ETV Bharat / entertainment

ಆರ್ಯವರ್ಧನ್​ ಆಗಿ ಅನೂಪ್​ ಬಣ್ಣ ಹಚ್ಚುತ್ತಾರಾ.. ವಿಕ್ರಾಂತ್​ ರೋಣ ನಿರ್ದೇಶಕ ಏನಂತಾರೆ - ಈಟಿವಿ ಭಾರತ್​ ಕನ್ನಡ

ಇದೀಗ ಜೊತೆ ಜೊತೆಯಲಿ ಸೀರಿಯಲ್​ನಲ್ಲಿ ಆರ್ಯವರ್ಧನ್ ಪಾತ್ರ ಇನ್ಮುಂದೆ ಯಾರು ಮಾಡ್ತಾರೆ ಎಂಬ ಚರ್ಚೆ ಶುರುವಾಗಿದೆ. ಇದಕ್ಕೆ ವಿಕ್ರಾಂತ್​ ರೋಣ ನಿರ್ದೆಶಕ ಅನೂಪ್​ ಭಂಡಾರಿ, ದೀಪಕ್ ಹಾಗು ನಟ ಹರೀಶ್ ರಾಜ್, ತರುಣ್ ಚಂದ್ರ ಹೆಸರುಗಳು ಕೇಳಿಬರುತ್ತಿವೆ.

anup-bhandari
ಅನೂಪ್​ ಭಂಡಾರಿ
author img

By

Published : Aug 22, 2022, 8:04 PM IST

Updated : Aug 22, 2022, 8:12 PM IST

ಕಳೆದ ನಾಲ್ಕೈದು ದಿನಗಳಿಂದ ಕಿರುತೆರೆ ಲೋಕದಲ್ಲಿ‌‌ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿರುವ ವಿಷ್ಯ ಅಂದ್ರೆ ಜೊತೆ ಜೊತೆಯಲ್ಲಿ ಧಾರವಾಹಿಯಿಂದ‌ ಹೊರ‌‌‌ ನಡೆದಿರುವ ಅನಿರುದ್ಧ್ ವಿಚಾರ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಸೀರಿಯಲ್​ನಿಂದ‌ ಪ್ರಖ್ಯಾತಿ ಪಡೆದ ಅನಿರುದ್ಧ್​ ನಿರ್ದೇಶಕರ ಜೊತೆ ಕಿರಿಕ್ ಮಾಡಿಕೊಂಡು ಈಗ ಎರಡು ವರ್ಷ ಕನ್ನಡ ಕಿರುತೆರೆ ಇಂದ ಬ್ಯಾನ್​ ಆಗಿದ್ದಾರೆ.

ಇದೀಗ ಜೊತೆ ಜೊತೆಯಲ್ಲಿ ಸೀರಿಯಲ್​ನಲ್ಲಿ ಆರ್ಯವರ್ಧನ್ ಪಾತ್ರ ಇನ್ಮುಂದೆ ಯಾರು ಮಾಡ್ತಾರೆ ಎಂಬ ಚರ್ಚೆ ಶುರುವಾಗಿದೆ. ಜೊತೆ ಜೊತೆಯಲ್ಲಿ ಧಾರವಾಹಿ ಟೀಮ್​ನ ಕೆಲವರು ಹೇಳುವ ಹಾಗೆ, ರಂಗಿತರಂಗ ಹಾಗು ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ, ನಿರ್ದೇಶಕ ಅನೂಪ್ ಭಂಡಾರಿ ಅವರ ಹೆಸರುಗಳು ಕೇಳಿ ಬರುತ್ತಿವೆ.

anup-bhandari
ನಟ ಹರೀಶ್ ರಾಜ್, ತರುಣ್ ಚಂದ್ರ ಹೆಸರುಗಳು ಆರ್ಯವರ್ಧನ್​ ಪಾತ್ರಕ್ಕೆ ಕೇಳಿ ಬೆರುತ್ತಿವೆ.

