ಹೈದರಾಬಾದ್: ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ನಟನೆಯ ಜರಾ ಹಟ್ಕೆ ಜರಾ ಬಚ್ಕೆ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲಿ 22.59 ಕೋಟಿ ರೂ. ಗಳಿಕೆ ಮಾಡಿದೆ. ಭಾನುವಾರ ಒಂದೇ ದಿನ ದೇಶೀಯ ಚಿತ್ರಮಂದಿರಗಳಲ್ಲಿ 9.90 ಕೋಟಿ ರೂ. ಬಾಚಿಕೊಂಡಿರುವ ಬಗ್ಗೆ ಚಿತ್ರ ತಂಡ ಹೇಳಿಕೊಂಡಿದೆ.
ಕಳೆದ ಶುಕ್ರವಾರ ಬಿಡುಗಡೆಯಾದ ಜರಾ ಹಟ್ಕೆ ಜರಾ ಬಚ್ಕೆ ಚಿತ್ರ ಮೊದಲ ದಿನ 5.49 ಕೋಟಿ ಗಳಿಸಿತ್ತು. ಶನಿವಾರವಾದ ಎರಡನೇ ದಿನ 7.20 ಕೋಟಿ ಗಳಿಸಿತ್ತು. ಭಾನುವಾರ 9.90 ಕೋಟಿ ರೂ. ಸೇರಿದಂತೆ ಒಟ್ಟು 22.59 ಕೋಟಿ ರೂ. ಗಳಿಕೆ ಮಾಡಿದೆ. ಒಂದು ಟಿಕೆಟ್ ಖರೀದಿಗೆ ಮತ್ತೊಂದು ಟಿಕೆಟ್ ಉಚಿತ ಎಂಬ ನೀತಿಯಿಂದ ಜರಾ ಹಟ್ಕೆ ಜರಾ ಬಚ್ಕೆ ಚಿತ್ರ ತನ್ನ ವಿಕೆಂಡ್ ಆದಾಯವನ್ನು ಹೆಚ್ಚಿಸಿಕೊಂಡಿದೆ. ಚಿತ್ರ ಪ್ರೇಮಿಗಳು ಕೂಡ ಇದರ ಲಾಭ ಪಡೆಯುವಲ್ಲಿ ಹಿಂದೆ ಬಿದ್ದಿಲ್ಲ ಎಂದು ಬಾಲಿವುಡ್ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಅವರು ಸೋಮವಾರ ಚಿತ್ರದ ವ್ಯವಹಾರದ ಕುರಿತು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಜರಾ ಹಟ್ಕೆ ಜರಾ ಬಚ್ಕೆ ಚಿತ್ರ ಮೂರನೇ ದಿನಕ್ಕೆ ಮುನ್ನುಗ್ಗುತ್ತಿದೆ. ಸೋಮವಾರವೂ ಕೂಡ ಹಲವು ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಶುಕ್ರವಾರ 5.49 ಕೋಟಿ ಬಾಚಿಕೊಂಡಿದ್ದ ಚಿತ್ರ ಶನಿವಾರ 7.20 ಕೋಟಿ ಹೊತ್ತು ತಂದಿತ್ತು. ಭಾನುವಾರ 9.90 ಕೋಟಿ ಸೇರಿದಂತೆ ಭಾರತದಲ್ಲಿಯೇ ಒಟ್ಟು 22.59 ಕೋಟಿ ವ್ಯವಹಾರ ಮಾಡಿದೆ ಎಂದು ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ಜೊತೆಯಾಗಿ ನಟಿಸಿರುವ ಮೊದಲ ಚಿತ್ರ ಇದಾಗಿದ್ದು, ಲಕ್ಷ್ಮಣ್ ಉಟೇಕರ್ ನಿರ್ದೇಶಿಸಿದ್ದಾರೆ. ಸ್ಪೈಡರ್ ಮ್ಯಾನ್: ಅಕ್ರಾಸ್ ದಿ ಸ್ಪೈಡರ್-ವರ್ಸ್ ಮತ್ತು ದಿ ಕೇರಳ ಸ್ಟೋರಿ ಚಿತ್ರದ ಪೈಪೋಟಿಯ ನಡುವೆಯೂ ಜರಾ ಹಟ್ಕೆ ಜರಾ ಬಚ್ಕೆ ಚಿತ್ರ ಉತ್ತಮ ಗಳಿಕೆಯ ಹಾದಿಯಲ್ಲಿದೆ.
