ಟಾಲಿವುಡ್ ನಟ ವಿಜಯ್ ದೇವರಕೊಂಡ ಮತ್ತು ಬೋಲ್ಡ್ ನಟಿ ಅನನ್ಯಾ ಪಾಂಡೆ ಅಭಿನಯದ ಬಹು ನಿರೀಕ್ಷಿತ ಲೈಗರ್ ಸಿನಿಮಾ ಆಗಸ್ಟ್ 25ಕ್ಕೆ ತೆರೆ ಕಾಣಲು ಸಜ್ಜಾಗಿದೆ. ಈ ಪ್ಯಾನ್ ಇಂಡಿಯಾ ಚಿತ್ರಕ್ಕೆ ಈಗಾಗಲೇ ಭರ್ಜರಿ ಪ್ರಚಾರ ಕಾರ್ಯ ಆರಂಭಗೊಂಡಿದೆ. ಆದರೆ, ಇದರ ಮಧ್ಯೆ ಲೈಗರ್ ಸಿನಿಮಾ ಬಹಿಷ್ಕರಿಸುವಂತೆ ಅಭಿಯಾನ ಆರಂಭಗೊಂಡಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿಜಯ್ ದೇವರಕೊಂಡ, ನಾನು ಯಾವಾಗಲೂ ಸತ್ಯದ ಪರವಾಗಿ ನಿಲ್ಲುತ್ತೇನೆ. ಜೀವನದಲ್ಲಿ ಸಾಕಷ್ಟು ಸವಾಲು ಎದುರಿಸಿದ್ದೇನೆ. ಯಾವುದಕ್ಕೂ ಹೆದರುವುದಿಲ್ಲ. ದೇವರ ಮೇಲೆ ನಂಬಿಕೆ ಇದೆ. ಜೊತೆಗೆ ತಾಯಿಯ ಆಶೀರ್ವಾದವಿದೆ ಎಂದಿದ್ದಾರೆ.
- " class="align-text-top noRightClick twitterSection" data="
">
ಯಾವ ಕಾರಣಕ್ಕಾಗಿ ಬಾಯ್ಕಾಟ್ ಬಿಸಿ: ಲೈಗರ್ ನಿಷೇಧಕ್ಕೆ ಕರೆ ನೀಡುವ ನೆಟಿಜನ್‌ಗಳು ವಿವಿಧ ಕಾರಣಗಳನ್ನು ಟ್ವಿಟರ್ನಲ್ಲಿ ಉಲ್ಲೇಖಿಸುತ್ತಿದ್ದಾರೆ. ಚಿತ್ರಕ್ಕೆ ಧರ್ಮ ಪ್ರೊಡಕ್ಷನ್, ಕರಣ್ ಜೋಹರ್ ಬೆಂಬಲವಿರುವ ಹಿನ್ನೆಲೆ ಲೈಗರ್ ನಿಷೇಧಕ್ಕೆ ಬೆಂಬಲ ಕೊಡುತ್ತೇವೆಂದು ಹಲವರು ಟ್ವಿಟರ್ನಲ್ಲಿ ಉಲ್ಲೇಖಿಸಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ನಟಿ ಅನನ್ಯಾ ಪಾಂಡೆ ಹೆಸರು ಕೇಳಿ ಬಂದಿದೆ ಎಂದು ಆರೋಪಿಸಿ ಲೈಗರ್ ನಿಷೇಧಕ್ಕೆ ಹಲವರು ಒತ್ತಾಯಿಸಿದ್ದಾರೆ. ಇದರ ಜೊತೆಗೆ ಇತ್ತೀಚೆಗೆ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಗ್ಗೆ ಮಾತನಾಡಿದ್ದ ವಿಜಯ್ ದೇವರಕೊಂಡ, ಅದು ಕೇವಲ ಆಮೀರ್ ಖಾನ್ ಅವರ ಸಿನಿಮಾವಲ್ಲ. ಆ ಸಿನಿಮಾ ನಿರ್ಮಾಣದ ಹಿಂದೆ 250ಕ್ಕೂ ಹೆಚ್ಚು ಜನರ ಶ್ರಮವಿರುತ್ತದೆ. ಹಾಗಾಗಿ ಬಾಯ್ಕಾಟ್ ಮಾಡಬೇಡಿ ಎಂದು ಹೇಳಿದ್ದರು. ಈ ಕಾರಣಕ್ಕೂ ಅವರಿಗೆ ಬಾಯ್ಕಾಟ್ ಬಿಸಿ ತಟ್ಟಿದೆ.
