ಕಾಶ್ಮೀರಿ ಪಂಡಿತರ ನರಮೇಧದ ಬಗ್ಗೆ 'ಕಾಶ್ಮೀರಿ ಫೈಲ್ಸ್' ಸಿನಿಮಾ ನಿರ್ಮಾಣ ಮಾಡಿದ್ದ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಇದೀಗ ಮಾರಕ ಕೊರೊನಾ ಸೋಂಕಿಗೆ ಮದ್ದು ಅರೆದ ಭಾರತದ ವಿಜ್ಞಾನಿಗಳ ಸಾಧನೆಯನ್ನು ಅನಾವರಣ ಮಾಡುವ 'ದಿ ವ್ಯಾಕ್ಸಿನ್ ವಾರ್' ಚಿತ್ರ ತಯಾರಿಸಿದ್ದಾರೆ. ಈ ಸಿನಿಮಾವು ಸೆಪ್ಟಂಬರ್ 28 ರಂದು ತೆರೆ ಕಾಣಲು ಸಿದ್ಧವಾಗಿದೆ. ಈ ಮಧ್ಯೆ ಚಿತ್ರದ ಗ್ರ್ಯಾಂಡ್ ಕ್ಯಾಂಪೇನ್ ಫಿನಾಲೆ ಸೆಪ್ಟೆಂಬರ್ 4 ರಂದು ಐಕಾನಿಕ್ ಟೈಮ್ಸ್ ಸ್ವೇರ್ನಲ್ಲಿ ನಡೆಯಿತು.
-
HISTORY WAS CREATED TODAY: On the eve of #G20India
— Vivek Ranjan Agnihotri (@vivekagnihotri) September 5, 2023 " class="align-text-top noRightClick twitterSection" data="
Who would have thought that one day NASADIYA SUKTA from RIG VEDA on the science of how the UNIVERSE WAS CREATED from #TheVaccineWar will be performed in KATHAK form at Times Square, NY.
NOBODY can ever destroy what is SANTAN. pic.twitter.com/RAWiiB5z4p
">HISTORY WAS CREATED TODAY: On the eve of #G20India
— Vivek Ranjan Agnihotri (@vivekagnihotri) September 5, 2023
Who would have thought that one day NASADIYA SUKTA from RIG VEDA on the science of how the UNIVERSE WAS CREATED from #TheVaccineWar will be performed in KATHAK form at Times Square, NY.
NOBODY can ever destroy what is SANTAN. pic.twitter.com/RAWiiB5z4pHISTORY WAS CREATED TODAY: On the eve of #G20India
— Vivek Ranjan Agnihotri (@vivekagnihotri) September 5, 2023
Who would have thought that one day NASADIYA SUKTA from RIG VEDA on the science of how the UNIVERSE WAS CREATED from #TheVaccineWar will be performed in KATHAK form at Times Square, NY.
NOBODY can ever destroy what is SANTAN. pic.twitter.com/RAWiiB5z4p
ಕಾರ್ಯಕ್ರಮದಲ್ಲಿ ಸಮೂಹ ನೃತ್ಯದೊಂದಿಗೆ ಸಮ್ಮೋಹನಗೊಳಿಸುವ ಫ್ಲಾಶ್ ಮಾಬ್ ಪ್ರದರ್ಶನವು ಇತ್ತು. ಈ ಪ್ರದರ್ಶನವು ಅಲ್ಲಿದ್ದ ಅಸಂಖ್ಯಾತ ಪ್ರೇಕ್ಷಕರ ಮೇಲೆ ಶಾಶ್ವತ ಪ್ರಭಾವ ಬೀರಿತು. ಈ ಅದ್ಭುತ ಪ್ರದರ್ಶನದ ದೃಶ್ಯವನ್ನು ವಿವೇಕ್ ಅಗ್ನಿಹೋತ್ರಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಎಕ್ಸ್ನಲ್ಲಿ (ಹಿಂದಿನ ಟ್ವಿಟರ್) ವಿಡಿಯೋ ಹಂಚಿಕೊಂಡಿರುವ ನಟ, 'ಇಂದು ಇತಿಹಾಸ ಸೃಷ್ಟಿಯಾಗಿದೆ' ಎಂದು ಬರೆದುಕೊಂಡಿದ್ದಾರೆ.
-
DATE ANNOUNCEMENT:
— Vivek Ranjan Agnihotri (@vivekagnihotri) August 15, 2023 " class="align-text-top noRightClick twitterSection" data="
Dear friends, your film #TheVaccineWar #ATrueStory will release worldwide on the auspicious day of 28th September 2023.
Please bless us. pic.twitter.com/qThKxTjPiw
">DATE ANNOUNCEMENT:
— Vivek Ranjan Agnihotri (@vivekagnihotri) August 15, 2023
Dear friends, your film #TheVaccineWar #ATrueStory will release worldwide on the auspicious day of 28th September 2023.
Please bless us. pic.twitter.com/qThKxTjPiwDATE ANNOUNCEMENT:
— Vivek Ranjan Agnihotri (@vivekagnihotri) August 15, 2023
Dear friends, your film #TheVaccineWar #ATrueStory will release worldwide on the auspicious day of 28th September 2023.
