ETV Bharat / entertainment

ದೀಪಾವಳಿ ಸಂಭ್ರಮದಲ್ಲಿ ಶ್ರೀದೇವಿ ಮಕ್ಕಳು; ಅಭಿಮಾನಿಗಳಿಗೆ ಹಬ್ಬದ ಶುಭಕೋರಿದ ವರುಣ್​ ಧವನ್​ - ಈಟಿವಿ ಭಾರತ ಕನ್ನಡ

Diwali 2023: ಬಾಲಿವುಡ್​ ನಟರಾದ ಜಾಹ್ನವಿ ಕಪೂರ್​, ಖುಷಿ ಕಪೂರ್​ ಮತ್ತು ವರುಣ್​ ಧವನ್​ ದೀಪಾವಳಿ ಸಂಭ್ರಮದಲ್ಲಿದ್ದಾರೆ.

Janhvi Kapoor twins with sister Khushi in lehengas at Karan Johar's Diwali puja - watch
ದೀಪಾವಳಿ ಸಂಭ್ರಮದಲ್ಲಿ ಶ್ರೀದೇವಿ ಮಕ್ಕಳು; ಅಭಿಮಾನಿಗಳಿಗೆ ಹಬ್ಬದ ಶುಭಕೋರಿದ ವರುಣ್​ ಧವನ್​
author img

By ETV Bharat Karnataka Team

Published : Nov 10, 2023, 10:36 PM IST

ಬಾಲಿವುಡ್​ ಚಿತ್ರರಂಗದ ನಟರಾದ ಜಾಹ್ನವಿ ಕಪೂರ್​, ಖುಷಿ ಕಪೂರ್​ ಮತ್ತು ವರುಣ್​ ಧವನ್​ ದೀಪಾವಳಿ ಸಂಭ್ರಮದಲ್ಲಿದ್ದಾರೆ. ದಿವಂಗತ ಲೇಡಿ ಸೂಪರ್​ಸ್ಟಾರ್​ ಮಕ್ಕಳು ಸಾಂಪ್ರದಾಯಿಕ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕರಣ್​ ಜೋಹರ್​ ಅವರ ಕಚೇರಿಯಲ್ಲಿ ಆಯೋಜಿಸಿದ್ದ ದೀಪಾವಳಿ ಪೂಜೆಯಲ್ಲಿ ಸ್ಟಾರ್​ ಕಿಡ್ಸ್​ ಮಿಂಚಿದರು. ಮತ್ತೊಂದೆಡೆ, ವರುಣ್​ ಧವನ್​ ತಮ್ಮ ಅಭಿಮಾನಿಗಳಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಅದಕ್ಕಾಗಿ ವಿಶೇಷ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಲೆಹಂಗಾದಲ್ಲಿ ಕಂಗೊಳಿಸಿದ ಖುಷಿ, ಜಾನು : ಸಹೋದರಿಯರಾದ ಜಾಹ್ನವಿ ಕಪೂರ್​ ಮತ್ತು ಖುಷಿ ಕಪೂರ್​ ಧನ್ತೇರಸ್ ಪೂಜೆಗಾಗಿ ಮುಂಬೈನಲ್ಲಿರುವ ಕರಣ್ ಜೋಹರ್ ಅವರ ಕಚೇರಿಗೆ ಭೇಟಿ ನೀಡಿದರು. ಈ ಹಿಂದೆ ತಿರುಪತಿ ಪ್ರವಾಸದ ವೇಳೆ ಧರಿಸಿದ್ದ ಲೆಹಂಗಾವನ್ನು ಪೂಜೆಗಾಗಿ ಆಯ್ಕೆ ಮಾಡಿಕೊಂಡರು. ದೀಪಾವಳಿಯನ್ನು ಸಂಭ್ರಮಿಸುವಾಗ ಜಾಹ್ನವಿ ಮತ್ತು ಖುಷಿ ಸಾಂಪ್ರದಾಯಿಕ ಉಡುಗೆಯಲ್ಲಿ ಅದ್ಭುತವಾಗಿ ಕಾಣುತ್ತಿದ್ದರು. ತಮ್ಮ ಫೋಟೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ಫ್ಯಾನ್ಸ್​ಗೆ ಹಬ್ಬದ ಶುಭಕೋರಿದ ವರುಣ್​ : ಬಾಲಿವುಡ್​ ನಟ ವರುಣ್​ ಧವನ್​ ತಮ್ಮ ಹಿಂದಿನ ಸಾಧನೆಗಳನ್ನು ಮೆಲುಕು ಹಾಕುವುದರ ಜೊತೆಗೆ ತಮ್ಮ ಅಭಿಮಾನಿಗಳಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ತಮ್ಮ ಕಚೇರಿಯ ಒಂದು ನೋಟವನ್ನು ಹಂಚಿಕೊಂಡಿರುವ ಅವರು, "ಕೆಲವು ಹಳೆಯ ನೆನಪುಗಳ ಮೆಲುಕು ಮತ್ತು ಇನ್ನೂ ಹೊಸತನ್ನು ಮಾಡುತ್ತೇನೆಂದು ಭರವಸೆ ನೀಡುತ್ತೇನೆ. ಹ್ಯಾಪಿ ದೀಪಾವಳಿ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 'ಸ್ಯಾಮ್ ಬಹದ್ದೂರ್': ಭಾರತೀಯ ಸೇನಾ ಕ್ಯಾಂಪ್​​ನಲ್ಲಿ ವಿಕ್ಕಿ ಕೌಶಲ್​​ - ತರಬೇತಿಯ ವಿಡಿಯೋ ನೋಡಿ