ನಿರ್ದೇಶಕ ಮಾತ್ರವಲ್ಲದೆ, ನಟನಾಗಿ, ಬರಹಗಾರ, ಚಿತ್ರ ಸಾಹಿತಿಯಾಗಿ ಗುರುತಿಸಿಕೊಂಡಿರುವ ಅನೂಪ್ ಭಂಡಾರಿ ಜೊತೆ ಜೊತೆಯಲಿ ಧಾರಾವಾಹಿಯ ಆರ್ಯವರ್ಧನ್‌ ಪಾತ್ರ ಮಾಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ವಿಚಾರವಾಗಿ ನಿರ್ದೇಶಕ ಅನೂಪ್ ಭಂಡಾರಿ ಅವರನ್ನು ಸಂಪರ್ಕ ಮಾಡಿದ್ವಿ. ಈ ವಿಚಾರವಾಗಿ ಖುಷಿ ಖುಷಿಯಾಗಿ ಮಾತನಾಡಿದ ಅನೂಪ್ ಭಂಡಾರಿ, ಜೊತೆ ಜೊತೆಯಲಿ ನಿರ್ದೇಶಕರು ಈ ಪಾತ್ರಕ್ಕೆ ನನ್ನನ್ನು ಸಂಪರ್ಕ ಮಾಡಿದ್ದು ನಿಜ. ಆದರೆ ನಾನು ಈಗ ಮತ್ತೊಂದು ಸಿನಿಮಾದ ಕಥೆ ಮಾಡೋದ್ರಲ್ಲಿ ಬ್ಯುಸಿಯಾಗಿದ್ದೀನಿ ಅಂತಾ ಅನೂಪ್ ಭಂಡಾರಿ ಈಟಿವಿ ಭಾರತ​ಕ್ಕೆ ತಿಳಿಸಿದ್ದಾರೆ‌.

ಇದನ್ನೂ ಓದಿ :ಜೊತೆ ಜೊತೆಯಲಿ ಸೀರಿಯಲ್​​ನಿಂದ ನಟ ಅನಿರುದ್ಧ್​​ಗೆ ಗೇಟ್ ಪಾಸ್... ನಿರ್ದೇಶಕ ಆರೂರು ಜಗದೀಶ್ ಸ್ಪಷ್ಟನೆ

ಯಾವುದು ಆ ಸಿನಿಮಾ ಅಂದ್ರೆ, ಮತ್ತೆ ಸುದೀಪ್ ಸಾರ್ ಜೊತೆ ಸಿನಿಮಾ ಮಾಡ್ತಾ ಇದ್ದೀನಿ. ಅದು ಯಾವ ಸಿನಿಮಾ ಅಂತಾ ಸ್ವಲ್ಪ ತಿಂಗಳಲ್ಲಿ ತಿಳಿಸುತ್ತೇನೆ ಅಂದು ಅನೂಪ್​ ಭಂಡಾರಿ ಮಾಹಿತಿ ನೀಡಿದರು.

ಇದರ ಜೊತೆಗೆ ಶಿಷ್ಯ ಸಿನಿಮಾ ಖ್ಯಾತಿಯ ದೀಪಕ್ ಹಾಗು ನಟ ಹರೀಶ್ ರಾಜ್, ತರುಣ್ ಚಂದ್ರ ಸೇರಿದಂತೆ ಕೆಲ ನಟರ ಹೆಸರುಗಳು ಸಹ ಕೇಳಿ ಬರುತ್ತಿವೆ. ಈ ಬಗ್ಗೆ ಜೊತೆ ಜೊತೆಯಲ್ಲಿ ಧಾರವಾಹಿ ನಿರ್ದೇಶಕ ಆರೂರು ಜಗದೀಶ್ ಅನೂಪ್ ಭಂಡಾರಿ ಅಥವಾ ಜಯರಾಮ್ ಕಾರ್ತೀಕ್ ಅವ್ರನ್ನ ಕರೆತರುತ್ತಾರಾ ಎಂಬ ಪ್ರಶ್ನೆಗಳು ಎದುರಾಗಿವೆ. ಇಷ್ಟು ಜನ ನಟರುಗಳಲ್ಲಿ ಜೊತೆ ಜೊತೆಯಲಿ ಧಾರವಾಹಿಯಲ್ಲಿ ಆರ್ಯವರ್ಧನ್ ಯಾರು ಆಗ್ತಾರೆ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.

ಇದನ್ನೂ ಓದಿ : ನಿಮ್ಮಿಂದ ಕೆಲ ಕಲಾವಿದರು ಕಣ್ಣೀರಿಟ್ಟಿದ್ದಾರೆ: ನಟ ಅನಿರುದ್ಧ್ ಪ್ರತ್ಯಾರೋಪ

Last Updated : Aug 22, 2022, 8:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.