ETV Bharat / entertainment

ಹುಲಿ ಪೆಂಡೆಂಟ್​ ಬಳಿಕ ಬಿಗ್​ ಬಾಸ್​ ಸ್ಪರ್ಧಿ ವರ್ತೂರು ಸಂತೋಷ್​ ಮೇಲೆ ಮತ್ತೊಂದು ಆರೋಪ - etv bharat kannada

BBK 10: ಬಿಗ್​ ಬಾಸ್​ ಸ್ಪರ್ಧಿ ವರ್ತೂರು ಸಂತೋಷ್​ ನನ್ನ ಮಗಳನ್ನು ಮದುವೆಯಾಗಿದ್ದಾನೆ' ಎಂದು ವ್ಯಕ್ತಿಯೊಬ್ಬರು ಆರೋಪ ಮಾಡಿದ್ದಾರೆ.

BBK 10
ಹುಲಿ ಪೆಂಡೆಂಟ್​ ಬಳಿಕ ಬಿಗ್​ ಬಾಸ್​ ಸ್ಪರ್ಧಿ ವರ್ತೂರು ಸಂತೋಷ್​ ಮೇಲೆ 'ವಿವಾಹಿತ' ಆರೋಪ
author img

By ETV Bharat Karnataka Team

Published : Nov 14, 2023, 9:05 PM IST

ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಬಿಗ್​ ಬಾಸ್​ ಸೀಸನ್​ 10' ದಿನಕ್ಕೊಂದು ತಿರುವು ಪಡೆಯುತ್ತಿದೆ. ಮನರಂಜನೆ ನೀಡುವುದರ ಜೊತೆಗೆ ಸ್ಪರ್ಧಿಗಳ ವೈಯಕ್ತಿಕ ವಿಚಾರಗಳು ಬೆಳಕಿಗೆ ಬರುತ್ತಿವೆ. ಕೆಲ ದಿನಗಳ ಹಿಂದಷ್ಟೇ ವರ್ತೂರು ಸಂತೋಷ್​ ಅವರು ಹುಲಿ ಉಗುರು ಪೆಂಡೆಂಟ್​ ವಿಚಾರವಾಗಿ ಜೈಲಿಗೆ ಹೋಗಿ ವಾಪಸ್​​ ಬಿಗ್​ ಬಾಸ್​ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು. ಕಳೆದ ವಾರದ ವೀಕೆಂಡ್​ ವಿತ್​ ಸುದೀಪ್ ​​ಸಂಚಿಕೆಯಲ್ಲಿ ಸೇಫ್​ ಆದ್ರೂ ಮನೆಯಿಂದ ಹೊರಹೋಗುತ್ತೇನೆ ಎಂದು ಹೇಳಿದ್ದು, ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಇದೀಗ ಮತ್ತೊಂದು ವಿವಾದದಲ್ಲಿ ವರ್ತೂರು ಸಿಲುಕಿಕೊಂಡಿದ್ದಾರೆ.

ಕನ್ನಡದ ಬಿಗ್​ ಬಾಸ್​ ಶೋ ಒಂದಲ್ಲ ಒಂದು ವಿಚಾರಕ್ಕೆ ಸದ್ದು ಮಾಡುತ್ತಲೇ ಇದೆ. ಅದರಲ್ಲೂ ಹಳ್ಳಿಕಾರ್​ ಖ್ಯಾತಿಯ ವರ್ತೂರು ಸಂತೋಷ್​ ಅವರ ಹೆಸರು ಮನೆಯ ಒಳಗೂ, ಹೊರಗೂ ಹೆಚ್ಚು ಕೇಳಿ ಬರುತ್ತಿದೆ. ಕಳೆದ ತಿಂಗಳು ಹುಲಿ ಉಗುರಿನ ಡಾಲರ್​ ಧರಿಸಿದ ಆರೋಪದಲ್ಲಿ ಅವರನ್ನು ಬಿಗ್​ ಬಾಸ್​ ಮನೆಯಿಂದಲೇ ಬಂಧಿಸಲಾಗಿತ್ತು. ಬಂಧನಕ್ಕೊಳಗಾಗಿ 5 ದಿನಗಳ ನಂತರ ಅಂದರೆ ಅಕ್ಟೋಬರ್​ 27ರಂದು ಅವರನ್ನು ಬಿಡುಗಡೆ ಮಾಡಲಾಗಿತ್ತು. ಆ ನಂತರ ಮತ್ತೆ ಬಿಗ್​ ಬಾಸ್​ ಮನೆಗೆ ಅವರು ರೀ ಎಂಟ್ರಿ ಕೊಟ್ಟಿದ್ದರು.

