ETV Bharat / entertainment

'ವೀರಪುತ್ರ'ನಾದ ಅಗ್ನಿಸಾಕ್ಷಿ ಸಿದ್ಧಾರ್ಥ್​; ಮಾಸ್​ ಲುಕ್​ನಲ್ಲಿ ವಿಜಯ್​ ಸೂರ್ಯ ಮಿಂಚು - ಈಟಿವಿ ಭಾರತ ಕನ್ನಡ

'ಅಗ್ನಿಸಾಕ್ಷಿ' ಖ್ಯಾತಿಯ ವಿಜಯ್​ ಸೂರ್ಯ ನಟನೆಯ 'ವೀರಪುತ್ರ' ಸಿನಿಮಾದ ಫಸ್ಟ್​ ಲುಕ್​ ಬಿಡುಗಡೆಯಾಗಿದೆ.

Vijay Surya starrer veeraputhra movie first look out
'ವೀರಪುತ್ರ'ನಾದ ಅಗ್ನಿಸಾಕ್ಷಿ ಸಿದ್ಧಾರ್ಥ್
author img

By ETV Bharat Karnataka Team

Published : Sep 8, 2023, 1:20 PM IST

ಕಿರುತೆರೆ ಕಲಾವಿದರು ಬೆಳ್ಳಿ ತೆರೆ ಮೇಲೆ ಮಿಂಚೋದೇನು ಹೊಸತಲ್ಲ. ಈಗಾಗಲೇ ಸಾಕಷ್ಟು ಸೀರಿಯಲ್​ ತಾರೆಯರು ಬಿಗ್​ ಸ್ಕ್ರೀನ್​ನಲ್ಲಿ ಕಾಣಿಸಿಕೊಂಡು ಸಕ್ಸಸ್​ ಸ್ಟಾರ್​ಗಳಾಗಿ ಬೆಳೆಯುತ್ತಿದ್ದಾರೆ. ಅವರಲ್ಲಿ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಖ್ಯಾತಿ ಗಳಿಸಿದ್ದ ಸಿದ್ದಾರ್ಥ್ ಪಾತ್ರಧಾರಿ ವಿಜಯ್​ ಸೂರ್ಯ ಕೂಡ ಒಬ್ಬರು. 'ಇಷ್ಟಕಾಮ್ಯ' ಸಿನಿಮಾ ಮೂಲಕ ಕಿರುತೆರೆಯಿಂದ ಹಿರಿತೆರೆಗೆ ಜಂಪ್​ ಹೊಡೆದ ಹೀರೋ ಸದ್ಯ 'ವೀರಪುತ್ರ'ನಾಗಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.

ನಿನ್ನೆ ವಿಜಯ್​ ಸೂರ್ಯ ಹುಟ್ಟುಹಬ್ಬ. ಈ ನಿಮಿತ್ತ ಅವರ ಹೊಸ ಸಿನಿಮಾ 'ವೀರಪುತ್ರ' ಫಸ್ಟ್​ ಲುಕ್​ ಬಿಡುಗಡೆ ಮಾಡಲಾಗಿದೆ. ಉದ್ದ ಕೂದಲು ಬಿಟ್ಟು, ರಗಡ್​ ಅವತಾರದಲ್ಲಿ ಡಿಂಪಲ್​ ಬಾಯ್​ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ವಿಜಯ್​ ಸೂರ್ಯಗೆ ಜೋಡಿಯಾಗಿ ಲೇಖಚಂದ್ರ ನಟಿಸಿದ್ದು, ಮುಖ್ಯಭೂಮಿಕೆಯಲ್ಲಿ ಹಿರಿಯ ನಟಿ ಉಮಾಶ್ರೀ ಕಾಣಿಸಿಕೊಂಡಿದ್ದಾರೆ.

Vijay Surya starrer veeraputhra movie first look out
'ವೀರಪುತ್ರ'ನಾದ ಅಗ್ನಿಸಾಕ್ಷಿ ಸಿದ್ಧಾರ್ಥ್

