ETV Bharat / entertainment

ಅನಾರೋಗ್ಯದಿಂದ ಬಳಲುತ್ತಿರುವ ಹಿನಾ ಖಾನ್​ ; ಅಭಿಮಾನಿಗಳಿಗೆ ನಟಿ ಹೇಳಿದ್ದಿಷ್ಟು!

author img

By ETV Bharat Karnataka Team

Published : Dec 29, 2023, 10:14 AM IST

Hina Khan Health: ಕಿರುತೆರೆ ನಟಿ ಹಿನಾ ಖಾನ್ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ.

Hina Khan health
ಹಿನಾ ಖಾನ್ ಆರೋಗ್ಯ

ಕಿರುತೆರೆ ಲೋಕದ ಖ್ಯಾತ ನಟಿ ಹಿನಾ ಖಾನ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಗುರುವಾರ ತಮ್ಮ ಸೋಷಿಯಲ್​ ಮೀಡಿಯಾ ಅಕೌಂಟ್​​ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಖ್ಯಾತಿಯ ನಟಿ ತೀವ್ರ ಜ್ವರದಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ತೀವ್ರ ಜ್ವರದಿಂದ ಭಯಾನಕ ರಾತ್ರಿಗಳನ್ನು ಕಳೆದಿದ್ದೇನೆ. ತೀವ್ರ ಅಸ್ವಸ್ಥತೆ ಉಂಟಾಗಿದೆ ಎಂಬುದಾಗಿ ಮಾಹಿತಿ ನೀಡಿದ್ದಾರೆ.

ನಟಿ ಹಿನಾ ಖಾನ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಹೈ ಟೆಂಪ್ರೇಚರ್​​​ ಪ್ರದರ್ಶಿಸುವ ಥರ್ಮಾಮೀಟರ್‌ನ ಫೋಟೋ ಇದಾಗಿದೆ. ಫೋಟೋ ಕ್ಯಾಪ್ಷನ್​​ನಲ್ಲಿ, ತೀವ್ರ ಜ್ವರದ ಕಾರಣ ನಾಲ್ಕು ಭಯಾನಕ ರಾತ್ರಿ ಕಳೆದಿರುವುದಾಗಿ ತಿಳಿಸಿದ್ದಾರೆ. ಪರಿಸ್ಥಿತಿ ಸುಧಾರಿಸುತ್ತಿಲ್ಲ ಎಂಬುದಾಗಿಯೂ ಉಲ್ಲೇಖಿಸಿದ್ದಾರೆ. ನಿರಂತರ 102-103 ಟ್ರೆಂಪ್ರೇಚರ್​. ಉಫ್, ಸದ್ಯ ನನ್ನಲ್ಲಿ ಶಕ್ತಿ ಉಳಿದಿಲ್ಲ. ಇದು ಅನಾರೋಗ್ಯಕರ. ನನಗಾಗಿ ಚಿಂತಿಸುತ್ತಿರುವ ಎಲ್ಲರಿಗೂ ಈ ಅಪ್​ಡೇಟ್ಸ್​, ನಾನು ಚೇತರಿಸಿಕೊಂಡು ಮರಳುತ್ತೇನೆ. ದಯವಿಟ್ಟು ನಿಮ್ಮ ಪ್ರೀತಿಯನ್ನು ಕಳುಹಿಸಿ ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ.

Hina Khan health
ಹಿನಾ ಖಾನ್ ಇನ್​ಸ್ಟಾಗ್ರಾಮ್​ ಸ್ಟೋರಿ

36 ವರ್ಷ ಹರೆಯದ ನಟಿ ಮತ್ತೊಂದು ಫೋಟೋ ಹಂಚಿಕೊಂಡಿದ್ದಾರೆ. ಕೈಗೆ ಇಂಜೆಕ್ಷನ್​​ ಹಾಕಿರುವ ಚಿತ್ರ ಇದಾಗಿದೆ. "ಲೈಫ್ ಅಪ್‌ಡೇಟ್ಸ್, 4ನೇ ದಿನ" ಎಂದು ಕ್ಯಾಪ್ಷನ್​ ನೀಡಿದ್ದಾರೆ. '#onedayatatime' ಎಂಬ ಹ್ಯಾಶ್‌ಟ್ಯಾಗ್ ಕೊಟ್ಟಿದ್ದಾರೆ. ಫೋಟೋವೊಂದರಲ್ಲಿ, ಹಿನಾ ಖಾನ್​​ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವುದನ್ನು ಕಾಣಬಹುದು. ತಮ್ಮ ಅಭಿಮಾನಿಗಳಿಗೆ ಶೀಘ್ರ ಚೇತರಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ ನಟಿ ಶೀಘ್ರದಲ್ಲೇ ಚೇತರಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹಿನಾ ಖಾನ್ ನಟನೆಯ ಕಂಟ್ರಿ ಆಫ್ ಬ್ಲೈಂಡ್ ಚಿತ್ರ ಆಸ್ಕರ್​​ಗೆ ನಾಮನಿರ್ದೇಶನಗೊಳ್ಳುತ್ತಾ?

ನಟಿ ಹಿನಾ ಖಾನ್ ವೃತ್ತಿಪರ ವಿಚಾರಗಳನ್ನು ಗಮನಿಸಿದರೆ, ಅಕ್ಟೋಬರ್ 6ರಂದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಬಿಡುಗಡೆಯಾಗಿರುವ 'ಕಂಟ್ರಿ ಆಫ್ ಬ್ಲೈಂಡ್' ಮುಂಬರುವ ಪ್ರತಿಷ್ಠಿತ ಅಕಾಡೆಮಿ ಪ್ರಶಸ್ತಿಗಳ ನಾಮನಿರ್ದೇಶನದ ರೇಸ್‌ಗೆ ಸ್ಪರ್ಧಿಸುತ್ತಿದೆ. ಈ ಸಿನಿಮಾ ಗೋಲ್ಡನ್ ಗ್ಲೋಬ್ ನಿರ್ಮಾಪಕ ಸಿದ್ದಿಕ್ ಬರ್ಮಾಕ್ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸ್ವೀಕರಿಸಿದೆ.

ಇದನ್ನೂ ಓದಿ: ಕ್ಯಾನ್ಸರ್ ಗೆದ್ದ ಹಿರಿಯ ನಟಿ ಶರ್ಮಿಳಾ ಠಾಗೋರ್

ಕಂಟ್ರಿ ಆಫ್ ಬ್ಲೈಂಡ್ ಸಿನಿಮಾದಲ್ಲಿ ಹಿನಾ ಖಾನ್​​ ದೃಷ್ಟಿಹೀನ ಮಹಿಳೆಯ ಪಾತ್ರ ನಿರ್ವಹಿಸಿದ್ದಾರೆ. ಕ್ರಿ.ಶ 1800ರಲ್ಲಿ ನಡೆಯುವ ಕಥೆ ಇದಾಗಿದೆ. ದೃಷ್ಟಿಹೀನರು ವಾಸಿಸುವ ಕಣಿವೆಯ ಕಥೆಯನ್ನು ಆಧರಿಸಿದೆ. ದೃಷ್ಟಿ ಸಮಸ್ಯೆ ಹೊರತಾಗಿಯೂ ಈ ಜನರು ಹೇಗೆ ಸಂತೋಷಕರ, ತೃಪ್ತಿಕರ ಜೀವನ ನಡೆಸುತ್ತಾರೆ ಎಂಬುದೇ ಕಥೆಯ ತಿರುಳು. ಚಿತ್ರ ಅಮೂಲ್ಯ ಸಂದೇಶ ಹೊಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.