ಅಲ್ಲಿ ಸ್ಪರ್ಧಿಗಳೊಂದಿಗೆ ಚೆನ್ನಾಗಿಯೇ ಇದ್ದ ವರ್ತೂರು ಸಂತೋಷ್​ ಅವರು ಕಳೆದ ವಾರ ನಾಮಿನೇಟ್ ಆಗಿದ್ದರು. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಅವರು 34 ಲಕ್ಷದ 15 ಸಾವಿರದ 475 ಮತಗಳನ್ನು ಪಡೆದು ಸೇಫ್​ ಆಗಿದ್ದರು. ಆದರೆ, ನಾನು ಮನೆಯಿಂದ ಹೊರ ಹೋಗಲು ಇಚ್ಛಿಸುತ್ತೇನೆಂದು ಹೇಳಿ ಎಲ್ಲರಿಗೂ ಶಾಕ್​ ನೀಡಿದ್ದರು. ಹೊರಗಡೆ ನಡೆದಿರುವ ಘಟನೆಗಳನ್ನು ಮರೆತು ಇಲ್ಲಿ ಆಟವಾಡಲು ಸಾಧ್ಯವಾಗುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದರು. ಇದರಿಂದ ಮನೆ ಮಂದಿ, ಸುದೀಪ್​ ಸೇರಿದಂತೆ ಅಭಿಮಾನಿಗಳು ಅಸಮಾಧಾನಗೊಂಡಿದ್ದರು.

ಇದೀಗ ಅವರ ತಾಯಿ ಬಿಗ್​ ಬಾಸ್​ ಮನೆಗೆ ಎಂಟ್ರಿಯಾಗಿ ವರ್ತೂರು ಸಂತೋಷ್ ಅವರ ನಿರ್ಧಾರವನ್ನು ಬದಲಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಮಗನನ್ನು ಬಿಗ್​ ಬಾಸ್​ ಮನೆಯಲ್ಲಿ ಉಳಿಸುವಲ್ಲಿ ತಾಯಿ ಯಶಸ್ಸು ಕಂಡಿದ್ದಾರೆ. ಅಮ್ಮನ ಮಾತನ್ನು ಒಪ್ಪಿ ವರ್ತೂರು ಸಂತೋಷ್ ಮನೆಯಲ್ಲೇ ಉಳಿದುಕೊಳ್ಳಲು ನಿರ್ಧರಿಸಿದ್ದಾರೆ. ಇದರಿಂದ ಇಡೀ ಮನೆ ಸೇರಿದಂತೆ ಅಭಿಮಾನಿಗಳು ಕೂಡ ಖುಷಿಯಾಗಿದ್ದಾರೆ. ಇದೀಗ ವರ್ತೂರು ಸಂತೋಷ್​ ಮೇಲೆ ಆರೋಪವೊಂದು ಕೇಳಿಬಂದಿದೆ.

ಹಳ್ಳಿಕಾರ್​ ಖ್ಯಾತಿಯ ವರ್ತೂರು ಸಂತೋಷ್ ಅವರಿಗೆ ಮದುವೆಯಾಗಿದೆಯಂತೆ. ಬಿಗ್​ ಬಾಸ್​ ಮನೆಯಲ್ಲಿ ಅವರು ಇನ್ನೂ ಸಿಂಗಲ್​ ಎಂದೇ ಹೇಳಿಕೊಂಡಿದ್ದಾರೆ. ಆದರೆ, ಇದೀಗ ಮದುವೆಯಾಗಿದ್ದಾರೆ ಎನ್ನಲಾದ ಹುಡುಗಿಯ ತಂದೆ ಈ ಬಗ್ಗೆ ಮಾತನಾಡಿದ್ದಾರೆ. "ಸಂತೋಷ್​ 2020ರಲ್ಲಿ ನನ್ನ ಮಗಳೊಂದಿಗೆ ಸಪ್ತಪದಿ ತುಳಿದಿದ್ದು, ಅವನಿಗೂ ಒಬ್ಬಳು ಮಗಳಿದ್ದಾಳೆ. ನನ್ನ ಮಗಳಿಗೆ ಆತ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದ. ಅವನು ನಕಲಿ ರೈತ. ಮಾದಕ ವ್ಯಸನಿ. ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ" ಎಂದು ಆರೋಪಿಸಿದ್ದಾರೆ. ಸದ್ಯ ಅವರ ಮದುವೆ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ಈ ವಿಚಾರವಾಗಿ ವರ್ತೂರು ಸಂತೋಷ್​ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದು ಇನ್ನಷ್ಟೇ ಕಾದುನೋಡಬೇಕಿದೆ.

ಇದನ್ನೂ ಓದಿ: 'ಗೇಮ್​ ಸ್ಟಾರ್ಟ್': ಬಿಗ್​ ಬಾಸ್​ ಮನೆಯಲ್ಲಿ ಉಳಿಯಲು ವರ್ತೂರು ಸಂತೋಷ್​​ ನಿರ್ಧಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.