ದೇವರಾಜ್ ನಿರ್ದೇಶನದ ಎರಡನೇ ಚಿತ್ರ: 'ವೀರಪುತ್ರ' ಸಿನಿಮಾಗೆ ಡಾ.ದೇವರಾಜ್​.ಎಸ್​ ಆಕ್ಷನ್​ ಕಟ್​ ಹೇಳಿದ್ದಾರೆ. ಇದು ಅವರ ಎರಡನೇ ಹೆಜ್ಜೆ. ಈ ಹಿಂದೆ ದೇವರಾಜ್​ 'ಸಪ್ಲಿಮೆಂಟರಿ' ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಮೆಡಿಕಲ್​ ಮಾಫಿಯಾ ಮತ್ತು ಫ್ಯಾಮಿಲಿ ರಿವೇಂಜ್​ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶನದ ಜೊತೆಗೆ ದೇವರಾಜ್​ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. 'ಸಪ್ಲಿಮೆಂಟರಿ', 'ಧೀರಸಾಮ್ರಾಟ್​' ಸಿನಿಮಾಗಳನ್ನು ನಿರ್ಮಿಸಿದ್ದ ಗುರು ಬಂಡಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ:ಸೌಂಡ್ಸ್ ಆಫ್ ಕಾಲಾಪತ್ಥರ್: ವಿಭಿನ್ನ ಪ್ರಯತ್ನಕ್ಕೆ 'ಕಾಲಾಪತ್ಥರ್' ಚಿತ್ರತಂಡ ಸಾಕ್ಷಿ.. 5 ಹಾಡುಗಳ ಮಿಶ್ರಣ ನೋಡಿ!

ಚಿತ್ರತಂಡ: 'ವೀರಪುತ್ರ' ಚಿತ್ರಕ್ಕೆ ಚಂದ್ರಶೇಖರ್​ ಬಂಡಿಯಪ್ಪ ಸಂಭಾಷಣೆ, ಜೂಡಾ ಸ್ಯಾಂಡಿ ಸಂಗೀತ, ಸಿ.ರವಿಚಂದ್ರನ್​ ಸಂಕಲನ, ಉದಯ್​ ಆದಿತ್ಯ ಛಾಯಾಗ್ರಹಣ, ಪ್ರಮೋದ್​ ಮರವಂತೆ ಸಾಹಿತ್ಯವಿದೆ. ಬೆಂಗಳೂರು, ಹೈದರಾಬಾದ್​ನಲ್ಲಿ ಸಿನಿಮಾದ ಶೇಕಡ 60ರಷ್ಟು ಶೂಟಿಂಗ್​ ನಡೆದಿದ್ದು, ಉಳಿದ ಚಿತ್ರೀಕರಣ ಮುಂದಿನ ತಿಂಗಳಿನಿಂದ ಮತ್ತೆ ಪ್ರಾರಂಭವಾಗಲಿದೆ. ಇನ್ನುಳಿದ ತಾರಾಬಳಗದ ಬಗ್ಗೆ ಶೀಘ್ರದಲ್ಲೇ ಚಿತ್ರತಂಡ ಮತ್ತಷ್ಟು ಅಪ್​ಡೇಟ್​ ನೀಡಲಿದೆ. ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ವಿಜಯ್​ ಸೂರ್ಯ 'ವೀರಪುತ್ರ'ನಾಗಿ ಮತ್ತೆ ಬೆಳ್ಳಿತೆರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ.

ಮಾಡೆಲಿಂಗ್ ಮೂಲಕ ವೃತ್ತಿ ಬದುಕು ಆರಂಭಿಸಿ 'ಅಗ್ನಿಸಾಕ್ಷಿ', 'ಪ್ರೇಮಲೋಕ', 'ನಮ್ಮ ಲಚ್ಚಿ' ಧಾರಾವಾಹಿಗಳ ಮೂಲಕ ಖ್ಯಾತಿ ಗಳಿಸಿದ ವಿಜಯ್ ಸೂರ್ಯ ಕ್ರೇಜಿಲೋಕ, ಇಷ್ಟಕಾಮ್ಯ, ಲಖ್ನೌ ಟು ಮುಂಬೈ ಚಿತ್ರಗಳು ಸೇರಿ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ವೃತ್ತಿ ಬದುಕಿನ ಬಹುನಿರೀಕ್ಷಿತ ಚಿತ್ರದಲ್ಲಿ ಅಭಿನಯಿಸಲು ಕಾತುರರಾಗಿದ್ದಾರೆ. ಇವರ ಅಭಿಮಾನಿಗಳು ಕೂಡ ಮತ್ತೊಮ್ಮೆ ವಿಜಯ್​ ಸೂರ್ಯ ನಟನೆಯನ್ನು ಕಣ್ತುಂಬಿಕೊಳ್ಳಲು ಉತ್ಸುಕರಾಗಿದ್ದಾರೆ.

ಇದನ್ನೂ ಓದಿ: 'ಬಜಾರ್' ಹುಡುಗನ ಹುಟ್ದಬ್ಬ: ಧನ್ವೀರ್ ಗೌಡ ನಟನೆಯ ಹೊಸ ಸಿನಿಮಾ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.