ಬೆಂಗಳೂರು: ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿ ಖಾಲಿ ಇರುವ 107 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಸೀನಿಯರ್ ಅಸಿಸ್ಟೆಂಟ್ ಮತ್ತು ಅಸಿಸ್ಟಂಟ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ: ಒಟ್ಟು ಹುದ್ದೆಗಳು- 107
- ಕೋರ್ಟ್ ಮಾಸ್ಟರ್ (ಶಾರ್ಟ್ ಹ್ಯಾಂಡ್- ಗ್ರೂಪ್-ಎ ಗೆಜೆಟೆಡ್ ಹುದ್ದೆಗಳು) - 31
ಗ್ರೂಪ್- ನಾನ್ ಗೆಜೆಟೆಡ್ ಹುದ್ದೆಗಳು:
- ಸೀನಿಯರ್ ಪರ್ಸನಲ್ ಅಸಿಸ್ಟೆಂಟ್ - 33
- ಪರ್ಸನಲ್ ಅಸಿಸ್ಟೆಂಟ್ - 43
ವಿದ್ಯಾರ್ಹತೆ:
ಕೋರ್ಟ್ ಮಾಸ್ಟರ್(ಶಾರ್ಟ್ ಹ್ಯಾಂಡ್): ಪದವಿ ವಿದ್ಯಾರ್ಹತೆ. ಇಂಗ್ಲಿಷ್ ಶಾರ್ಟ್ಹ್ಯಾಂಡ್ ಗೊತ್ತಿರಬೇಕು. ಕಂಪ್ಯೂಟರ್ ಜ್ಞಾನ ಹಾಗೂ ಈಗಾಗಲೇ ಖಾಸಗಿ/ಸರ್ಕಾರಿ ವಲಯದಲ್ಲಿ ಪಿಎ ಆಗಿ ಐದು ವರ್ಷ ಹುದ್ದೆ ನಿರ್ವಹಿಸಿದ ಅನುಭವ ಹೊಂದಿರಬೇಕು.
ಹಿರಿಯ ಪರ್ಸನಲ್ ಅಸಿಸ್ಟೆಂಟ್/ಪರ್ಸನಲ್ ಅಸಿಸ್ಟೆಂಟ್: ಪದವಿ ಅರ್ಹತೆ. ಇಂಗ್ಲಿಷ್ ಶಾರ್ಟ್ಹ್ಯಾಂಡ್ ಗೊತ್ತಿರಬೇಕು.
ವಯೋಮಿತಿ: ಕೋರ್ಟ್ ಮಾಸ್ಟರ್ ಹುದ್ದೆಗೆ 35ರಿಂದ 40 ವರ್ಷ, ಸೀನಿಯರ್ ಅಸಿಸ್ಟೆಂಟ್ ಮತ್ತು ಅಸಿಸ್ಟಂಟ್ ಹುದ್ದೆಗೆ 18ರಿಂದ 30 ವರ್ಷ.
ಅರ್ಜಿ ಸಲ್ಲಿಕೆ: ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 1,000 ರೂ ಅರ್ಜಿ ಶುಲ್ಕವಿದೆ. ಪ.ಜಾ, ಪ.ಪಂ., ನಿವೃತ್ತ ಸೇವಾ ನೌಕರರು, ವಿಶೇಷ ಚೇತನ ಅಭ್ಯರ್ಥಿಗಳಿಗೆ 250 ರೂ ಅರ್ಜಿ ಶುಲ್ಕವಿದೆ.
ಆಯ್ಕೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ಈ ಕುರಿತ ಹೆಚ್ಚಿನ ಮಾಹಿತಿಗೆ sci.gov.in/recruitments/ ಇಲ್ಲಿಗೆ ಭೇಟಿ ನೀಡಿ.
ಇದನ್ನೂ ಓದಿ: SBI ನೇಮಕಾತಿ: ಬರೋಬ್ಬರಿ 13,735 ಜೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