ETV Bharat / entertainment

ವಿಚಿತ್ರ ಡ್ರೆಸ್​ ತೊಟ್ಟ ಉರ್ಫಿ​ಗೆ ಹಿರಿಕನ ತರಾಟೆ.. 'ನಿಮ್ಮ ಅಪ್ಪನದ್ದು ಏನ್​ ಹೋಗುತ್ತೆ' ಅಂದ ಜಾವೇದ್​ - ಈಟಿವಿ ಭಾರತ ಕನ್ನಡ

Uorfi Javed: ಉರ್ಫಿ ಜಾವೇದ್​ ಡಿಫರೆಂಟ್​ ಡ್ರೆಸ್​ ಕಂಡ ಹಿರಿಯ ವ್ಯಕ್ತಿಯೊಬ್ಬರು, ಆಕೆಯನ್ನು ಬಹಿರಂಗವಾಗಿ ಟೀಕಿಸಿರುವ ಘಟನೆ ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆದಿದೆ.

Uorfi
ಉರ್ಫಿ
author img

By

Published : Jul 24, 2023, 7:26 PM IST

ವಿಚಿತ್ರ ಶೈಲಿಯ ಉಡುಗೆಯನ್ನು ಧರಿಸಿ ನೋಡುಗರನ್ನು ಮುಜುಗರಕ್ಕೊಳಗಾಗುವಂತೆ ಮಾಡುವುದರಲ್ಲಿ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಉರ್ಫಿ ಜಾವೇದ್ ಒಬ್ಬರು. ಇವರು ತಮ್ಮ ವಿಲಕ್ಷಣ ಫ್ಯಾಷನ್ ಸೆನ್ಸ್‌ಗೆ ಹೆಸರುವಾಸಿ. ಬಿಗ್​ ಬಾಸ್​ ಮೂಲಕ ಜನಪ್ರಿಯರಾದ ಉರ್ಫಿ ತಾವು ತೊಡುವ ಬಟ್ಟೆಯಿಂದಲೇ ಸದ್ದು ಮಾಡುತ್ತಿರುತ್ತಾರೆ. ವಿಚಿತ್ರ ಫ್ಯಾಷನ್​ನಿಂದ ಅನೇಕ ಬಾರಿ ಟ್ರೋಲ್​ಗೂ ಒಳಗಾಗಿದ್ದಾರೆ. ಅಷ್ಟೇ ಯಾಕೆ, ಈಕೆ ತಿಂಗಳ ಸಂಪಾದನೆಯಲ್ಲಿ ಅನೇಕ ಬಾಲಿವುಡ್ ನಟಿಯರನ್ನು ಕೂಡ ಹಿಂದಿಕ್ಕಿದ್ದಾರೆ.

ಇದೀಗ ಉರ್ಫಿಯ ಡಿಫರೆಂಟ್​ ಡ್ರೆಸ್​ ಕಂಡ ಹಿರಿಯ ವ್ಯಕ್ತಿಯೊಬ್ಬರು, ಆಕೆಯನ್ನು ಬಹಿರಂಗವಾಗಿ ಟೀಕಿಸಿರುವ ಘಟನೆ ನಡೆದಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರ ಜೊತೆ ಉರ್ಫಿ ಜಗಳವಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿದೆ. ಉರ್ಫಿಯ ಟ್ಯಾನ್ಸ್​​ಫರೆಂಟ್​ ದಿರಿಸನ್ನು ಕಂಡು ಮುಜುಗರಕ್ಕೊಳಗಾದ ವ್ಯಕ್ತಿ ಆಕೆಯನ್ನು ಟೀಕಿಸಿದ್ದಾರೆ. ತಕ್ಷಣವೇ ಉರ್ಫಿ ಹಿಂದಿರುಗಿ ಆ ವ್ಯಕ್ತಿಗೆ ಸಮರ್ಪಕ ಉತ್ತರ ನೀಡಿದ್ದು, ನಟಿ ಮತ್ತೊಮ್ಮೆ ಟ್ರೋಲ್​ ಆಗಲು ಇದು ಕಾರಣವಾಗಿದೆ.

