ಹೈದರಾಬಾದ್ : ಬೆಳ್ಳಿತೆರೆಯಲ್ಲಿ ಜೋಡಿಯಾಗಿ ಅಭಿನಯಿಸಿದ್ದ ಟಾಲಿವುಡ್ ನಟ ಕೊನಿಡೇಲ ವರುಣ್ ತೇಜ್ ಮತ್ತು ನಟಿ ಲಾವಣ್ಯ ತ್ರಿಪಾಠಿ ಅವರ ಮದುವೆ ಆರತಕ್ಷತೆ ಭಾನುವಾರ ರಾತ್ರಿ ಹೈದರಾಬಾದ್‌ನಲ್ಲಿ ನಡೆಯಿತು. ಇಬ್ಬರ ಕುಟುಂಬಸ್ಥರ ಸಮ್ಮುಖದಲ್ಲಿ ಸಮಾರಂಭ ನಡೆಯಿತು. ಚಿತ್ರರಂಗ, ಕ್ರೀಡೆ, ರಾಜಕೀಯ, ಉದ್ಯಮ ಕ್ಷೇತ್ರದ ಹಲವು ಗಣ್ಯರು ಆಗಮಿಸಿ ನವ ದಂಪತಿಗೆ ಶುಭ ಹಾರೈಸಿದರು.
ಸಮಾರಂಭಕ್ಕೆ ಟಾಲಿವುಡ್ ನಟ ಅಕ್ಕಿನೇನಿ ನಾಗಚೈತನ್ಯ, ಹಾಸ್ಯನಟ ಅಲಿ, ಸುನೀಲ್, ಆ್ಯಂಕರ್ ಸುಮಾ, ಖ್ಯಾತ ನಿರ್ಮಾಪಕ ಹಾಗು ಸೋದರ ಸಂಬಂಧಿ ಅಲ್ಲು ಅರವಿಂದ್, ನಟರಾದ ರಾಜೇಂದ್ರ ಪ್ರಸಾದ್, ಸುಬ್ಬರಾಜು ಸೇರಿದಂತೆ ಹಲವು ನಟರು, ಗಣ್ಯರು, ಉದ್ಯಮಿಗಳು ಆಗಮಿಸಿದ್ದರು.
ಇದನ್ನೂ ಓದಿ: ವರುಣ್ ತೇಜ್ ಲಾವಣ್ಯ ತ್ರಿಪಾಠಿ ಮದುವೆ: ಕಾಕ್ಟೈಲ್ ಪಾರ್ಟಿಯಲ್ಲಿ ಅಲ್ಲು ಅರ್ಜುನ್, ರಾಮ್ಚರಣ್ ಸೇರಿ ತಾರಾ ಕುಟುಂಬ ಭಾಗಿ
ನವೆಂಬರ್ 1ರಂದು ಈ ಜೋಡಿ ಇಟಲಿಯ ಟಸ್ಕನಿಯಲ್ಲಿ ಸಪ್ತಪದಿ ತುಳಿದಿದ್ದರು. ನವೆಂಬರ್ 4ರಂದು ಹೈದರಾಬಾದ್ಗೆ ಆಗಮಿಸಿದ ದಂಪತಿ ಮೊದಲ ಬಾರಿಗೆ ಸಾರ್ವಜನಿಕವಾಗಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಏರ್ಪೋರ್ಟ್ನಲ್ಲಿ ಹೂವಿನ ಬೊಕ್ಕೆಗಳನ್ನು ನೀಡಿ ತಾರಾ ದಂಪತಿಯನ್ನು ಆತ್ಮೀಯವಾಗಿ ಸ್ವಾಗತಿಸಲಾಗಿತ್ತು.
ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ 2016ರಿಂದ ಡೇಟಿಂಗ್ನಲ್ಲಿದ್ದರು. ಇವರಿಬ್ಬರೂ 2017ರ 'ಮಿಸ್ಟರ್' ಚಿತ್ರದ ಸೆಟ್ನಲ್ಲಿ ಪರಸ್ಪರ ಭೇಟಿಯಾಗಿದ್ದರು. ಅಲ್ಲಿಂದ ಸ್ನೇಹ ಬೆಳೆದು ನಂತರ ಪ್ರೀತಿಸಲು ಶುರು ಮಾಡಿಜದ್ದಾರೆ. ಇದೇ ವರ್ಷ ಜೂನ್ 9ರಂದು ಎಂಗೇಜ್ಮೆಂಟ್ ಮಾಡಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದರು. ಇದೀಗ ತಮ್ಮ ಇಷ್ಟು ವರ್ಷದ ಪ್ರೀತಿಗೆ ದಾಂಪತ್ಯದ ಮುದ್ರೆ ಒತ್ತಿದ್ದಾರೆ.
ವಿಶೇಷ ಆಕರ್ಷಣೆಯ ಕಾಸ್ಟ್ಯೂಮ್ಸ್: ವರುಣ್ ತೇಜ್ ಅವರು ಮದುವೆಯಲ್ಲಿ ಕೆನೆ ಬಣ್ಣದ ಚಿನ್ನದ ಶೆರ್ವಾನಿ ಧರಿಸಿದ್ದರು. ಲಾವಣ್ಯ ತ್ರಿಪಾಠಿ ವಿಶೇಷವಾಗಿ ವಿನ್ಯಾಸಗೊಳಿಸಿದ ಕೆಂಪು ಕಾಂಚೀಪುರಂ ಸೀರೆಯಲ್ಲಿ ಸಮಾರಂಭದ ವಿಶೇಷ ಆಕರ್ಷಣೆಯಾಗಿದರು. ಖ್ಯಾತ ವೆಡ್ಡಿಂಗ್ ಡಿಸೈನರ್ ಮನೀಶ್ ಮಲ್ಹೋತ್ರಾ ಈ ಮದುವೆಯ ಉಡುಪುಗಳನ್ನು ವಿನ್ಯಾಸಗೊಳಿಸಿದ್ದಾರೆ. ಮನೀಶ್ ಇದುವರೆಗೆ ದೇಶದ ಹಲವು ಸೆಲೆಬ್ರಿಟಿಗಳ ಮದುವೆಗೆ ಹಲವು ಬಗೆಯ ವಸ್ತ್ರವಿನ್ಯಾಸ ಮಾಡಿದ್ದಾರೆ.
ಇದನ್ನೂ ಓದಿ: ನವಜೋಡಿ ವರುಣ್ ತೇಜ್ - ಲಾವಣ್ಯ ತ್ರಿಪಾಠಿಗೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