ETV Bharat / entertainment

ಗೋವಾ ಕಡಲ ತೀರದಲ್ಲಿ ಬಂಗಾಳಿ ಸಂಪ್ರದಾಯದಂತೆ ಮದುವೆಯಾದ ''ಯೇ ಹೇ ಮೊಹಬ್ಬತೇ ನಟಿ - ಅರಿಶಿಣ ಕಾರ್ಯಕ್ರಮದ ಮೂಲಕ ಮದುವೆ ಶಾಸ್ತ್ರ

ಆಲಿಯಾ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿರುವ ನಟಿ ಕೃಷ್ಣ ಮುಖರ್ಜಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

Ye Hai Mohabbatein  actress got married as per the Bengali tradition on the beach of Goa

author img

By

Published : Mar 14, 2023, 4:41 PM IST

ಹೈದರಾಬಾದ್​​: ಜನಪ್ರಿಯ ಧಾರವಾಹಿಯಾದ ''ಯೇ ಹೇ ಮೊಹಬ್ಬತೇ ಪಾತ್ರಧಾರಿ ಆಲಿಯಾಗೆ ಇಂದು ವೈವಾಹಿಕ ಜೀವನಕ್ಕೆ ಒಳಗಾಗಿದ್ದಾರೆ. ಆಲಿಯಾ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದ ನಟಿ ಕೃಷ್ಣ ಮುಖರ್ಜಿ ಅವರು ಬೆಂಗಾಲಿ ಸಂಪ್ರದಾಯದಂತೆ ಇಂದು ಚಿರಾಗ್​ ಬಟಿವಾಲಾ ಅವರ ಕೈ ಹಿಡಿದಿದ್ದಾರೆ. ಗೋವಾದಲ್ಲಿ ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಈ ವಿವಾಹ ಶಾಸ್ತ್ರ ನೆರವೇರಿದೆ. ಗೋವಾದ ಪ್ರಕೃತಿ ಮಡಿಲಿನಲ್ಲಿ ಸೂರ್ಯಾಸ್ತದ ಸಮಯದಲ್ಲಿ ಅದ್ದೂರಿಯಾಗಿ ಈ ವಿವಾಹ ಕಾರ್ಯ ನಡೆದಿದ್ದು, ಈ ಚಿತ್ರಗಳನ್ನು ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಮದುವೆ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿರುವ ನಟಿ, ಪಾರ್ಸಿ ಸೈಲರ್​ ಜೊತೆಗೆ ಬೆಂಗಾಳಿ ನಟಿ ಮೂರು ಗಂಟಿನ ಬೆಸುಗೆಗೆ ಒಳಗಾಗಿದ್ದಾಳೆ. ಈ ಅದ್ಭುತ ದಿನಕ್ಕೆ ನಿಮ್ಮ ಪ್ರೀತಿ ಮತ್ತು ಆಶೀರ್ವಾದವನ್ನು ಬೇಡುತ್ತೇವೆ ಎಂಬ ಕ್ಯಾಪ್ಶನ್​ನಲ್ಲಿ ಈ ಚಿತ್ರವನ್ನು ಫೋಸ್ಟ್​ ಮಾಡಿದ್ದಾರೆ. ಮಂಟಪದಲ್ಲಿ ಚಿರಾಗ್​ ಗಲ್ಲ ಹಿಡಿದಿರುವ ಫೋಟೋ, ಇಬ್ಬರು ಒಬ್ಬರನ್ನು ಒಬ್ಬರು ನೋಡುತ್ತಿರುವ ಸ್ಟನ್ನಿಂಗ್​ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಬೆಂಗಾಳಿ ಸಾಂಪ್ರದಾಯಿಕ ಉಡುಪಿನಲ್ಲಿ, ಕಡಲ ತೀರದ ಮಂಟಪದಲ್ಲಿ ಮದುವೆಯಾಗಿರುವ ಸೆಟ್ಟಿಗೆ ಅನೇಕ ಅಭಿಮಾನಿಗಳು ಕೂಡ ಮನಸೋತಿದ್ದಾರೆ.

