ETV Bharat / entertainment

'ವೀಕೆಂಡ್ ವಿತ್ ರಮೇಶ್​'ಗೆ ಬರ್ತಿದ್ದಾರೆ ನಾ.ಸೋಮೇಶ್ವರ, ಚಿನ್ನಿ ಪ್ರಕಾಶ್ - weekend with Ramesh guest

ಈ ವಾರದ 'ವೀಕೆಂಡ್ ವಿತ್ ರಮೇಶ್​' ಕಾರ್ಯಕ್ರಮಕ್ಕೆ ನಾ.ಸೋಮೇಶ್ವರ ಮತ್ತು ಚಿನ್ನಿ ಪ್ರಕಾಶ್ ಅತಿಥಿಗಳಾಗಿ ಆಗಮಿಸಲಿದ್ದಾರೆ.

weekend with Ramesh
ವೀಕೆಂಡ್ ವಿತ್ ರಮೇಶ್
author img

By

Published : May 9, 2023, 7:06 PM IST

'ವೀಕೆಂಡ್ ವಿತ್ ರಮೇಶ್​' ಕನ್ನಡದ ಜನಪ್ರಿಯ ಕಾರ್ಯಕ್ರಮ. ಸ್ಯಾಂಡಲ್​ವುಡ್​ ಪ್ರತಿಭಾವಂತ ನಟ ರಮೇಶ್​ ಅರವಿಂದ್​​ ನಿರೂಪಣೆಯ ಈ ಕಾರ್ಯಕ್ರಮ ಕನ್ನಡಿಗರ ಮನೆಗೆದ್ದಿದೆ. 'ವೀಕೆಂಡ್ ವಿತ್ ರಮೇಶ್​' ಸಾಧಕರು ಬಂದು ತಮ್ಮ ಸಾಧನೆಯ ಕಥೆ ಅನಾವರಣಗೊಳಿಸುತ್ತಾರೆ. ಈ ಮೂಲಕ ಅದೆಷ್ಟೋ ಯುವ ಮನಸ್ಸುಗಳಿಗೆ ಸ್ಫೂರ್ತಿ ಆಗುತ್ತಾರೆ. ಅದರಂತೆ ಈ ವಾರಾಂತ್ಯ ನೃತ್ಯ ಸಾಧಕ ಚಿನ್ನಿ ಪ್ರಕಾಶ್ ಮತ್ತು ಜ್ಞಾನಿ ನಾ.ಸೋಮೇಶ್ವರ ನಿಮ್ಮ ಮನೆಗೆ ಬರಲಿದ್ದಾರೆ.

ಕಳೆದ ವಾರಾಂತ್ಯ ಸ್ಯಾಂಡಲ್​ವುಡ್​ನ ನೆನಪಿರಲಿ ಪ್ರೇಮ್​ ಆಗಮಿಸಿ ತಮ್ಮ ಜೀವನದ ಸಾಧನೆಯ ಕಥೆ ತೆರೆದಿಟ್ಟರು. ಅಭಿಮಾನಿಗಳಿಗೆ ಈ ಎಪಿಸೋಡ್​ ಇಷ್ಟ ಕೂಡ ಆಯಿತು. ಎಂದಿನಂತೆ ಮುಂದಿನ ಸಂಚಿಕೆಯ ಅತಿಥಿ ಬಗ್ಗೆ ಅಭಿಮಾನಿಗಳು ಉತ್ಸುಕರಾಗಿದ್ದರು. ಇದೀಗ ಜೀ ವಾಹಿನಿ ಕಾರ್ಯಕ್ರಮದ ಪ್ರೋಮೋ ರಿಲೀಸ್​ ಮಾಡಿದೆ.

ಈ ವಾರ ಬರಲಿರುವ ಸಾಧಕರಲ್ಲಿ ಒಬ್ಬರು ಮನರಂಜನಾ ಕ್ಷೇತ್ರದ ಸಾಧಕರಾದರೆ ಮತ್ತೋರ್ವರು ವೈದ್ಯಕೀಯ, ಸಾಹಿತ್ಯ, ಶೈಕ್ಷಣಿಕ, ಕಿರುತೆರೆ ಹೀಗೆ ಹಲವು ಕ್ಷೇತ್ರದಲ್ಲಿ ಸೈ ಎನಿಸಿಕೊಂಡವರು. ಸಾಮಾಜಿಕ ಜಾಲತಾಣದಲ್ಲಿ 'ನೃತ್ಯ ಲೋಕದ ಲೆಜೆಂಡ್ ಚಿನ್ನಿ ಪ್ರಕಾಶ್, ನಡೆದಾಡುವ ಗ್ರಂಥಾಲಯ ನಾ.ಸೋಮೇಶ್ವರ ಈ ವೀಕೆಂಡ್‌ ಅತಿಥಿಗಳು' ಎಂದು ಬರೆದು ಜೀ ವಾಹಿನಿ ಪ್ರೋಮೋ ಹಂಚಿಕೊಂಡಿದೆ. ಹಾಗಾಗಿ ಮುಂದಿನ ಸಂಚಿಕೆ ಬಗ್ಗೆ ಅಭಿಮಾನಿಗಳು ಕಾತರರಾಗಿದ್ದಾರೆ.

