ಹೈದಾರಾಬಾದ್ : ಭಾರತೀಯ ಚಿತ್ರರಂಗದಲ್ಲಿ ಹತ್ತಾರು ಹೊಸ ದಾಖಲೆ ನಿರ್ಮಾಣ ಮಾಡಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಇದೀಗ ಮತ್ತೊಂದು ರೆಕಾರ್ಡ್ ಬರೆದಿದೆ. ದಕ್ಷಿಣ ಕೊರಿಯಾದ ಸಿಯೋಲ್ನಲ್ಲೂ ರಾಕಿ ಭಾಯ್ ಚಿತ್ರ ಪ್ರದರ್ಶನಗೊಂಡಿದೆ. ಈ ಮೂಲಕ ಈ ದೇಶದಲ್ಲಿ ಪ್ರದರ್ಶನಗೊಂಡಿರುವ ಮೊದಲ ಕನ್ನಡ ಚಿತ್ರವಾಗಿ ಹೊರಹೊಮ್ಮಿದೆ.
ಚಿತ್ರ ತೆರೆ ಕಂಡಾಗಿನಿಂದಲೂ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿರುವ ಕೆಜಿಎಫ್ ಚಾಫ್ಟರ್2 ಈಗಾಗಲೇ ಸಾವಿರ ಕೋಟಿ ಕ್ಲಬ್ ಸೇರಿ ಮುನ್ನುಗ್ಗುತ್ತಿದೆ. ಹಿಂದಿಯಲ್ಲಿ ದಂಗಲ್ ಚಿತ್ರದ ರೆಕಾರ್ಡ್ ಸಹ ಬ್ರೇಕ್ ಮಾಡಿದೆ. ಇದರ ಮಧ್ಯೆ ದಕ್ಷಿಣ ಕೊರಿಯಾದ ಸಿಯೋಲ್ನಲ್ಲೂ ಪ್ರದರ್ಶನ ಕಾಣುವ ಮೂಲಕ ಈ ಸಾಧನೆ ಮಾಡಿರುವ ಮೊದಲ ಕನ್ನಡದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
-
Language was never a barrier for him, he showed it to Indian Cinema
— Team Yash FC (@TeamYashFC) May 8, 2022 " class="align-text-top noRightClick twitterSection" data="
Now the craze reached outside the country as well#KGFChapter2 got a special screening in south Korea 🔥
Proud moment for us ❤️ #YashBOSS #TeamYash @TheNameIsYash
#KGF2inKorea #KGF2 pic.twitter.com/EpRz7eJM8z
">Language was never a barrier for him, he showed it to Indian Cinema
— Team Yash FC (@TeamYashFC) May 8, 2022
Now the craze reached outside the country as well#KGFChapter2 got a special screening in south Korea 🔥
Proud moment for us ❤️ #YashBOSS #TeamYash @TheNameIsYash
#KGF2inKorea #KGF2 pic.twitter.com/EpRz7eJM8zLanguage was never a barrier for him, he showed it to Indian Cinema
— Team Yash FC (@TeamYashFC) May 8, 2022
Now the craze reached outside the country as well#KGFChapter2 got a special screening in south Korea 🔥
Proud moment for us ❤️ #YashBOSS #TeamYash @TheNameIsYash
#KGF2inKorea #KGF2 pic.twitter.com/EpRz7eJM8z
ಸಿಯೋಲ್ನಲ್ಲಿ ಹಿಂದಿ ಅವತರಣಿಕೆಯಲ್ಲಿ ಈ ಚಿತ್ರ ತೆರೆ ಕಂಡಿದ್ದು, ಟ್ವಿಟರ್ನಲ್ಲಿ ಇದರ ಕೆಲವೊಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿವೆ. ವಿಶ್ವದಾದ್ಯಂತ ಏಪ್ರಿಲ್ 14ರಂದು ಈ ಸಿನಿಮಾ ಕನ್ನಡ, ಹಿಂದಿ, ಮಲಯಾಳಂ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಿತ್ತು.
ಚಿತ್ರದಲ್ಲಿ ನಟ ಯಶ್, ಬಾಲಿವುಡ್ನ ಸಂಜಯ್ ದತ್, ನಟಿ ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರಾಜ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಚಿತ್ರ ಈಗಾಗಲೇ ನೇಪಾಳ, ಬಾಂಗ್ಲಾದೇಶ, ಯುಎಸ್, ಮಲೇಷಿಯಾ, ಸಿಂಗಾಪೂರ, ಶ್ರೀಲಂಕಾ ಸೇರಿದಂತೆ ಅನೇಕ ದೇಶಗಳಲ್ಲಿ ಪ್ರದರ್ಶನ ಕಂಡಿದೆ.
ಇದನ್ನೂ ಓದಿ: ಓವರ್ ಸೀಸ್ ಮಾರುಕಟ್ಟೆಯಲ್ಲಿ ದಾಖಲೆ ಬರೆದ 'ವಿಕ್ರಾಂತ್ ರೋಣ'
ಆರ್ಆರ್ಆರ್ ದಾಖಲೆ ಬ್ರೇಕ್ : ಲಭ್ಯವಾಗಿರುವ ಮಾಹಿತಿ ಪ್ರಕಾರ, ಕೆಜಿಎಫ್ ಚಾಪ್ಟರ್ 2 ಈಗಾಗಲೇ 1129.38 ಕೋಟಿ ರೂಪಾಯಿ ಗಳಿಕೆ ಮಾಡಿದ್ದು, ಈ ಮೂಲಕ ರಾಜಮೌಳಿಯ ಆರ್ಆರ್ಆರ್ ದಾಖಲೆ ಸಹ ಬ್ರೇಕ್ ಮಾಡಿದೆ. RRR ಈವರೆಗೆ 1127.65 ಕೋಟಿ ರೂ. ಗಳಿಕೆ ಮಾಡಿದೆ.