ಬಾಯ್ಕಾಟ್ ವಿಚಾರ ಟ್ವಿಟರ್ನಲ್ಲಿ ಟ್ರೆಂಡ್ ಆಗುತ್ತಿದ್ದಂತೆ ಮಾತನಾಡಿರುವ ಅವರು, ಈ ಹಂತಕ್ಕೆ ತಲುಪಲು ತುಂಬಾ ಪ್ರಯಾಸಪಟ್ಟಿದ್ದೇನೆ. ಹಣಕ್ಕಾಗಿ ಮತ್ತು ಗೌರವಕ್ಕಾಗಿ ಹೋರಾಡಿರುವೆ. ಕೆಲಸ ಪಡೆಯಲು ಸಹ ಹೋರಾಡಿದ್ದೇನೆ. ನನ್ನ ಮೊದಲ ಚಿತ್ರ ಬಿಡುಗಡೆಯ ಮೊದಲು, ನನ್ನ ಬಳಿ ಹೆಚ್ಚು ಹಣವಿಲ್ಲ. ಹೀಗಾಗಿ ಫ್ರೀಯಾಗಿ ಕೆಲಸ ಮಾಡಿದ್ದೇನೆ ಎಂದರು.
ಇದನ್ನೂ ಓದಿ: Boycott Liger Movie .. ಭರ್ಜರಿ ಪ್ರಚಾರದ ವೇಳೆ ಲೈಗರ್ ಬಹಿಷ್ಕರಿಸುವಂತೆ ಟ್ವಿಟರ್ ಅಭಿಯಾನ
'ಅರ್ಜುನ್ ರೆಡ್ಡಿ' ಸಿನಿಮಾ ರಿಲೀಸ್ ಆದಾಗ ಅನೇಕರು ನನ್ನನ್ನು ವಿರೋಧಿಸಿದ್ದರು. ಆದರೆ ಅದು ಯಶಸ್ವಿಯಾಯಿತು. ಎಲ್ಲವನ್ನೂ ಎದುರಿಸಿದ್ದೇನೆ. ಈಗಲೂ ನಾನು ಹೆದರುವುದಿಲ್ಲ. ಜನರಿಗೆ ಸ್ವಲ್ಪ ನಾಟಕದ ಅಗತ್ಯವಿರುತ್ತದೆ ಎಂದಿದ್ದಾರೆ. ನನಗೆ ದೇವರ, ಅಮ್ಮನ ಆಶೀರ್ವಾದವಿದೆ. ಪ್ರೇಕ್ಷಕರ ಪ್ರೀತಿ ಸದಾ ಇರುತ್ತದೆ. ನನ್ನನ್ನು ಯಾರು ತಡೆಯುತ್ತಾರೆ ನೋಡೋಣ ಎಂದಿದ್ದಾರೆ.
ಬಹು ನಿರೀಕ್ಷಿತ ಲೈಗರ್ ಸಿನಿಮಾ ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿ ತೆರೆ ಕಾಣಲಿದ್ದು, ಇದರಲ್ಲಿ ವಿಶ್ವ ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ ಗೆಸ್ಟ್ ರೋಲ್ನಲ್ಲಿ ನಟಿಸಿದ್ದು, ಹಿರಿಯ ನಟಿ ರಮ್ಯಾ ಕೃಷ್ಣ ಅವರು ವಿಜಯ್ ದೇವರಕೊಂಡ ತಾಯಿಯಾಗಿ ಅಭಿನಯಿಸಿದ್ದಾರೆ.