ETV Bharat / entertainment

'ಬೀರ್​ಬಲ್​' ಖ್ಯಾತಿಯ ಹಿರಿಯ ಹಾಸ್ಯನಟ ಸತೀಂದರ್ ಕುಮಾರ್ ಖೋಸ್ಲಾ ನಿಧನ

ಬಹುಭಾಷಾ ಹಿರಿಯ ಹಾಸ್ಯನಟ ಬೀರ್​ಬಲ್​ ಎಂದೇ ಖ್ಯಾತರಾಗಿದ್ದ ಸತೀಂದರ್ ಕುಮಾರ್ ಖೋಸ್ಲಾ ಅವರು ಮಂಗಳವಾರ ನಿಧನರಾಗಿದ್ದಾರೆ. ಇವರ ಅಗಲಿಕೆಗೆ ಚಿತ್ರರಂಗ ಸಂತಾಪ ಸೂಚಿಸಿದೆ.

ಸತೀಂದರ್ ಕುಮಾರ್ ಖೋಸ್ಲಾ ನಿಧನ
ಸತೀಂದರ್ ಕುಮಾರ್ ಖೋಸ್ಲಾ ನಿಧನ
author img

By ETV Bharat Karnataka Team

Published : Sep 12, 2023, 10:16 PM IST

ಮುಂಬೈ: ಹಿರಿಯ ಹಾಸ್ಯನಟ ಸತೀಂದರ್ ಕುಮಾರ್ ಖೋಸ್ಲಾ(84) ಅವರು ಇಂದು (ಮಂಗಳವಾರ) ರಾತ್ರಿ 9 ಗಂಟೆ ಸುಮಾರಿನಲ್ಲಿ ಮುಂಬೈನಲ್ಲಿ ಕೊನೆಯುಸಿರೆಳೆದರು. ಬಹುಭಾಷಾ ನಟರಾಗಿದ್ದ ಖೋಸ್ಲಾ ಅವರು 500 ಕ್ಕೂ ಅಧಿಕ ಚಿತ್ರಗಳಲ್ಲಿ ಪಾತ್ರ ಪೋಷಣೆ ಮಾಡಿ ಜನರನ್ನು ರಂಜಿಸಿದ್ದಾರೆ.

ಖೋಸ್ಲಾ ಅವರು 1967 ರಲ್ಲಿ ಮನೋಜ್ ಕುಮಾರ್ ಅವರ ಹಿಟ್ ಚಿತ್ರವಾದ 'ಉಪಕಾರ' ಮೂಲಕ ಮನರಂಜನಾ ಜಗತ್ತಿನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಹಾಸ್ಯ ಲೋಕದ ಬೀರ್​ಬಲ್ ಎಂದೇ ಖ್ಯಾತಿಯಾಗಿದ್ದ ಸತೀಂದರ್ ಕುಮಾರ್ ಖೋಸ್ಲಾ ಅವರು ಪಂಜಾಬ್ ಮೂಲದವರು. ಅವರು 28 ಅಕ್ಟೋಬರ್ 1938 ರಂದು ಗುರುದಾಸ್​ಪುರದಲ್ಲಿ ಜನಿಸಿದ್ದರು.

ಪಂಜಾಬಿಯಾಗಿದ್ದರೂ ಮರಾಠಿಯಲ್ಲಿ ಖ್ಯಾತಿ: ಸತೀಂದರ್ ಕುಮಾರ್ ಖೋಸ್ಲಾ ಅವರು ಪಂಜಾಬ್​ನಲ್ಲಿ ಜನಿಸಿದ್ದರೂ, ಮರಾಠಿ ಸಿನಿಮಾಗಳಲ್ಲಿ ಹೆಚ್ಚು ಖ್ಯಾತಿ ಪಡೆದವರು. ಹಾಸ್ಯನಟನಾಗಿ ಅವರು ಪಂಜಾಬಿಗಳಿಗೆ ಮಾತ್ರವಲ್ಲದೇ, ಅವರ ಅಭಿಮಾನಿ ಬಳಗವನ್ನು ಭೋಜ್‌ಪುರಿ, ಮರಾಠಿ ಹಾಗೂ ಹಿಂದಿಯಲ್ಲಿ ಪಡೆದುಕೊಂಡಿದ್ದರು. ಕಾಲೇಜು ಜೀವನದಿಂದಲೂ ಅವರು ನಟನೆಯಲ್ಲಿ ತೊಡಗಿಸಿಕೊಂಡಿದ್ದರು. ಕಾಲೇಜು ದಿನಗಳಲ್ಲಿ ಹೆಚ್ಚಾಗಿ ಭಾಂಗ್ರಾ ಕಾರ್ಯಕ್ರಮಗಳು ಮತ್ತು ನಾಟಕಗಳತ್ತ ಹೆಚ್ಚು ಆಸಕ್ತಿ ಹೊಂದಿದ್ದರು.

