ಮುಂಬೈ (ಮಹಾರಾಷ್ಟ್ರ): ಕಳೆದ ವರ್ಷ ಡಿಸೆಂಬರ್ನಲ್ಲಿ ಹಸೆಮಣೆ ಏರಿದ ತಾರಾ ಜೋಡಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ತಮ್ಮ ಮೊದಲ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದ್ದಾರೆ. ದೀಪಾಳಿ ಸಂಭ್ರಮದ ಫೋಟೋಗಳನನ್ನು ದಂಪತಿಗಳಿಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚೋಟಿ ದೀಪಾವಳಿಗೆ ಕಪ್ಪು ಸೀರೆ ಉಟ್ಟ ಕತ್ರಿನಾಗೆ ರಿಕ್ಕಿ ಸ್ಟನ್ನರ್ ಎಂದು ಕಮೆಂಟ್ ಮಾಡಿದ್ದು ವೈರಲ್ ಆಗಿತ್ತು.
ಇನ್ಸ್ಟಾದಲ್ಲಿ ದೀಪಾವಳಿ ಸಂಭ್ರಮ ಹಂಚಿಕೊಂಡ ಫೋಟೊದಲ್ಲಿ ವಿಕ್ಕಿ ಬಿಳಿ ಕುರ್ತಾದಲ್ಲಿ ಮತ್ತು ಕತ್ರಿನಾ ಚಿನ್ನದ ಬಣ್ಣದ ಮೆರುಗಿನ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ದಂಪತಿ ತಮ್ಮ ಮನೆಯಲ್ಲಿ ಲಕ್ಷ್ಮಿ ಪೂಜೆಯನ್ನು ನೆರವೇರಿಸಿದರು.
ವಿಕ್ಕಿ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಕತ್ರಿನಾ ಅವರೊಂದಿಗೆ ಪೂಜೆ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡು 'ಮನೆಯ ಲಕ್ಷ್ಮಿಯ ಒಟ್ಟಿಗೆ ಲಕ್ಷ್ಮಿ ಪೂಜೆ, ನಿಮ್ಮೆಲ್ಲರಿಗೂ ನಮ್ಮ ಕಡೆಯಿಂದ ದೀಪಾವಳಿಯ ಶುಭಾಶಯ' ಎಂದು ಬರೆದುಕೊಂಡಿದ್ದಾರೆ. ವಿಕ್ಕಿ ಮತ್ತು ಕತ್ರಿನಾ ಡಿಸೆಂಬರ್ 9, 2021 ರಂದು ರಾಜಸ್ಥಾನದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ವಿವಾಹವಾಗಿದ್ದರು.
ಕತ್ರಿನಾ ಕೈಫ್ ಫೋನ್ ಭೂತ್ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಗುರ್ಮೀತ್ ಸಿಂಗ್ ಅವರ ನಿರ್ದೇಶನ 'ಫೋನ್ ಭೂತ್' ನವೆಂಬರ್ 4 ರಂದು ಬಿಡುಗಡೆಯಾಗಲು ಸಿದ್ಧವಾಗಿದೆ. ಪ್ರಮುಖ ಪಾತ್ರಗಳಲ್ಲಿ ಇಶಾನ್ ಖಟ್ಟರ್, ಸಿದ್ಧಾಂತ್ ಚತುರ್ವೇದಿ ಮತ್ತು ಜಾಕಿ ಶ್ರಾಫ್ ನಟಿಸಿದ್ದಾರೆ.
ನ.4ರಂದು ಅರ್ಜುನ್ ಕಪೂರ್ ಅವರ ಡಾರ್ಕ್ ಕಾಮಿಡಿ 'ಕುಟ್ಟೆ' ಮತ್ತು ಸೋನಾಕ್ಷಿ ಸಿನ್ಹಾ ಮತ್ತು ಹುಮಾ ಖುರೇಷಿ ಅವರ 'ಡಬಲ್ ಎಕ್ಸ್ಎಲ್' ಸಹ ಬಿಡುಗಡೆ ಆಗಲಿರುವ ಕಾರಣ ಫೋನ್ ಭೂತ್ಗೆ ಬಾಕ್ಸ್ ಆಫೀಸ್ನಲ್ಲಿ ಕಾಂಪಿಟೇಶನ್ ಹೆಚ್ಚಿದೆ.
ಫೋನ್ ಭೂತ್ ನಂತರ ಸಲ್ಮಾನ್ ಖಾನ್ ಜೊತೆಗೆ ಟೈಗರ್ 3ರ ರಲ್ಲಿ ನಟಿಸಲಿದ್ದಾರೆ. ವಿಜಯ್ ಸೇತುಪತಿಯೊಂದಿಗೆ ಮೆರ್ರಿ ಕ್ರಿಸ್ಮಸ್ ಮತ್ತು ಅಲಿಯಾ ಭಟ್ ಮತ್ತು ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಜೀ ಲೇ ಜರಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ವಿಕ್ಕಿ ಸರ್ದಾರ್ ಉದಾಮ್ ಇತ್ತಿಚೆಗೆ ಕಾಣಿಸಿಕೊಂಡು ಉತ್ತಮ ರೆಸ್ಪಾನ್ಸ್ ಪಡೆದರು. ನಿರ್ದೇಶಕ ಲಕ್ಷ್ಮಣ್ ಉಟೇಕರ್ ಅವರ ಮುಂದಿನ ಹೆಸರಿಸದ ರೊಮ್ಯಾಂಟಿಕ್ ಹಾಸ್ಯ ಚಿತ್ರದಲ್ಲಿ ಸಾರಾ ಅಲಿ ಖಾನ್ ಜೊತೆ ರಿಕ್ಕಿ ಕಾಣಿಸಿಕೊಳ್ಳಲಿದ್ದಾರೆ. ಹಾಗೇ ಗೋವಿಂದಾ ನಾಮ್ ಮೇರಾ, ಸ್ಯಾಮ್ ಬಹದ್ದೂರ್ ನಲ್ಲೂ ರಿಕ್ಕಿ ನಟಿಸುತ್ತಿದ್ದಾರೆ.
ಇದನ್ನೂ ಓದಿ : ಸೀರೆಯಲ್ಲಿ ದೀಪಾವಳಿ ಲುಕ್ ಹಂಚಿಕೊಂಡ ಕತ್ರಿನಾ: ಸ್ಟನ್ನರ್ ಎಂದು ಪತಿ ಕಮೆಂಟ್