ಮೆಗಾ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಟಾಲಿವುಡ್ ಸೂಪರ್ಸ್ಟಾರ್ ವರುಣ್ ತೇಜ್ ಮತ್ತು ನಟಿ ಲಾವಣ್ಯ ತ್ರಿಪಾಠಿ ಶೀಘ್ರದಲ್ಲೇ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಜೂನ್ 9 ರಂದು ಈ ಜೋಡಿಯ ನಿಶ್ಚಿತಾರ್ಥ ನೆರವೇರಿತ್ತು. ಇದೀಗ ಮದುವೆ ಸಲುವಾಗಿ ಹೈದರಾಬಾದ್ನಲ್ಲಿರುವ ಖ್ಯಾತ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಶೋ ರೂಮ್ನಲ್ಲಿ ಜೋಡಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರು ತಮ್ಮ ವೆಡ್ಡಿಂಗ್ ಡ್ರೆಸ್ ಪರ್ಚೇಸ್ಗಾಗಿ ಇಲ್ಲಿಗೆ ಭೇಟಿ ನೀಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ.
-
The prep begins for the Mega Wedding❤️🔥
— Scroll & Play (@scrollandplay) September 16, 2023 " class="align-text-top noRightClick twitterSection" data="
Actors #VarunTej & #LavanyaTripathi Spotted at @MMalhotraworld for their wedding outfit trails, Specially designed by @ManishMalhotra💥@IAmVarunTej @Itslavanya #VarunLav #MegaWedding #PowerStar #Megastar #RamCharan #PawanaKalyan… pic.twitter.com/JwutgmyqHb
">The prep begins for the Mega Wedding❤️🔥
— Scroll & Play (@scrollandplay) September 16, 2023
Actors #VarunTej & #LavanyaTripathi Spotted at @MMalhotraworld for their wedding outfit trails, Specially designed by @ManishMalhotra💥@IAmVarunTej @Itslavanya #VarunLav #MegaWedding #PowerStar #Megastar #RamCharan #PawanaKalyan… pic.twitter.com/JwutgmyqHbThe prep begins for the Mega Wedding❤️🔥
— Scroll & Play (@scrollandplay) September 16, 2023
Actors #VarunTej & #LavanyaTripathi Spotted at @MMalhotraworld for their wedding outfit trails, Specially designed by @ManishMalhotra💥@IAmVarunTej @Itslavanya #VarunLav #MegaWedding #PowerStar #Megastar #RamCharan #PawanaKalyan… pic.twitter.com/JwutgmyqHb
ಮದುವೆ ಯಾವಾಗ? ಎಲ್ಲಿ?: ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಮದುವೆಗೆ ಡೇಟ್ ಫಿಕ್ಸ್ ಆಗಿದೆ. ಇತ್ತೀಚೆಗಿನ ಮಾಹಿತಿ ಪ್ರಕಾರ, ನವೆಂಬರ್ 1ರಂದು ಇಟಲಿಯಲ್ಲಿ ಅದ್ಧೂರಿ ಸಮಾರಂಭ ನಡೆಯಲಿದೆ. ಎರಡೂ ಕುಟುಂಬಗಳ ಸಮ್ಮುಖದಲ್ಲಿ ಮೂರು ದಿನಗಳ ಕಾಲ ಡೆಸ್ಟಿನೇಶನ್ ವೆಡ್ಡಿಂಗ್ ಪ್ಲಾನ್ ಮಾಡಲಾಗಿದೆ. ಮದುವೆಗಾಗಿ ಮೆಗಾ ಫ್ಯಾಮಿಲಿ ಇಟಲಿಗೆ ತೆರಳಲಿದ್ದಾರೆ. ಆದರೆ, ಪವರ್ ಸ್ಟಾರ್ ಪವನ್ ಕಲ್ಯಾಣ್ ತಮ್ಮ ಬ್ಯುಸಿ ಶೆಡ್ಯೂಲ್ನಿಂದಾಗಿ ಮದುವೆ ಕಾರ್ಯಕ್ರಮಗಳಲ್ಲಿ ಭಾಗಿಯಾಗದೇ ಇರಬಹುದು ಎನ್ನಲಾಗಿದೆ.
ಪ್ರೀತಿಗೆ ದಾಂಪತ್ಯದ ಮುದ್ರೆ: ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ 2016ರಿಂದ ಡೇಟಿಂಗ್ನಲ್ಲಿದ್ದರು. ಇವರಿಬ್ಬರು 2017ರ 'ಮಿಸ್ಟರ್' ಚಿತ್ರದ ಸೆಟ್ನಲ್ಲಿ ಪರಸ್ಪರ ಭೇಟಿಯಾದರು. ಅಲ್ಲಿಂದ ಸ್ನೇಹ ಬೆಳೆದು ನಂತರ ಪ್ರೀತಿಸಲು ಶುರು ಮಾಡಿದರು. ಇದೇ ವರ್ಷ ಜೂನ್ 9ರಂದು ಎಂಗೇಜ್ಮೆಂಟ್ ಮಾಡಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದರು. ಇದೀಗ ಜೋಡಿ ತಮ್ಮ ಇಷ್ಟು ವರ್ಷದ ಪ್ರೀತಿಗೆ ದಾಂಪತ್ಯದ ಮುದ್ರೆ ಒತ್ತಲು ಸಜ್ಜಾಗಿದ್ದಾರೆ. ವರುಣ್ ತೇಜ್ ನಟ ಹಾಗೂ ನಿರ್ಮಾಪಕ ನಾಗೇಂದ್ರ ಬಾಬು ಅವರ ಪುತ್ರ. ಚಿರಂಜೀವಿ ಮತ್ತು ಪವನ್ ಕಲ್ಯಾಣ್ ಅವರ ಸೋದರಳಿಯ.