ಪ್ರಿಂಟಿಂಗ್ ಪ್ರೆಸ್​ನಿಂದ ಸಿನಿಮಾ: ಖೋಸ್ಲಾ ಅವರ ತಂದೆ ಪ್ರಿಂಟಿಂಗ್ ಪ್ರೆಸ್​ ಹೊಂದಿದ್ದರು. ಇದನ್ನೇ ಮುಂದುವರಿಸಿಕೊಂಡು ಹೋಗುವ ಬಗ್ಗೆ ಒಲವು ಹೊಂದಿದ್ದರು. ಆದರೆ, ಪ್ರಿಂಟಿಂಗ್​ ಕೆಲಸಕ್ಕಾಗಿ ಮುಂಬೈ ಬಂದ ಹಿರಿಯ ಹಾಸ್ಯನಟರು ಬಳಿಕ ಸಿನಿಮಾಗಳಲ್ಲಿ ಅವಕಾಶ ಹುಡುಕಲಾರಂಭಿಸಿದರು. ಸತತ ಪ್ರಯತ್ನದ ಬಳಿಕ ಸತೀಂದರ್‌ಗೆ 'ರಾಜಾ' ಚಿತ್ರದಲ್ಲಿ ಅವಕಾಶ ಸಿಕ್ಕಿತು. ಆ ನಂತರ ತಿರುಗಿ ನೋಡದ ಅವರು ಇಲ್ಲಿಯವರೆಗೂ ಸುಮಾರು 500 ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಪ್ರೇಕ್ಷಕರನ್ನು ನಗಿಸಿದ್ದಾರೆ. ಮರಾಠಿ, ಹಿಂದಿ, ಪಂಜಾಬಿ ಮತ್ತು ಭೋಜ್‌ಪುರಿ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಖೋಸ್ಲಾ ಅವರ ಹಿಟ್​ ಸಿನಿಮಾಗಳು: ಖೋಸ್ಲಾ ಅವರು ದೋ ಬದನ್ (1966), ಬೂಂದ್ ಜೋ ಬಾನ್ ಗೈ ಮೋತಿ (1967) ನಟಿಸಿದರು. ಬಳಿಕ ನಟ ಮನೋಜ್ ಕುಮಾರ್ ಅವರ ಸಲಹೆಯಂತೆ ತಮ್ಮ ಹೆಸರನ್ನು ಬೀರ್​ಬಲ್​ ಎಂದು ಬದಲಾಯಿಸಿಕೊಂಡರು. ಮನೋಜ್ ಕುಮಾರ್ ಅವರ ರೋಟಿ ಕಪ್ಡಾ ಔರ್ ಮಕನ್ (1974) ಮತ್ತು ಕ್ರಾಂತಿ (1981) ಚಿತ್ರಗಳಲ್ಲಿನ ಅವರ ಪಾತ್ರಗಳು ಗಮನ ಸೆಳೆದಿವೆ. ಶೋಲೆ (1975), ಸೊರಜ್ (1977) ಚಿತ್ರಗಳಲ್ಲಿ ಅವರು ಅರ್ಧ ಮೀಸೆಯ ಕೈದಿಯಾಗಿ ನಟನೆ, ದೇವ್ ಆನಂದ್ ಅವರ ಅಮೀರ್ ಗರೀಬ್ (1974) ನಲ್ಲಿ ನಕ್ಕು ನಲಿಸಿದ್ದರು.

ಇದನ್ನೂ ಓದಿ: ಒಂದು ಸಿನಿಮಾಗೆ ನಟ ದರ್ಶನ್ ಎಷ್ಟು ದಿನ ಕಾಲ್ ಶೀಟ್ ಕೊಡ್ತಾರೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.