-
#ZaraHatkeZaraBachke swims to the winning post, goes from strength to strength in Weekend 1… National chains excellent, mass pockets join the party on Day 3… All eyes on the make-or-break Mon… Fri 5.49 cr, Sat 7.20 cr, Sun 9.90 cr. Total: ₹ 22.59 cr. #India biz. #Boxoffice… pic.twitter.com/CnPRKtJlMA
— taran adarsh (@taran_adarsh) June 5, 2023 " class="align-text-top noRightClick twitterSection" data="
">#ZaraHatkeZaraBachke swims to the winning post, goes from strength to strength in Weekend 1… National chains excellent, mass pockets join the party on Day 3… All eyes on the make-or-break Mon… Fri 5.49 cr, Sat 7.20 cr, Sun 9.90 cr. Total: ₹ 22.59 cr. #India biz. #Boxoffice… pic.twitter.com/CnPRKtJlMA
— taran adarsh (@taran_adarsh) June 5, 2023#ZaraHatkeZaraBachke swims to the winning post, goes from strength to strength in Weekend 1… National chains excellent, mass pockets join the party on Day 3… All eyes on the make-or-break Mon… Fri 5.49 cr, Sat 7.20 cr, Sun 9.90 cr. Total: ₹ 22.59 cr. #India biz. #Boxoffice… pic.twitter.com/CnPRKtJlMA
— taran adarsh (@taran_adarsh) June 5, 2023
ಇದನ್ನೂ ಓದಿ: ಪ್ರೀತಿಸಿದ ಹುಡುಗಿ ಜೊತೆ ಹಸೆಮಣೆ ಏರಿದ ಅಭಿಷೇಕ್ ಅಂಬರೀಶ್: ಜೂ.7ರಂದು ಆರತಕ್ಷತೆ
ಚಿತ್ರದ ಕಥೆ ಏನು?: ನಟ ವಿಕ್ಕಿ ಕೌಶಲ್ ಮತ್ತು ನಟಿ ಸಾರಾ ಅಲಿ ಖಾನ್ ಮಧ್ಯಮ ವರ್ಗದ ದಂಪತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಪೂರ್ಣ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಆಗಿರುವ ಚಿತ್ರದಲ್ಲಿ ದಂಪತಿಯ ಪ್ರೀತಿ ಪ್ರೇಕ್ಷಕರ ಗಮನ ಸೆಳೆದಿದೆ. ಕಾಲೇಜಿನಲ್ಲಿ ಭೇಟಿಯಾದ ಈ ಜೋಡಿ ನಡುವೆ ಪ್ರೀತಿ ಚಿಗುರೊಡೆಯುತ್ತದೆ. ಮದುವೆ ಆದ ಬಳಿಕ ತಮ್ಮ ಜೀವನದಲ್ಲಿ ಸಂತೋಷ ಕಂಡುಕೊಳ್ಳಲು ಬಯಸುತ್ತಾರೆ. ಕೂಡು ಕುಟುಂಬವಾದ ಹಿನ್ನೆಲೆ ಖಾಸಗಿ ಸಮಯಕ್ಕಾಗಿ ನವದಂಪತಿ ಹಂಬಲಿಸುತ್ತಾರೆ. ಸ್ವಂತ ಮನೆ ಹೊಂದಲು ಇಚ್ಛಿಸಿದ ಇವರಿಗೆ ಸರ್ಕಾರಿ ವಸತಿ ಯೋಜನೆಯಾಗಿರುವ, ವಿಚ್ಛೇದಿತ ಮಹಿಳೆಯರಿಗೆ ಕೈಗೆಟುಕುವ ಮನೆ ಬಗ್ಗೆ ಮಾಹಿತಿ ದೊರೆಯುತ್ತದೆ. ಹಾಗಾಗಿ ವಿಚ್ಛೇದನದ ನಾಟಕ ಆಡಿ ಸರ್ಕಾರಿ ಯೋಜನೆಯಡಿ ಮಂಜೂರಾಗಿರುವ ಮನೆಯನ್ನು ತಮ್ಮದಾಗಿಸಿಕೊಳ್ಳಲು ಮುಂದಾಗುತ್ತಾರೆ. ಬಹಳ ಪ್ರೀತಿಯಿಂದಿದ್ದ ಜೋಡಿ ತಮ್ಮ ನಡುವೆ ಏನೂ ಸರಿಯಿಲ್ಲ ಎಂಬುದನ್ನು ಸಮಾಜಕ್ಕೆ ತೋರಿಸಲು ಆದಷ್ಟು ಪ್ರಯತ್ನ ಮಾಡುತ್ತಾರೆ. ಆದ್ರೆ ಇವರ ನಾಟಕ ವರ್ಕ್ಔಟ್ ಆಗುವುದಿಲ್ಲ. ಈ ಎಲ್ಲ ಪ್ರಯತ್ನ, ನಾಟಕದ ಹೊರತಾಗಿ ಇಲ್ಲಿ ಈ ದಂಪತಿಯ ಪ್ರೀತಿ ಪ್ರೇಕ್ಷಕರ ಮನ ಗೆಲ್ಲುತ್ತದೆ.
ಇದನ್ನೂ ಓದಿ: ಸಂಜಯ್ ಪುರಣ್ ಸಿಂಗ್ ನಿರ್ದೇಶನದ 72 ಹುರೇನ್ ಚಿತ್ರದ ಟೀಸರ್ ಬಿಡುಗಡೆ