿನ ಟಾಸ್ಕ್​: ಇಂದು ಬಿಗ್‌ ಬಾಸ್‌ ಮನೆಯಲ್ಲಿ ಇನ್ನಷ್ಟು ಜನರಿಗೆ ಪತ್ರ ಪಡೆದುಕೊಳ್ಳಲು ಟಾಸ್ಕ್ ನೀಡಿದ್ದಾರೆ. ಟಾಸ್ಕ್‌ ಏನೋ ತುಂಬಾ ಸಿಂಪಲ್ ಆಗಿ ಕಾಣಿಸುತ್ತಿದೆ. ಕನ್‌ಫೆಷನ್ ರೂಮಲ್ಲಿ ಕೂತ ಇಬ್ಬರು, ಬಿಗ್‌ ಬಾಸ್‌ ಮನೆಯ ಕುರಿತಾಗಿಯೇ ಕೇಳುವ ಸರಳವಾದ ಪ್ರಶ್ನೆಗಳಿಗೆ ಉತ್ತರಿಸಬೇಕು. ಆ ಪ್ರಶ್ನೆಗಳು ಎಷ್ಟು ಸರಳವಾಗಿವೆಯೆಂದರೆ, ಪ್ರತಿದಿನವೂ ಅದನ್ನು ನೋಡುತ್ತ, ಬಳಸುತ್ತಲೇ ಇದ್ದರೂ ಅದು ಸ್ಪರ್ಧಿಗಳ ಗಮನಕ್ಕೆ ಬಂದಿಲ್ಲ. ಹಾಗಾಗಿಯೇ ಉತ್ತರ ಕೊಡುವುದೂ ಕಷ್ಟವಾಗಿದೆ. ಕಲರ್ಸ್​ ಕನ್ನಡ ಹಂಚಿಕೊಂಡಿರುವ ಪ್ರೋಮೋದಲ್ಲಿ ಈ ಎಲ್ಲಾ ಸನ್ನಿವೇಶಗಳು ಸೆರೆಯಾಗಿವೆ.

ಇದಕ್ಕೂ ಮುನ್ನ ರಿಲೀಸ್​ ಆದ ಪ್ರೋಮೋದಲ್ಲಿ ಸಂಗೀತಾ, ಕಾರ್ತಿಕ್, ತನಿಷಾ ಸ್ನೇಹದಲ್ಲಿ ಬಿರುಕು ಮೂಡಿದಂತೆ ಕಾಣಿಸುತ್ತಿದೆ. ಮೂವರು ಕಿತ್ತಾಡಿ ಕಣ್ಣೀರು ಹಾಕುತ್ತಿರುವುದನ್ನು ತೋರಿಸಲಾಗಿದೆ. ನಮ್ಮಲ್ಲೊಂದು ಸ್ನೇಹ ಇತ್ತು. ಒಂದು ನಂಬಿಕೆ ಇತ್ತು. ಆ ನಂಬಿಕೆ ಬ್ರೇಕ್ ಆಗಿದೆ ಎಂದು ಹೇಳಿ ತನಿಷಾ ಮತ್ತು ಕಾರ್ತಿಕ್ ಜೊತೆಗಿನ ಫ್ರೆಂಡ್‌ಷಿಪ್ ಅನ್ನು ಸಂಗೀತಾ ಕೊನೆಗೊಳಿಸಿರುವಂತೆ ಪ್ರೋಮೋದಲ್ಲಿ ಕಾಣಿಸುತ್ತಿದೆ.

ಒಟ್ಟಿನಲ್ಲಿ ಪತ್ರದ ಬಗೆಗಿನ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಯಾರು ಗೆಲ್ಲುತ್ತಾರೆ? ಯಾರ ಮನೆಯಿಂದ ಬಂದ ಪತ್ರ ಸ್ಪರ್ಧಿಗಳ ಕೈ ಸೇರುತ್ತದೆ? ಯಾರು ನಿರಾಸೆಯಲ್ಲಿ ಮುಳುಗಬೇಕಾಗುತ್ತದೆ? ಎಂಬುದನ್ನು ತಿಳಿದುಕೊಳ್ಳಲು ಜಿಯೋ ಸಿನಿಮಾದಲ್ಲಿ ಬಿಗ್‌ಬಾಸ್ ಕನ್ನಡ ವೀಕ್ಷಿಸುತ್ತಿರಿ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು ಕಲರ್ಸ್​ ಕನ್ನಡದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಿ.

ಇದನ್ನೂ ಓದಿ: 'ಗೇಮ್​ ಸ್ಟಾರ್ಟ್': ಬಿಗ್​ ಬಾಸ್​ ಮನೆಯಲ್ಲಿ ಉಳಿಯಲು ವರ್ತೂರು ಸಂತೋಷ್​​ ನಿರ್ಧಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.