ಜೋಡಿಯ ಸಿನಿಮಾ ವಿಚಾರ.. ವರುಣ್ ತೇಜ್ ಸ್ಟಾರ್ ನಟನಾಗಿ ಟಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ. ಸದ್ಯ ಪ್ರವೀಣ್ ಸತ್ತಾರು ನಿರ್ದೇಶನದಲ್ಲಿ 'ಗಾಂಡಿವಧಾರಿ ಅರ್ಜುನ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ವರುಣ್ ಎದುರು ಸಾಕ್ಷಿ ನಟಿಸುತ್ತಿದ್ದಾರೆ. ಮಿಕ್ಕಿ ಜೇ ಮೇಯರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಇದಲ್ಲದೇ ನಿರ್ದೇಶಕ ಶಕ್ತಿ ಪ್ರತಾಪ್ ಸಿಂಹ ಅವರ ಜೊತೆಯೂ ವರುಣ್ ತೇಜ್ ಸಿನಿಮಾ ಮಾಡುತ್ತಿದ್ದಾರೆ.
ಇತ್ತೀಚೆಗೆ ಇವರ 14ನೇ ಸಿನಿಮಾ 'ಮಟ್ಕಾ'ದ ಮುಹೂರ್ತ ಸಮಾರಂಭ ಹೈದರಾಬಾದ್ನಲ್ಲಿ ನೆರವೇರಿತ್ತು. ಈ ಚಿತ್ರವನ್ನು ಮಾರುತಿ ನಿರ್ದೇಶಿಸುತ್ತಿದ್ದಾರೆ. ಇದು ಜೂಜಾಟದ ಕಥೆಯಾಧಾರಿತ ಸಿನಿಮಾ. 1958 ರಿಂದ 82ರ ಅವಧಿಯಲ್ಲಿ ವೈಜಾಗ್ನಲ್ಲಿ ನಡೆದ ಸತ್ಯ ಘಟನೆಯಾಧಾರಿತ ಚಿತ್ರವಾಗಿದೆ. ಬರೋಬ್ಬರಿ 24 ವರ್ಷದ ಹಿಂದಿನ ಕಥೆಯಾಧಾರಿತ ಸಿನಿಮಾವಾಗಿರುವ ಮಟ್ಕಾದಲ್ಲಿ ವರುಣ್ ತೇಜ್ ನಾಲ್ಕು ವಿಭಿನ್ನ ಶೇಡ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೆಗಾ ಪ್ರಿನ್ಸ್ ಸಿನಿ ಕೆರಿಯರ್ನ ಬಿಗ್ ಬಜೆಟ್ ಚಿತ್ರ ಇದಾಗಿದೆ.
ಇನ್ನೂ ಲಾವಣ್ಯ ತ್ರಿಪಾಠಿ ಸಿನಿ ವೃತ್ತಿ ಜೀವನ ಸದ್ಯ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ. ಅವರ ಕೊನೆಯ ಚಿತ್ರ 'ಹ್ಯಾಪಿ ಬರ್ತ್ಡೇ' ಅಭಿಮಾನಿಗಳಿಗೆ ನಿರಾಸೆ ತಂದಿತ್ತು. ಈಗ ಅವರ ಕೈಯಲ್ಲಿ ಒಂದೇ ಒಂದು ತೆಲುಗು ಪ್ರಾಜೆಕ್ಟ್ ಇಲ್ಲ. ತಮಿಳಿನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗೆ ಲಾವಣ್ಯ ನಟಿಸಿರುವ 'ಪುಲಿ ಮೇಕಾ' ವೆಬ್ ಸಿರೀಸ್ ಬಿಡುಗಡೆಯಾಗಿತ್ತು. ಇದು ನಿರೀಕ್ಷಿತ ಮಟ್ಟದಲ್ಲಿ ಹಿಟ್ ಆಗಿಲ್ಲ. ಇದರಲ್ಲಿ ಅವರು ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದರು.
ಇದನ್ನೂ ಓದಿ: ಮೆಗಾ ಕುಟುಂಬದಲ್ಲಿ ನಿಶ್ಚಿತಾರ್ಥದ ಸಂಭ್ರಮ: ಯಾರೆಲ್ಲಾ ಭಾಗಿಯಾಗಿದ್ರೂ ಗೊತ್ತಾ?