ETV Bharat / entertainment

ಹೊಸಬರ 'ವೇಷ' ಚಿತ್ರಕ್ಕೆ ಸಿಕ್ತು ವಿನೋದ್ ಪ್ರಭಾಕರ್ ಸಾಥ್ - Vesha movie

ಹೊಸಬರ 'ವೇಷ' ಸಿನಿಮಾದ ಟ್ರೇಲರ್​ ಅನ್ನು ನಟ ವಿನೋದ್ ಪ್ರಭಾಕರ್ ಅನಾವರಣಗೊಳಿಸಿದ್ದಾರೆ.

Vesha trailer release
'ವೇಷ' ಸಿನಿಮಾದ ಟ್ರೇಲರ್​ ಅನಾವರಣ
author img

By ETV Bharat Karnataka Team

Published : Oct 5, 2023, 10:17 AM IST

ದಿನೇ ದಿನೆ ಕನ್ನಡ ಚಿತ್ರರಂಗಕ್ಕೆ ಟ್ಯಾಲೆಂಟ್‌ ಇರುವ ಹೊಸ‌ ಕಲಾವಿದರ ಆಗಮನವಾಗುತ್ತಿದೆ. ಇದೀಗ ರಂಗಭೂಮಿ ಹಿನ್ನೆಲೆ ಇರುವ ಯುವ ನಟ ರಾಘವೇಂದ್ರ 'ವೇಷ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದಾರೆ. ಕೃಷ್ಣ ನಾಡ್ಪಾಲ್ ನಿರ್ದೇಶನದ "ವೇಷ" ಚಿತ್ರಕ್ಕೆ ವಿನೋದ್ ಪ್ರಭಾಕರ್ ಸಾಥ್​​ ಸಿಕ್ಕಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್​​ ಬಿಡುಗಡೆ ಮಾಡಿ ಹೊಸ ತಂಡಕ್ಕೆ ಮರಿ ಟೈಗರ್ ಶುಭ ಹಾರೈಸಿದರು.

Vesha trailer release
ಹೊಸಬರ 'ವೇಷ' ಚಿತ್ರ

'ವೇಷ' ಟ್ರೇಲರ್​ ಅನಾವರಣ: ಟ್ರೇಲರ್​ ಲಾಂಚ್​ ಈವೆಂಟ್​ನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್.ಎಂ ಸುರೇಶ್ ಹಾಗೂ ಸಂಭಾಷಣೆಕಾರ ಮಾಸ್ತಿ ವಿನೋದ್ ಅವರಿಗೆ ಸಾಥ್ ಕೊಟ್ಟರು. ಎ2 ಮ್ಯೂಸಿಕ್ ಯೂ ಟ್ಯೂಬ್ ಚಾನಲ್​​ನಲ್ಲಿ ಬಿಡುಗಡೆ ಆಗಿರುವ ವೇಷ ಚಿತ್ರದ ಟ್ರೇಲರ್​ಗೆ ಸಿನಿಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

  • " class="align-text-top noRightClick twitterSection" data="">

ವೇಷ ಕಥೆ ಏನು? ಮೊದಲು ಮಾತು ಶುರು ಮಾಡಿದ ನಿರ್ದೇಶಕ ಕೃಷ್ಣ ನಾಡ್ಪಾಲ್, ಜೀವನದಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿ "ವೇಷ" ಹಾಕುತ್ತಾರೆ. ನಮ್ಮ ಚಿತ್ರದಲ್ಲೂ ಹಾಗೆ, ನಾಯಕನಿಗೆ ಯಾವುದೊ ಒಂದು ಸಂದರ್ಭ "ವೇಷ" ಹಾಕುವ ಹಾಗೆ ಮಾಡುತ್ತದೆ. ಅದರ ಸುತ್ತ ಸಿನಿಮಾ ಸುತ್ತುತ್ತದೆ. ಟ್ರೇಲರ್ ಬಿಡುಗಡೆ ಆಗಿದ್ದು, "ವೇಷ" ಸದ್ಯದಲ್ಲೇ ಚಿತ್ರಮಂದಿರಗಳಿಗೆ ಎಂಟ್ರಿ ಕೊಡಲಿದೆ. ಈವರೆಗೆ ಕೆಲ ಕಿರುಚಿತ್ರಗಳನ್ನು ನಿರ್ದೇಶಿಸಿರುವ ನನಗೆ ಹಿರಿತೆರೆಯಲ್ಲಿ ಇದು ಮೊದಲ ನಿರ್ದೇಶನದ ಚಿತ್ರ ಎಂದು ತಿಳಿಸಿದರು‌.