ನಟಿ ತಮ್ಮ ಮದುವೆ ಫೋಟೋಗಳನ್ನು ಹಂಚಿಕೊಳ್ಳಿತ್ತಿದ್ದಂತೆ, ನೂತನ ದಂಪತಿಗಳಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಕಿರುತೆರೆ ನಟಿ ಶರನು ಪಾರಿಖ್​, ಅಭಿನಂದನೆಗಳು, ನಿಮ್ಮ ಹೊಸ ಪಯಣಕ್ಕೆ ಶುಭಾಶಯಗಳು ಎಂದು ಬರೆದಿದ್ದಾರೆ. ಮತ್ತೊಬ್ಬ ಕಿರುತೆರೆ ನಟಿ ನೀನಾ ಕುಲಕರ್ಣಿ, ಅಭಿನಂದನೆಗಳು ಕಿಶು, ಎಷ್ಟು ಹ್ಯಾಂಡ್​ಸಮ್​ ಪತಿಯನ್ನು ಪಡೆದಿದ್ದೀಯಾ , ನಿಮ್ಮಿಬ್ಬರದು ಚೆಂದ ಜೋಡಿ, ಪ್ರೀತಿ ತುಂಬಿದ ಶುಭಾಶಯ ಮತ್ತು ಆಶೀರ್ವಾದ ಎಂದು ಬರೆದಿದ್ದಾರೆ. ಇದರ ಹೊರತಾಗಿ ಸುರಭಿ ಜ್ಯೋತಿ, ರಕ್ಷಾಂದ್​ ಖಾನ್​ ಮತ್ತಿತ್ತರ ನಟ- ನಟಿಯರು ಕೂಡ ಶುಭಾಶಯಗಳ ಹೂಮಳೆ ಸುರಿಸಿದ್ದಾರೆ.

ಮೂಲತಃ ಬೆಂಗಾಳಿಯಾಗಿರುವ ನಟಿ ಕೃಷ್ಣ ಮುಖರ್ಜಿ 2014ರಲ್ಲಿ ಜಲ್ಲಿ ಅಂಜಲಿ ಧಾರಾವಾಹಿಯಲ್ಲಿ ಶೀನಾ ಪಾತ್ರದ ಮೂಲಕ ಮೊದಲ ಬಾರಿಗೆ ನಟನೆ ಆರಂಭಿಸಿದರು. ''ಶುಭ ಶಕುನ್''​ನಲ್ಲಿ ಶಕುನ್​ ಶಿಂಧೆ ಜೈಸ್ವಾಲ್​, ''ಕುಚ್​ ತೊ ಹೈ: ನಾಗಿನ್​ ಎಕ್​ ನಾಯೆ ರಂಗ್​ ಮೇ'' ನಲ್ಲಿ ಪ್ರಿಯ ರೆಹನ್​ ಸಿಂಗನಿಯಾ ಪಾತ್ರ ಜೊತೆಗೆ ''ಯೇ ಹೇ ಮೊಹಬ್ಬತೇ'' ಧಾರಾವಾಹಿಯಲ್ಲಿ ಆಲಿಯಾ ರಾಘವ್​ ಬಲ್ಲಾ ಪಾತ್ರದ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ.

ಮಾರ್ಚ್​ 12ರಂದು ಅರಿಶಿಣ ಕಾರ್ಯಕ್ರಮದ ಮೂಲಕ ಮದುವೆ ಶಾಸ್ತ್ರಗಳು ಪ್ರಾರಂಭವಾಗಿದ್ದವು. ಅರಿಶಿಣ ಶಾಸ್ತ್ರದಲ್ಲಿ ನಟಿ ಬಿಳಿ ಲೆಹಾಂಗಾದಲ್ಲಿ ಹಳದಿ ದುಪ್ಪಟ್ಟದಲ್ಲಿ ಮಿಂಚಿದ್ದರು. ನಿನ್ನೆ ಸಂಜೆ ಸಂಗೀತ ಶಾಸ್ತ್ರ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರದಲ್ಲಿ ನಟಿ ಗಾಢ ಹಸಿರು ಬಣ್ಣದ ಧಿರಿಸಿನಿಂದ ಕಂಗೊಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಹುಕ್ಕಾ ಸೇವಿಸುವ ಮೂಲಕ ಹಾಡಿಗೆ ಹೆಜ್ಜೆ ಹಾಕಿದ್ದನ್ನು ವಿಡಿಯೋಗಳಲ್ಲಿ ಕಾಣಬಹುದಾಗಿದೆ.

ನಟಿಯ ಈ ಮದುವೆ ಸಮಾರಂಭದಲ್ಲಿ ಅನೇಕ ಕಿರುತೆರೆ ನಟ-ನಟಿಯರು ಸೇರಿದಂತೆ ಬಿಗ್​ಬಾಸ್​​ ದಂಪತಿ ಜಸ್ಮಿನ್​ ಬಾಸಿನ್​, ಶೇರಿನ್​ ಮಿರ್ಜಾ ದಂಪತಿಗಳು ಭಾಗಿಯಾಗಿದ್ದರು.

ಇದನ್ನೂ ಓದಿ: 58ನೇ ವಸಂತಕ್ಕೆ ಕಾಲಿರಿಸಿದ 'ಮಿಸ್ಟರ್​​ ಪರ್ಫೆಕ್ಷನಿಸ್ಟ್ ಆಫ್ ಬಾಲಿವುಡ್'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.