ETV Bharat / entertainment

ವಿಡಿಯೋ: ಮುಂಬೈ ಏರ್ಪೋರ್ಟ್‌ನಲ್ಲಿ ಅನುಷ್ಕಾ ಮೇಲೆ ಮುನಿಸಿಕೊಂಡ್ರಾ ಕೊಹ್ಲಿ? - ವಿರಾಟ್ ಅನುಷ್ಕಾ ಯುರೋಪ್ ಪ್ರವಾಸ

ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಪುತ್ರಿ ವಮಿಕಾ ಯುರೋಪ್ ಪ್ರವಾಸದಿಂದ ಸ್ವದೇಶಕ್ಕೆ ಮರಳಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಈ ಜೋಡಿ ಕ್ಯಾಮರಾ ಕಣ್ಣಿಗೆ ಬಿದ್ದರು. ಈ ಸಂದರ್ಭದಲ್ಲಿ ನಡೆದ ಘಟನೆಯ ವಿಡಿಯೋ ಇಲ್ಲಿದೆ.

Is Virat Kohli got angry on Anushka Sharma at Mumbai airport?
ಅನುಷ್ಕಾ ಶರ್ಮಾ ಮೇಲೆ ಮುನಿಸಿಕೊಂಡ್ರಾ ವಿರಾಟ್ ಕೊಹ್ಲಿ?
author img

By

Published : Aug 3, 2022, 3:33 PM IST

ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ದಂಪತಿಯ ಬದುಕಿನ ಪ್ರತಿ ಸಣ್ಣ ವಿಷಯವೂ ಕೂಡ ವೈರಲ್ ಆಗುವುದು ಸಾಮಾನ್ಯವಾಗಿಬಿಟ್ಟಿದೆ. ಈ ತಾರಾ ಜೋಡಿಯ ಫೋಟೋಗಳು ಮತ್ತು ವಿಡಿಯೋಗಳನ್ನು ನೋಡಲು ಅವರ ಅಭಿಮಾನಿಗಳಂತೂ ಬಹಳ ಉತ್ಸುಕರಾಗಿರುತ್ತಾರೆ. ಇದೀಗ ಇವರಿಬ್ಬರ 'ಮುಂಬೈ ಏರ್​ಪೋರ್ಟ್ ಲುಕ್' ವೈರಲ್​ ಆಗಿದೆ. ವಿಡಿಯೋದಲ್ಲಿ ಪತ್ನಿ ಅನುಷ್ಕಾ ಶರ್ಮಾ ಮೇಲೆ ಪತಿ ವಿರಾಟ್ ಕೊಹ್ಲಿ ಕೋಪಗೊಂಡರಾ? ಎನ್ನುವ ಅನುಮಾನ ಮೂಡಿದೆ.

ಅನುಷ್ಕಾ ಶರ್ಮಾ ಮೇಲೆ ಮುನಿಸಿಕೊಂಡ್ರಾ ವಿರಾಟ್ ಕೊಹ್ಲಿ?

ಯುರೋಪ್ ಪ್ರವಾಸದಿಂದ ಅನುಷ್ಕಾ, ವಿರಾಟ್ ಮತ್ತು ಪುಟಾಣಿ ವಮಿಕಾ ಕಳೆದ ರಾತ್ರಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಎಂದಿನಂತೆ ಸಿಂಪಲ್ ಹಾಗು ಕ್ಯೂಟ್ ಆಗಿ ದಂಪತಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ಅನುಷ್ಕಾ ಅವರ ನಡೆಯಿಂದ ವಿರಾಟ್ ಕೋಪಗೊಂಡರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ತಲೆಗೆ ಬ್ಯಾಟರಿ ಕಟ್ಟಿಕೊಂಡು ಜೋಳಕ್ಕೆ ನುಗ್ಗಿದ ಆನೆ ಓಡಿಸಿದರಂತೆ ಅಪ್ಪು: 'ಗಂಧದಗುಡಿ' ಅನುಭವ ಬಿಚ್ಚಿಟ್ಟ ಮಿಲ್ಟ್ರಿ ಮಾದೇವ

ಮಗು ವಾಮಿಕಾ ಕಾರಿನಲ್ಲಿ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಂಡ ನಂತರ ಇಬ್ಬರೂ ತಮ್ಮನ್ನು ಸುತ್ತುವರೆದ ಕ್ಯಾಮರಾಮನ್‌ಗಳಿಗೆ 'ಸಂತೋಷ'ದಿಂದ ಪೋಸ್ ಕೊಟ್ಟರು. ಇದಕ್ಕೂ ಮೊದಲು ವಿರಾಟ್ ಕಾರಿನ ಹೊರಗೆ ನಿಂತಿದ್ದವರಿಗೆ, ಮಗು ನಿದ್ರಿಸುತ್ತಿದೆ ಮತ್ತು ಕ್ಯಾಮರಾಗಳ ಲೈಟ್ ತನ್ನ ಮಗಳಿಗೆ ತೊಂದರೆಯಾಗಬಹುದು. ಫೋಟೋ, ವಿಡಿಯೊಗಳನ್ನು ತೆಗೆದುಕೊಳ್ಳಬೇಡಿ ಎಂದು ವಿನಂತಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.