Vesha trailer release
'ವೇಷ' ಟ್ರೇಲರ್​ ರಿಲೀಸ್​ ಈವೆಂಟ್​​

ನಟನೆ ಜೊತೆ ನಿರ್ಮಾಣ... ಇನ್ನೂ ನಾಯಕ ನಟ ಹಾಗೂ ನಿರ್ಮಾಪಕನ ಹೊಣೆ ಹೊತ್ತಿರುವ ರಾಘವೇಂದ್ರ ಮಾತನಾಡಿ, ನಾನು ಮೂಲತಃ ರಂಗಭೂಮಿ ಕಲಾವಿದ. ನಟನೆ ನನ್ನ ಹವ್ಯಾಸ. "ವೇಷ" ಚಿತ್ರ ಆರಂಭವಾದಾಗ ನಾಯಕನ ಹುಡುಕಾಟದಲ್ಲಿದ್ದೆವು. ಆನಂತರ ಅನಿರೀಕ್ಷಿತವಾಗಿ ನಾನೇ ಈ ಚಿತ್ರದ ನಾಯಕನಾಗಿ ನಟಿಸುವಂತಾಯ್ತು. ನಟನೆ ಜೊತೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದೇನೆ. ವಿನೋದ್ ಪ್ರಭಾಕರ್ ಅವರು ನಮಗೆ ಮೊದಲಿನಿಂದಲೂ ಸಹಕಾರ ನೀಡುತ್ತಾ ಬಂದಿದ್ದಾರೆ. ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದು ತಿಳಿಸಿದರು.

ಇದನ್ನೂ ಓದಿ: ದಿ ಆರ್ಚೀಸ್: ವೆರೋನಿಕಾ ಪಾತ್ರದಲ್ಲಿ ಸುಹಾನಾ ಖಾನ್​​: ಶಾರುಖ್​ ಪುತ್ರಿಯ ಚೊಚ್ಚಲ ಚಿತ್ರದ ಅನುಭವ ಹೇಗಿತ್ತು?

ರಾಘವೇಂದ್ರ ಜೊತೆ ನಿಧಿ ಮಾರೋಲಿ ಅಭಿನಯಿಸಿದ್ದಾರೆ. ಜೊತೆಗೆ ಸೌಖ್ಯ ಗೌಡ, ಖಳನಾಯಕನಾಗಿ ಜಯ್ ಶೆಟ್ಟಿ, ರಾಜ ಅಲಿ, ಶಿಲ್ಪ ಕುಮಟಾ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿದ್ದಾರೆ‌. ಈ ಸಿನಿಮಾಗೆ ಉತ್ತಮ್ ಸಾರಂಗ್ ಸಂಗೀತ ನೀಡಿದ್ದು, ಜಾಗ್ವಾರ್ ಸಣ್ಣಪ್ಪ ಸಾಹಸ ಸಂಯೋಜನೆ ಮಾಡಿದ್ದಾರೆ. ಕ್ರಿಯೇಟಿವ್ ಹೆಡ್ ಆಗಿ ಕೀರ್ತನ್ ಶೆಟ್ಟಿ ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಹಂಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗಿರುವ ವೇಷ ಚಿತ್ರವನ್ನು ಕೃಷಿ ಸ್ಟುಡಿಯೋಸ್ ಮತ್ತು ಸಚಿತ್ ಫಿಲ್ಮ್ಸ್ ಮಾಲೀಕರಾದ ವೆಂಕಟ್ ಗೌಡ ವಿತರಣೆ ಮಾಡಲಿದ್ದಾರೆ. ಸದ್ಯ ಟ್ರೇಲರ್ ಮೂಲಕ ಸದ್ದು ಮಾಡುತ್ತಿರುವ ವೇಷ ಸಿನಿಮಾ ಶೀಘ್ರದಲ್ಲೇ ತೆರೆಕಾಣಲು ಸಿದ್ಧತೆ ನಡೆಸುತ್ತಿದೆ.

ಇದನ್ನೂ ಓದಿ: 'ಮರಿ ಟೈಗರ್​ಗೆ ಪ್ರೀತಿ, ಪ್ರೋತ್ಸಾಹ ಕೊಟ್ಟು ಆಶೀರ್ವದಿಸಿ': ವಿನೋದ್ ಪ್ರಭಾಕರ್​ಗೆ ಚಾಲೆಂಜಿಂಗ್ ಸ್ಟಾರ್ ಸಾಥ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.