ಶನಿವಾರ ಮತ್ತು ಭಾನುವಾರ ಪ್ರಸಾರವಾಗಲಿರುವ 'ವೀಕೆಂಡ್ ವಿತ್ ರಮೇಶ್​' ಸೀಸನ್​ 5ಕ್ಕೆ ಡ್ಯಾನ್ಸ್​ ಕೊರಿಯೋಗ್ರಾಫರ್​​​ ಚಿನ್ನಿ ಪ್ರಕಾಶ್ ಆಗಮಿಸಲಿದ್ದಾರೆ. ಇವರು ಬಹುಭಾಷಾ ನಟರನ್ನು ಕುಣಿಸಿದ ಖ್ಯಾತಿ ಹೊಂದಿದ್ದಾರೆ. ಈ ಜನಪ್ರಿಯ ನೃತ್ಯ ನಿರ್ದೇಶಕ ನಡೆದು ಬಂದ ಹಾದಿ ಕನ್ನಡ ಕಾರ್ಯಕ್ರಮದಲ್ಲಿ ಅನಾವರಣಗೊಳ್ಳಲಿದೆ. ಈ ಡ್ಯಾನ್ಸರ್​​ ಬಗ್ಗೆ ಅಮಿತಾಭ್​ ಬಚ್ಚನ್​ ಸೇರಿದಂತೆ ಹಲವು ಸಿನಿ ಗಣ್ಯರು ಮಾತನಾಡಿದ್ದಾರೆ. ಈ ವಿಶೇಷ ವಿಡಿಯೋಗಳು ಕಾರ್ಯಕ್ರಮದಲ್ಲಿ ಪ್ರಸಾರವಾಗಲಿದೆ. ಚಿನ್ನಿ ಮಾಸ್ಟರ್ ಪತ್ನಿ ಸಹ ಓರ್ವ ಅದ್ಭುತ ನೃತ್ಯಗಾರ್ತಿ, ನೃತ್ಯ ನಿರ್ದೇಶಕಿ. ಈ ದಂಪತಿ ಕಾರ್ಯಕ್ರಮದಲ್ಲಿ ಮೈ ಬಳುಕಿಸಿ, ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣ ಬಡಿಸಲಿದ್ದಾರೆ.

ಇದನ್ನೂ ಓದಿ: ಅರಿಜಿತ್​​ ಸಿಂಗ್ ಕೈ ಹಿಡಿದೆಳೆದ ಮಹಿಳಾ ಅಭಿಮಾನಿ: ಸ್ಟಾರ್​ ಸಿಂಗರ್‌ಗೆ ಗಾಯ

'ಥಟ್​ ಅಂತ ಹೇಳಿ' ಕಾರ್ಯಕ್ರಮದ ಮೂಲಕ ಜನಪ್ರಿಯರಾದ ನಾ.ಸೋಮೇಶ್ವರ ಅವರು ಈ ಶೋನಲ್ಲಿ ತಮ್ಮ ಬಾಲ್ಯ, ಶಿಕ್ಷಣ, ವೃತ್ತಿಜೀವನ, ಕಾರ್ಯಕ್ರಮಗಳು ಹೀಗೆ ಹಲವು ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ. 'ವೀಕೆಂಡ್ ವಿತ್ ರಮೇಶ್​' ವೇದಿಕೆಯಲ್ಲೇ ತಮ್ಮ ಜನಪ್ರಿಯ 'ಥಟ್​ ಅಂತ ಹೇಳಿ' ಕಾರ್ಯಕ್ರಮವನ್ನು ನಡೆಸಿ ಮನರಂಜನೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಕೇರಳ ಸ್ಟೋರಿ ಬ್ಯಾನ್​ 'ರಾಜಕೀಯ ಪ್ರೇರಿತ': ಸಿನಿಮಾ ವೀಕ್ಷಿಸಿ ನಿರ್ಧಾರ ಕೈಗೊಳ್ಳಿ ಎಂದ ನಿರ್ದೇಶಕ

ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಬ್ಲರ್​ ಇಮೇಜ್​ ಒಂದನ್ನು ಹಂಚಿಕೊಂಡಿದ್ದ ಜೀ ವಾಹಿನಿ, ಈ ವಾರದ ಅತಿಥಿಗಳು ಯಾರೆಂದು ಊಹಿಸಿ ಅಂತಾ ನೆಟ್ಟಿಗರಲ್ಲಿ ಪ್ರಶ್ನೆ ಕೇಳಿತ್ತು. 'ಒಬ್ಬರು ಡ್ಯಾನ್ಸ್ ಲೋಕದ ಚಿನ್ನ, ಒಬ್ಬರ ಕನ್ನಡ ಕೇಳೋದೇ ಚೆನ್ನ. ಈ ವೀಕೆಂಡ್‌ ಗೆಸ್ಟ್‌ಗಳು ಯಾರು ಹೇಳಿ?' ಕೇಳಿತ್ತು. ಬಹುತೇಕರು ಸರಿಯಾದ ಉತ್ತರವನ್ನೇ ಕೊಟ್ಟಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.