ETV Bharat / entertainment

ರಾಕಿಂಗ್ ಸ್ಟಾರ್ ಅಭಿಮಾನಿಗಳೇ ಕೇಳಿ; ಗಣೇಶ ಹಬ್ಬದಂದು ಯಶ್​​ ಕೊಡಲಿದ್ದಾರೆ ಬಿಗ್ ‌ಸರ್​​ಪ್ರೈಸ್!​​

author img

By ETV Bharat Karnataka Team

Published : Sep 9, 2023, 6:16 PM IST

Updated : Sep 9, 2023, 6:25 PM IST

Yash 19: ನಟ ಯಶ್​ ಮುಖ್ಯಭೂಮಿಕೆಯ ಮುಂದಿನ ಸಿನಿಮಾ ಗಣೇಶ ಚತುರ್ಥಿ ಸಂದರ್ಭ ಘೋಷಣೆ ಆಗಲಿದೆ.

Yash 19 movie
ಯಶ್​​ 19 ಚಿತ್ರ

ರಾಕಿಂಗ್ ಸ್ಟಾರ್ ಯಶ್ ಮುಖ್ಯಭೂಮಿಕೆಯ ಮುಂದಿನ ಸಿನಿಮಾ ಕುರಿತು ಚರ್ಚೆ ಜೋರಾಗೇ ನಡೆಯುತ್ತಿದೆ. ಕೆಜಿಎಫ್ 2 ಸಿನಿಮಾ‌ ಆದ ಬಳಿ ಏಕೆ ನಟ ಹೊಸ‌ ಸಿನಿಮಾ‌ ಅನೌನ್ಸ್​​ ಮಾಡ್ತಾ ಇಲ್ಲ?, ಯಶ್ ​​19 ಚಿತ್ರದ ಸೂತ್ರಧಾರ ಯಾರು? ಕಥೆ ಹೇಗಿರಬಹುದು? ನಟಿ ಯಾರಾಗಬಹುದು? ಈ ರೀತಿಯ ಚರ್ಚೆ ಶುರುವಾಗಿ ಒಂದು ವರ್ಷ ಕಳೆದಿದೆ‌. ಅದರೆ ಈ ಕುತೂಹಲಕಾರಿ ಪ್ರಶ್ನೆಗೆ ಉತ್ತರ ರಾಕಿ ಆರಾಧಕರಿಗೆ ಇನ್ನೂ ಸಿಕ್ಕಿಲ್ಲ. ಅಂತೆ ಕಂತೆಗಳ ನಡುವೆ ಈಟಿವಿ ಭಾರತಕ್ಕೆ ''YASH 19'' ಚಿತ್ರದ ಬಗ್ಗೆ ಎಕ್ಸ್​ಕ್ಲೂಸಿವ್ ಮಾಹಿತಿ ಸಿಕ್ಕಿದ್ದು, ಅದರ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.

ಕಳೆದ ಮೇ.ನಿಂದ ಪ್ಯಾನ್ ಇಂಡಿಯಾ ಪ್ರೇಕ್ಷಕರಲ್ಲಿ ಕಾಡ್ತಿರುವ ಏಕೈಕ ಪ್ರಶ್ನೆ ರಾಕಿಭಾಯ್ ಮುಂದಿನ ಚಿತ್ರಯಾವುದು?. ಈ ವಿಚಾರವಾಗಿ ದಿನಗಳ ಜೊತೆ ಹಲವು ಅಂತೆ ಕಂತೆಗಳೂ ಉರುಳಿ ಹೋಗಿವೆ. ಇಷ್ಟಾದ್ರೂ ನಟ ಯಶ್ ಮುಂದಿನ ಚಿತ್ರದ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಯಶ್ ಶಂಕರ್ ಜೊತೆ ಸಿನಿಮಾ ಮಡ್ತಾರೆ, ಅಲ್ಲದೇ ಹೊಂಬಾಳೆಯಲ್ಲಿ ನೀಲ್ ಜೊತೆ ಕೆಜಿಎಫ್ 3 ಮಾಡ್ತಾರೆ ಎಂಬ ಅಂತೆ - ಕಂತೆಗಳು ಈಗಾಗಲೇ ಸದ್ದು ಮಾಡಿದೆ. ಅಷ್ಟೇ ಅಲ್ಲ ಟಾಲಿವುಡ್ ಮಾಲಿವುಡ್ ನಿರ್ದೇಶಕರು​ಗಳ ಹೆಸರು ಯಶ್ 19 ಜೊತೆ ಕೇಳಿಬಂದು ಸೌಂಡ್ ಮಾಡಿತ್ತು. ಆದರೆ ಅವೆಲ್ಲ ಕೇವಲ ಗಾಳಿ ಸುದ್ದಿಗೆ ಸೀಮಿತವಾಗಿದೆ.