ಪಾಪರಾಜಿಗಳು ಇನ್​ಸ್ಟಾದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಉರ್ಫಿ ಜಾವೇದ್​ ಗ್ರೀನ್​ ಬ್ಯಾಕ್​ಲೆಸ್​ ದಿರಿಸಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ತಮ್ಮ ಕೂದಲನ್ನು ಪಿಂಕ್​ ಬಣ್ಣಕ್ಕೆ ಬದಲಾಯಿಸಿದ್ದು, ಮೇಲಕ್ಕೆ ಎತ್ತಿ ಕಟ್ಟಿದ್ದಾರೆ. ಆದರೆ ಆಕೆಯ ಡ್ರೆಸ್​ ಹಿರಿಯ ವ್ಯಕ್ತಿಯೊಬ್ಬರಿಗೆ ಇರಿಸುಮುರಿಸು ಉಂಟು ಮಾಡಿದೆ. ಇದಕ್ಕಾಗಿ ಉರ್ಫಿ ಜಾವೇದ್​ ಅನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. "ಭಾರತದಲ್ಲಿ ಇಂತಹ ಬಟ್ಟೆಗಳನ್ನು ಅನುಮತಿಸಲಾಗುವುದಿಲ್ಲ. ನೀವು ಭಾರತದ ಹೆಸರನ್ನು ಹಾಳು ಮಾಡುತ್ತಿದ್ದೀರಿ" ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: Uorfi Javed: ಉರ್ಫಿಗೆ ಚಿನ್ನದಂತೆ ಕಂಡ ಟೊಮೆಟೊ.. ಕಟೌಟ್​​ ಸುಂದರಿಗೆ ಕಿವಿಯೋಲೆಯಾದ ಕಿಚನ್​ ಕ್ವೀನ್​!

ಇದನ್ನು ಕೇಳಿ ರೊಚ್ಚಿಗೆದ್ದ ಉರ್ಫಿ ವಾಪಸ್​ ಅದೇ ವ್ಯಕ್ತಿಗೆ ತಿರುಗಿಸಿ ಮಾತನಾಡಿದ್ದಾರೆ. "ನಿಮ್ಮ ಅಪ್ಪನದ್ದು ಇಲ್ಲೇನಾದ್ರೂ ಕಳೆದು ಹೋಗ್ತಾ ಇದ್ಯಾ?" ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಈ ಸಂಭಾಷಣೆಯು ವೈರಲ್​ ಆದ ವಿಡಿಯೋದಲ್ಲಿ ಸ್ಪಷ್ಟವಾಗಿ ಕೇಳಿಸುತ್ತದೆ. ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಈ ವಿಚಾರವಾಗಿ ಉರ್ಫಿ ಜಾವೇದ್​ ಸುದ್ದಿಯಾಗಿದ್ದಾರೆ.

ಕಸೌತಿ ಜಿಂದಗಿ ಕೇ ಮತ್ತು ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಸೇರಿದಂತೆ ಹಲವಾರು ಟಿವಿ ಶೋಗಳಲ್ಲಿ ಉರ್ಫಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ರಿಯಾಲಿಟಿ ಟಿವಿ ಶೋ ಸ್ಪ್ಲಿಟ್ಸ್ವಿಲ್ಲಾದ 14 ನೇ ಆವೃತ್ತಿಯಲ್ಲಿ ಮಿಸ್ಚೀಫ್ ಮೇಕರ್ ಆಗಿ ಕಾಣಿಸಿಕೊಂಡಿದ್ದರು. ಉರ್ಫಿ ಜಾವೇದ್ ವಿಭಿನ್ನ ಶೈಲಿಯಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಇಲ್ಲಿಯವರೆಗೆ, ಉರ್ಫಿ ಅನಗತ್ಯ ವಸ್ತುಗಳಿಂದ ಮಾಡಿದ ಉಡುಪುಗಳನ್ನು ಧರಿಸಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಇದೇ ನನ್ನ ಫ್ಯಾಷನ್ ಎಂದಿದ್ದಾರೆ. ವರದಿಗಳ ಪ್ರಕಾರ ಉರ್ಫಿ, ಏಕ್ತಾ ಕಪೂರ್ ಅವರ ಲವ್ ಸೆಕ್ಸ್ ಔರ್ ಧೋಖಾ 2 ನೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ.

ಇದನ್ನೂ ಓದಿ: ಬಹುನಿರೀಕ್ಷಿತ 'ಟೈಗರ್​ 3' ಬಿಡುಗಡೆಗೆ ಮುಹೂರ್ತ ಫಿಕ್ಸ್​; 'ಜವಾನ್​' ಬಿಡುಗಡೆಯಂದೇ ಟೀಸರ್​ ರಿಲೀಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.