ETV Bharat / entertainment

ಜುಗ್​ ಜುಗ್​ ಜಿಯೋ ಪ್ರೊಮೋಶನ್​ : ಮೆಟ್ರೋ ಏರಿದ ಬಾಲಿವುಡ್​ ಸ್ಟಾರ್​ಗಳು - ಜುಗ್​ ಜುಗ್​ ಜಿಯೋ ಹಿಂದಿ ಸಿನಿಮಾ

ಫ್ಯಾಮಿಲಿ ಎಂಟರ್ಟೈನ್​ಮೆಂಟ್​ ಸಿನಿಮಾ 'ಜುಗ್​ ಜುಗ್​ ಜಿಯೋ' ಪ್ರೊಮೋಷನ್​ಗಾಗಿ ತೆರಳುವ ವೇಳೆ ಟ್ರಾಫಿಕ್​ನಿಂದ ತಪ್ಪಿಸಿಕೊಳ್ಳಲು ಮುಂಬೈ ಮೆಟ್ರೋ ಏರಿದ ಬಾಲಿವುಡ್​ ನಟರಾದ ವರುಣ್​ ಧವನ್​, ಕಿಯಾರ ಅಡ್ವಾಣಿ ಹಾಗೂ ಅನಿಲ್​ ಕಪೂರ್​ ವಡಾ ಪಾವ್​ ಸವಿದರು.

Varun, Kiara, Anil hop onto Mumbai Metro for 'JugJugg Jeeyo' promo
ಮೆಟ್ರೋ ಏರಿದ ವರುಣ್​ ಧವನ್​, ಕಿಯಾರ ಅಡ್ವಾಣಿ ಹಾಗೂ ಅನಿಲ್​ ಕಪೂರ್​
author img

By

Published : Jun 16, 2022, 9:37 AM IST

ಮುಂಬೈ : ಬಾಲಿವುಡ್​ ನಟರಾದ ವರುಣ್​ ಧವನ್​, ಕಿಯಾರ ಅಡ್ವಾಣಿ ಹಾಗೂ ಅನಿಲ್​ ಕಪೂರ್​ ತಮ್ಮ ಮುಂಬರುವ ಫ್ಯಾಮಿಲಿ ಎಂಟರ್ಟೈನ್​ಮೆಂಟ್​ ಸಿನಿಮಾ 'ಜುಗ್​ ಜುಗ್​ ಜಿಯೋ' ಪ್ರೊಮೋಷನ್​ಗಾಗಿ ತೆರಳುವ ವೇಳೆ ಟ್ರಾಫಿಕ್​ನಿಂದ ತಪ್ಪಿಸಿಕೊಳ್ಳಲು ಮುಂಬೈ ಮೆಟ್ರೋ ಏರಿದ್ದಾರೆ.

ನಟರು ಮೆಟ್ರೋ ಪ್ರಯಾಣವನ್ನು ಮೆಚ್ಚಿಕೊಂಡಿರುವ ವೀಡಿಯೋವನ್ನು ಮುಂಬೈ ಮೆಟ್ರೋಪಾಲಿಟನ್​ ರೀಜಿಯನ್​ ಡೆವಲಪ್​ಮೆಂಟ್​ ಅಥಾರಿಟಿ(ಎಂಎಂಆರ್​ಡಿ) ಹಂಚಿಕೊಂಡಿದೆ.

ಮಂಗಳವಾರ ಮುಂಬೈ ಫಿಲ್ಮ್​ ಸಿಟಿಯಲ್ಲಿ ಸೂಪರ್​ ಸ್ಟಾರ್​ ಸಿಂಗರ್​ 2 ರಿಯಾಲಿಟಿ ಶೋ ಶೂಟಿಂಗ್​ ಮುಗಿಸಿಕೊಂಡು ಮರಾಠಿ ಶೋ ಚಲಾ ಹವಾ ಯೇ ದ್ಯಾ ಶೂಟಿಂಗ್​ನಲ್ಲಿ ಭಾಗವಹಿಸಲು ಹೋಗುವವರು ಪೀಕ್​ ಅವರ್ಸ್​ ಟ್ರಾಫಿಕ್​ನಿಂದ ತಪ್ಪಿಸಿಕೊಂಡು ಹಾಗೂ ಟೈಮ್​ ಸೇವ್​ ಮಾಡಲು ಸ್ಟಾರ್​ಗಳು ತಮ್ಮ ಕಾರುಗಳನ್ನು ಬಿಟ್ಟು ಮೆಟ್ರೋ ಆಯ್ಕೆ ಮಾಡಿಕೊಂಡರು. ಅದಲ್ಲದೇ ಮೆಟ್ರೋದಲ್ಲಿ ನಟ ಧವನ್​ ಹಾಗೂ ಕಿಯಾರಾ ಮುಂಬೈನ ಸ್ಟ್ರೀಟ್​ ಸ್ನ್ಯಾಕ್ಸ್​​ ವಡಾ ಪಾವ್​ ಸವಿದು ಎಂಜಾಯ್​ ಮಾಡಿದರು.

ಮೆಟ್ರೋ ಏರಿದ ವರುಣ್​ ಧವನ್​, ಕಿಯಾರ ಅಡ್ವಾಣಿ ಹಾಗೂ ಅನಿಲ್​ ಕಪೂರ್​

ಜುಗ್​ ಜುಗ್​ ಜಿಯೋ ಕಾಮಿಡಿ ಡ್ರಾಮಾವನ್ನು ನಿರ್ದೇಶಕ ರಾಜ್​ ಮೆಹ್ತಾ ನಿರ್ದೇಶಿಸಿದ್ದು, ವಯೋಕಾನ್​ 18 ಹಾಗೂ ಧರ್ಮ ಪ್ರೊಡಕ್ಷನ್ಸ್​ ಬಂಡವಾಳ ಹೂಡಿದ್ದಾರೆ. ಸಿನಿಮಾದಲ್ಲಿ ನೀತು ಕಪೂರ್​, ಮನೀಶ್​ ಪೌಲ್​ ಹಾಗೂ ಪ್ರಜಕ್ತಾ ಕೋಲಿ ಬಣ್ಣ ಹಚ್ಚಿದ್ದಾರೆ. ಸಿನಿಮಾ ಜೂನ್​ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ : ಆಲಿಯಾ-ರಣ್​​ಬೀರ್ ಅಭಿನಯದ 'ಬ್ರಹ್ಮಾಸ್ತ್ರ ಭಾಗ 1: ಶಿವ' ಟ್ರೈಲರ್ ರಿಲೀಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.