ಹಿಂದಿ ಬಿಗ್ ಬಾಸ್ 16ರ ಮುಂಬರುವ ಶುಕ್ರವಾರ ಕಾ ವಾರ್ ಸಂಚಿಕೆಯಲ್ಲಿ, ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರು ಕಿಯಾರಾ ಅಡ್ವಾಣಿ ಮತ್ತು ವಿಕ್ಕಿ ಕೌಶಲ್ ಅವರೊಂದಿಗೆ ಮೋಜು ಮಸ್ತಿ ಮಾಡಲಿದ್ದಾರೆ. ವಿಕ್ಕಿ ಮತ್ತು ಕಿಯಾರಾ ಅವರನ್ನು ಒಳಗೊಂಡಿರುವ ಬಿಗ್ಬಾಸ್ ಶೋನ ಪ್ರೋಮೋ ರಿಲೀಸ್ ಆಗಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸಲು ನೆಟ್ಟಿಗರು ಕಾತುರರಾಗಿದ್ದಾರೆ.
ಈ ಹಿಂದೆ ವಿಕ್ಕಿ ಕೌಶಲ್ ಪತ್ನಿ, ನಟಿ ಕತ್ರಿನಾ ಕೈಫ್ ಅವರನ್ನು ಕಾರ್ಯಕ್ರಮಕ್ಕೆ ಕರೆದಿದ್ದ ಸಲ್ಮಾನ್ ಈಗ ವಿಕ್ಕಿ ಮತ್ತು ಕಿಯಾರಾ ಅವರನ್ನು ಬಿಗ್ ಬಾಸ್ 16ರ ವೇದಿಕೆಗೆ ಆಹ್ವಾನಿಸಿದ್ದಾರೆ. ಬಿಗ್ ಬಾಸ್ 16 ಕಾರ್ಯಕ್ರಮಕ್ಕೆ ವಿಕ್ಕಿ ಮತ್ತು ಕಿಯಾರಾ ಅವರ ಈ ಭೇಟಿಯು ಅವರ ಇತ್ತೀಚಿಗೆ ಬಿಡುಗಡೆಯಾದ ಗೋವಿಂದ ನಾಮ್ ಮೇರಾ ಚಿತ್ರ ಪ್ರಚಾರದ ಭಾಗವಾಗಿದೆ. ಕಿರು ವಿಡಿಯೋದಲ್ಲಿ, ಸಲ್ಮಾನ್, ಕಿಯಾರಾ ಮತ್ತು ವಿಕ್ಕಿ ''ಗೋವಿಂದ ನಾಮ್ ಮೇರಾ'' ಸಿನಿಮಾದ ಹಾಡಿಗೆ ನೃತ್ಯ ಮಾಡುವುದನ್ನು ಕಾಣಬಹುದು.
- " class="align-text-top noRightClick twitterSection" data="
">
ಗೋವಿಂದ ನಾಮ್ ಮೇರಾದಲ್ಲಿ, ವಿಕ್ಕಿ ವಿವಾಹಿತ ನೃತ್ಯ ಸಂಯೋಜಕನಾಗಿ ನಟಿಸಿದ್ದಾರೆ. ಕಿಯಾರಾ ಅವರ ಗೆಳತಿಯ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದ ಕಥಾವಸ್ತುವನ್ನು ಸ್ಫೂರ್ತಿಯಾಗಿ ತೆಗೆದುಕೊಂಡು, ಸಲ್ಮಾನ್ ವಿಕ್ಕಿ ಮತ್ತು ಕಿಯಾರಾ ಅವರಿಗೆ ಬಿಗ್ಬಾಸ್ ವೇದಿಕೆಯಲ್ಲಿ ನಟಿಸಲು ಸನ್ನಿವೇಶವನ್ನು ನೀಡುತ್ತಾರೆ. ಈ ಇಬ್ಬರೂ ತಮ್ಮ ಪಾತ್ರ ನಿರ್ವಹಿಸುವಾಗ ಸಲ್ಮಾನ್ ಎಂಟ್ರಿಯಾಗುತ್ತಾರೆ. ಖಾನ್ರ ಹಾವಭಾವವು ವಿಕ್ಕಿಯನ್ನು ನಗೆಗಡಲಲ್ಲಿ ತೇಲಿಸಿತು. ವಿಕ್ಕಿ ಮತ್ತು ಸಲ್ಮಾನ್ ವೇದಿಕೆಯಲ್ಲಿ ಬೆಚ್ಚಗಿನ ಅಪ್ಪುಗೆಯನ್ನು ಹಂಚಿಕೊಳ್ಳುವುದರೊಂದಿಗೆ ಪ್ರೋಮೋ ಕೊನೆಗೊಳ್ಳುತ್ತದೆ.
ಇದನ್ನೂ ಓದಿ: ಟಾಲಿವುಡ್ ಡ್ರಗ್ಸ್ ಪ್ರಕರಣ: ಮತ್ತೊಮ್ಮೆ ನಟಿ ರಾಕುಲ್ ಪ್ರೀತ್ ಸಿಂಗ್ಗೆ ಇಡಿ ನೋಟಿಸ್
ಈ ಹಿಂದೆ ವಿಕ್ಕಿ ಕೌಶಲ್ ಪತ್ನಿ ಕತ್ರಿನಾ ಕೈಫ್ ತಮ್ಮ ಫೋನ್ ಭೂತ್ ಚಿತ್ರ ಪ್ರಚಾರ ಮಾಡಲು ಬಿಗ್ ಬಾಸ್ಗೆ ಆಗಮಿಸಿದ್ದರು. ಆಗ ಕತ್ರಿನಾ ಅವರು ಸಲ್ಮಾನ್ ಅವರಿಗೆ ನೀವು ಭೂತ ಆದರೆ ಯಾರ ಮೇಲೆ ಕಣ್ಣಿಡಲು ಬಯಸುತ್ತೀರಿ ಎಂದು ಕೇಳಿದರು. ಇದಕ್ಕೆ ಸಲ್ಮಾನ್, "ಏಕ್ ಬಂದಾ ಹೈ ಉಸ್ಕಾ ನಾಮ್ ವಿಕ್ಕು ಕೌಶಲ್'' (ವಿಕ್ಕಿ ಕೌಶಲ್ ಎಂಬ ಒಬ್ಬ ವ್ಯಕ್ತಿ ಇದ್ದಾರೆ)" ಎಂದು ಉತ್ತರಿಸಿದ್ದರು. ತಮ್ಮ ಪತಿ ಹೆಸರು ಕೇಳಿದೊಡನೆ ಕತ್ರಿನಾ ನಾಚಿ ನೀರಾಗಿದ್ದರು.