ಕಳೆದ ವರ್ಷ ಏಪ್ರಿಲ್‍ 14ರಂದು ಕೆಜಿಎಫ್‍ 2 ಬಿಡುಗಡೆಯಾಗಿ ಧೂಳೆಬ್ಬಿಸಿತ್ತು. ಬಳಿಕ ಅವರ ಮುಂದಿನ ಚಿತ್ರ ಯಾವುದು ಎಂಬ ಕುತೂಹಲ ಗರಿಗೆದರಿತು. ವರ್ಷ ಕಳೆದರೂ ನಟನ ಮುಂದಿನ ಸಿನಿಮಾ ಘೋಷಣೆಯಾಗಿಲ್ಲ. ಸದ್ಯ ಯಶ್ ಆಪ್ತರು ಹೇಳುವ ಪ್ರಕಾರ, ಈ ಗಣೇಶ ಚತುರ್ಥಿ ಶುಭ ಸಂದರ್ಭ ರಾಕಿ‌ ಭಾಯ್‌ ಗುಡ್ ನ್ಯೂಸ್ ಕೊಡ್ತಾರೆ ಅಂತಾ ಹೇಳಲಾಗುತ್ತಿದೆ.

ಇನ್ನೂ ಯಶ್ ಮಲೆಯಾಳಂ ‌ಲೈಡಿ‌ ಡೈರೆಕ್ಟರ್ ಗೀತು ಮೋಹನ್‍ದಾಸ್‍ ಜೊತೆ 19ನೇ ಸಿನಿಮಾ ‌ಮಾಡ್ತಾರೆ ಅನ್ನೋದು‌ ಸೋಷಿಯಲ್ ‌ಮೀಡಿಯಾದಲ್ಲಿ ಟ್ರೆಂಡ್ ಆಗಿತ್ತು. ಆದರೆ, ಯಶ್‍ ಮಾತ್ರ 19ನೇ ಸಿನಿಮಾದ‌ ನಿರ್ದೇಶಕರು ಯಾರು? ಯಾವ ನಿರ್ಮಾಣ ಸಂಸ್ಥೆ ‌ಎಂಬುದರ‌ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಇದನ್ನೂ ಓದಿ: ಜನ್ಮದಿನದ ಸಂಭ್ರಮದಲ್ಲಿ ಬಾಲಿವುಡ್​ ಕಿಲಾಡಿ: ಅಭಿಮಾನಿಗಳ ಹೃದಯ ಗೆದ್ದ ಅಕ್ಷಯ್​ ಕುಮಾರ್​ ಸಿನಿಮಾಗಳಿವು!

ಕೆಲ ದಿನಗಳ ಹಿಂದೆ ಯಶ್ ತಮ್ಮ ಕುಟುಂಬಸ್ಥರೊಂದಿಗೆ ಮೈಸೂರಿನ ನಂಜುಂಡೇಶ್ವರ ಸ್ವಾಮಿ ‌ದೇವಸ್ಥಾನಕ್ಕೆ‌‌ ಭೇಟಿ ಕೊಟ್ಟಿದ್ದರು. ಆ ಸಂದರ್ಭ ಮಾತನಾಡಿದ್ದ ನಟ, ಜನ ನನಗೆ ಆಶೀರ್ವಾದ ಮಾಡಿ ಕಳುಹಿಸಿದ್ದಾರೆ. ಅವರು ಕೊಡುವ ದುಡ್ಡಿಗೆ ಮೋಸ ಆಗಬಾರದು. ಅದಕ್ಕೆ ಮೌಲ್ಯ ಇದೆ. ಅವರು ಫ್ರೀಯಾಗಿ ಬಂದು ಸಿನಿಮಾ ನೋಡುವುದಿಲ್ಲ. ಹಾಗಾಗಿ, ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು. ಬಹಳ ದಿನಗಳಿಂದ ಕೆಲಸ ಮಾಡುತ್ತಲೇ ಇದ್ದೇವೆ. ನಾನಂತೂ ಒಂದು ದಿನ, ಒಂದು ಕ್ಷಣವನ್ನೂ ವೇಸ್ಟ್​ ಮಾಡುತ್ತಿಲ್ಲ. ಇಡೀ ದೇಶ, ಜಗತ್ತು ನೋಡುತ್ತಿದೆ. ಆದಷ್ಟು ಬೇಗ ಬರುತ್ತೇನೆ ಎಂದು ಹೇಳಿದ್ದರು.

ಇದನ್ನೂ ಓದಿ: ವೆಲ್ಕಮ್​​ ಟು ದ ಜಂಗಲ್​ ಟೀಸರ್​: ರವೀನಾ ಟಂಡನ್​ಗೆ 'Purane Chawal' ಎಂದ ಅಕ್ಷಯ್​ ಕುಮಾರ್​

ಅದಾಗಿ ದಿನಗಳುರುಳಿದರೂ ಯಶ್‍ ಅವರ ಮುಂದಿನ ಚಿತ್ರದ ಸುದ್ದಿ ಇಲ್ಲ. ಹೀಗಿರುವಾಗ, ಗಣೇಶ ಚತುರ್ಥಿ ಹಬ್ಬಕ್ಕೆ ಅಧಿಕೃತವಾಗಿ ಯಶ್‍ ಅಭಿನಯದ 19ನೇ ಚಿತ್ರ ಘೋಷಣೆ ಆಗುತ್ತೆ ಅಂತಾ ಆಪ್ತರು ತಿಳಿಸಿದ್ದಾರೆ. ಯಾವುದಕ್ಕೂ ಗಣೇಶ ಹಬ್ಬದವರೆಗೂ ಕಾದು ನೋಡಬೇಕಿದೆ.

Last Updated : Sep 9, 2023, 6:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.