Please bless us. pic.twitter.com/qThKxTjPiw
ಈ ಸುಂದರ ಕಥಕ್ ನೃತ್ಯವನ್ನು ಪ್ರಸಿದ್ಧ ಕಥಕ್ ನೃತ್ಯಗಾರ್ತಿ ಮತ್ತು ಖ್ಯಾತ ನಟಿ ಅರ್ಚನಾ ಜೋಗ್ಲೇಕರ್ ನೇತೃತ್ವದಲ್ಲಿ ಪ್ರದರ್ಶಿಸಲಾಗಿದೆ. ನ್ಯೂಜೆರ್ಸಿಯಲ್ಲಿರುವ ಅವರ ಐವಿ ಲೀಗ್ ಕಥಕ್ ನೃತ್ಯ ಅಕಾಡೆಮಿ ಅರ್ಚನಾ ಆರ್ಟ್ಸ್ನ ವಿದ್ಯಾರ್ಥಿಗಳು ಇದನ್ನು ಪ್ರಸ್ತುತಪಡಿಸಿದ್ದಾರೆ. ವಿಡಿಯೋದಲ್ಲಿ, ಬಾಲಕಿಯರ ಪರ್ಫಾಮೆನ್ಸ್ ಮುಗಿದ ಕೂಡಲೇ ಅಲ್ಲಿ ನಿಂತಿದ್ದ ಪ್ರೇಕ್ಷಕರು ಜೋರಾಗಿ ಚಪ್ಪಾಳೆ ತಟ್ಟಿದರು. ವಿವೇಕ್ ರಂಜನ್ ಅಗ್ನಿಹೋತ್ರಿ ಅವರ 'ದಿ ವ್ಯಾಕ್ಸಿನ್ ವಾರ್' ವಿಶ್ವದಾದ್ಯಂತ ಸಂಚಲನ ಸೃಷ್ಟಿಸಲಿದೆ ಎಂಬುದಕ್ಕೆ ಈ ಜೋರಾದ ಚಪ್ಪಾಳೆಯೇ ಸಾಕ್ಷಿ.
ಇದನ್ನೂ ಓದಿ: ತಾಕತ್ತಿದ್ದರೆ 'ಮಣಿಪುರ ಫೈಲ್ಸ್' ಸಿನಿಮಾ ಮಾಡಿ: ಕಾಶ್ಮೀರಿ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ನೆಟ್ಟಿಗರ ಸವಾಲು
ಸಿನಿಮಾ ಟೀಸರ್ ಬಿಡುಗಡೆ: ಭಾರತದ 145 ಕೋಟಿ ಜನರಿಗೆ ಉಚಿತ ಲಸಿಕೆ ನೀಡುವುದರ ಜೊತೆಗೆ ವಿದೇಶಗಳಿಗೂ ಸರಬರಾಜು ಮಾಡಿದ ನಮ್ಮ ವಿಜ್ಞಾನಿಗಳ ಸಾಹಸವನ್ನು ದಿ ವ್ಯಾಕ್ಸಿನ್ ವಾರ್ನಲ್ಲಿ ತೋರಿಸಲಾಗಿದೆ. ಈ ತಿಂಗಳ ಆರಂಭದಲ್ಲಿ ಚಿತ್ರದ ಟೀಸರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ನಾನಾ ಪಾಟೇಕರ್, ಅನುಪಮ್ ಖೇರ್ ಮತ್ತು ಪಲ್ಲವಿ ಜೋಶಿ ಸೇರಿದಂತೆ ಮುಂತಾದ ನಟರು ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
ಶುದ್ಧ ವಿಜ್ಞಾನದ ಚಿತ್ರ: ಮಾರಕ ಕೊರೊನಾಕ್ಕೆ ಲಸಿಕೆ ತಯಾರಿಸಲು ನಮ್ಮ ವಿಜ್ಞಾನಿಗಳು ಹೇಗೆ ಲ್ಯಾಬ್‌ಗಳಲ್ಲೇ ಕಳೆದರು. ತ್ಯಾಗ ಬಲಿದಾನ ನಡೆಸಿದರು ಎಂಬುದೇ ಈ ಚಲನಚಿತ್ರವಾಗಿದೆ. ಯುವ ಪೀಳಿಗೆಯು ಈ 'ಶುದ್ಧ ವಿಜ್ಞಾನದ ವಿಜಯ'ದ ಸಿನಿಮಾವನ್ನು ನೋಡಬೇಕು ಎಂದು ನಾನು ಬಯಸುವೆ. ಕೋವಿಡ್ ನಿರ್ವಹಣೆ ಮತ್ತು ಫ್ರಂಟ್ ಲೈನ್ ವಾರಿಯರ್ಸ್, ಲಸಿಕೆಗಳ ಮೇಲೆ ಹೆಚ್ಚು ಗಮನಹರಿಸಿದ್ದೇವೆ ಎಂದು ವಿವೇಕ್ ರಂಜನ್ ಅಗ್ನಿಹೋತ್ರಿ ಈ ಹಿಂದೆ ತಿಳಿಸಿದ್ದರು. ಅಲ್ಲದೇ,'ದಿ ವ್ಯಾಕ್ಸಿನ್ ವಾರ್' ಚಿತ್ರವನ್ನು ಕೊರೊನಾಗೆ ಯಶಸ್ವಿಯಾಗಿ ಲಸಿಕೆಯನ್ನು ಕಂಡುಹಿಡಿದ ಭಾರತೀಯ ವಿಜ್ಞಾನಿಗಳು ಮತ್ತು ವೈದ್ಯರಿಗೆ ಅರ್ಪಿಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: Vivek Agnihotri: ಪ್ರಭಾಸ್ 'ಸಲಾರ್' ಜೊತೆ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ವ್ಯಾಕ್ಸಿನ್ ವಾರ್' ಫೈಟ್?