ಕಿಚ್ಚ ಸುದೀಪ್ ಸ್ಟೈಲಿಷ್ ಪೊಲೀಸ್ ಆಫೀಸರ್ ಆಗಿ, ಸಿಲ್ವರ್ ಸ್ಕ್ರೀನ್ ಮೇಲೆ ಅಬ್ಬರಿಸುತ್ತಿರೋ ಸಿನಿಮಾ ವಿಕ್ರಾಂತ್ ರೋಣ. ಜುಲೈ 28ರಂದು ವಿಶ್ವದಾದ್ಯಂತ 2500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೇ ಮೊದಲನೇ ದಿನ ವಿಶ್ವದಾದ್ಯಂತ ವಿಕ್ರಾಂತ್ ರೋಣ ಗಾಂಧಿನಗರದ ಸಿನಿಮಾ ಪಂಡಿತ ಪ್ರಕಾರ ಬರೋಬ್ಬರಿ 50 ರಿಂದ 60 ಕೋಟಿ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗ್ತಿದೆ.
ಆದರೆ ಚಿತ್ರತಂಡ ವರ್ಲ್ಡ್ ವೈಡ್ 35 ಕೋಟಿ ಕಲೆಕ್ಷನ್ ಆಗಿರುವುದಾಗಿ ಅಧಿಕೃತವಾಗಿ ಹೇಳಿತ್ತು. ಸದ್ಯ 2ಡಿ ಹಾಗು ತ್ರಿಡಿಯಲ್ಲಿ ಬಿಡುಗಡೆ ಆಗಿರೋ ಚಿತ್ರ ಎಲ್ಲಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ವಿಕ್ರಾಂತ್ ರೋಣ ಸಿನಿಮಾದ ಎರಡನೇ ದಿನದ ಬಾಕ್ಸ್ ಆಫೀಸ್ ರಿಪೋರ್ಟ್ ಹೀಗಿದೆ.
ಭಾರತೀಯ ಚಿತ್ರರಂಗದಲ್ಲಿ ಈ ವರ್ಷ ಬಿಡುಗಡೆ ಆದ, ಆರ್ ಆರ್ ಆರ್, ರಾಧೆ ಶ್ಯಾಮ, ಕೆಜಿಎಫ್ ಚಾಪ್ಟರ್ 2, ಮೇಜರ್ ಸಿನಿಮಾಗಳು ಫಸ್ಟ್ ಡೇ ಅತೀ ಹೆಚ್ಚು ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಮಾಡಿದ ಸಿನಿಮಾಗಳು ಎಂದು ಕರೆಯಿಸಿಕೊಂಡಿದ್ವು. ಈ ಸಾಲಿಗೆ ಈಗ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರ ಸೇರಿದೆ. ಈ ಮೂಲಕ ಎರಡನೇ ದಿನದಲ್ಲಿ ಕಲೆಕ್ಷನ್ ಸ್ವಲ್ಪ ಕಡಿಮೆ ಅನಿಸಿದರೂ ವಿಶ್ವದಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿದೆ.
ಕರ್ನಾಟಕದಲ್ಲಿ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ, ವಿಕ್ರಾಂತ ರೋಣ ಸಿನಿಮಾದ ಕ್ರೇಜ್ ಮಾತ್ರ ಆಂಧ್ರ ಮತ್ತು ತೆಲಂಗಾಣದಲ್ಲೂ ಕಡಿಮೆ ಆಗಿಲ್ಲ. ಶನಿವಾರ ಕೂಡ ತೆಲುಗು ರಾಜ್ಯಗಳಲ್ಲಿ ಭರ್ಜರಿ ಟಿಕೆಟ್ ಬುಕ್ಕಿಂಗ್ ಆಗುತ್ತಿವೆ. ಮೂರನೇ ದಿನವೂ ಕಿಚ್ಚನ ಚಿತ್ರಕ್ಕೆ ಸಖತ್ ಬೇಡಿಕೆ ಇದೆ ಎಂದು ಹೇಳಲಾಗುತ್ತಿದೆ. ತೆಲುಗು ರಾಜ್ಯದಲ್ಲಿ 350ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ಪ್ರದರ್ಶನ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಅದೇ ರೀತಿ ಹಿಂದಿಯಲ್ಲಿ ಬಿಡುಗಡೆ ಆದ ಎಲ್ಲಾ ಥಿಯೇಟರ್ ಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇದರ ಜೊತೆಗೆ ವಿದೇಶಗಳಲ್ಲಿರುವ ತೆರೆಕಂಡಿರುವ ಚಿತ್ರಮಂದಿಗಳ ಶೋಗಳ ಲೆಕ್ಕಾಚಾರದ ಮೇಲೆ, ವಿಶ್ವದಾದ್ಯಂತ ವಿಕ್ರಾಂತ್ ರೋಣ ಎರಡನೇ ದಿನ ಸುಮಾರು 45 ಕೋಟಿ ರುಪಾಯಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಮೊದಲ ದಿನ ವಿಕ್ರಾಂತ್ ರೋಣ 35 ಕೋಟಿಗೂ ಹೆಚ್ಚು ಗಳಿಸಿದ್ದು, ಎರಡನೇ ದಿನ 45 ರಿಂದ 47 ಕೋಟಿ ರೂ. ಗಳಿಸಿರುವುದಾಗಿ ಹೇಳಲಾಗುತ್ತಿದೆ.
ಒಟ್ಟಾರೆ ಬಹು ಭಾಷೆಗಳಲ್ಲಿ ಬಿಡುಗಡೆಯಾದ ವಿಕ್ರಾಂತ್ ರೋಣ, ಈ ಸಿನಿಮಾದಲ್ಲಿ ಸುದೀಪ್ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಮಿಂಚಿದ್ದು, ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್ಲೀನ್ ಫರ್ನಾಂಡೀಸ್ ಮತ್ತು ರವಿಶಂಕರ್ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನ, ಅಜನೀಶ್ ಲೋಕನಾಥ್ ಸಂಗೀತ, ಕಲಾ ನಿರ್ದೇಶಕ ಶಿವಕುಮಾರ್ ದಟ್ಟ ಕಾಡಿನ ಸೆಟ್ಟು, ಡೇವಿಡ್ ಮಿಲಿಯಂ ಅವರ ಕ್ಯಾಮರಾ ಕೈಚಳಕ ವಿಕ್ರಾಂತ್ ರೋಣ ಸಿನಿಮಾದ ಯಶಸ್ಸಿಗೆ ಕಾರಣ ಎನ್ನಬಹುದು. ಇವತ್ತು ಎಲ್ಲಾ ಕಡೆ ಯಶಸ್ವಿ ಪ್ರದರ್ಶನ ಕಾಣುತ್ತಿರುವ ವಿಕ್ರಾಂತ್ ರೋಣ ಸಿನಿಮಾಗೆ ಈ ವೀಕೆಂಡ್ ನಿಂದ ಮತ್ತಷ್ಟು ಕಲೆಕ್ಷನ್ ಮಾಡುವ ಸಾಧ್ಯತೆ ಇದೆ.
ಓದಿ :ನನಗೆ ಏನಾದರೂ ಆದಲ್ಲಿ ಇವರೇ ಕಾರಣ; ಸೆನ್ಸೇಷನಲ್ ಪೋಸ್ಟ್ ಹಾಕಿದ ಬಾಲಿವುಡ್ ನಟಿ