ಸಿನಿಮಾ ವಿಚಾರ.. ನಟಿ ಜಾಹ್ನವಿ ಕಪೂರ್​ ಅವರು ಇತ್ತೀಚೆಗೆ ನಿತೇಶ್​ ತಿವಾರಿಯವರ ರೊಮ್ಯಾಂಟಿಕ್​ ಡ್ರಾಮಾ 'ಬವಾಲ್​'ನಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ವರುಣ್​ ಧವನ್​ ಜೊತೆ ನಟಿಸಿದ್ದಾರೆ. ಈ ಸಿನಿಮಾ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆಯಿತು. ಅವರ ಮುಂಬರುವ ಪ್ರಾಜೆಕ್ಟ್​ ಮಿಸ್ಟರ್​ ಅಂಡ್​​ ಮಿಸಸ್​ ಮಾಹಿ. ಇದರಲ್ಲಿ ರಾಜ್​ಕುಮಾರ್​ ರಾವ್​ ಎದುರು ಕಾಣಿಸಿಕೊಳ್ಳಲಿದ್ದಾರೆ. ಶರಣ್​ ಶರ್ಮಾ ನಿರ್ದೇಶನ ಮತ್ತು ಕರಣ್​ ಜೋಹರ್​ ನಿರ್ಮಾಣದ ಈ ಚಿತ್ರ ಏಪ್ರಿಲ್​ 19ರಂದು ಥಿಯೇಟರ್​ಗಳಲ್ಲಿ ಬಿಡುಗಡೆಯಾಗಲಿದೆ.

ನಟಿ ಖುಷಿ ಕಪೂರ್​, ಜೋಯಾ ಅಖ್ತರ್​ ಅವರ ದಿ ಆರ್ಚೀಸ್​ನಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್​ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ತಾರಾಗಣದಲ್ಲಿ ಶಾರುಖ್​ ಖಾನ್​ ಪುತ್ರಿ ಸುಹಾನಾ ಖಾನ್​, ಅಗಸ್ತ್ಯ ನಂದಾ, ವೇದಂಗ್​ ರೈನಾ ಮುಂತಾದವರು ಇದ್ದಾರೆ. ಚಿತ್ರವು ಡಿಸೆಂಬರ್​ 7ರಂದು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗಲಿದೆ.

ಮತ್ತೊಂದೆಡೆ, ನಟ ವರುಣ್​ ಧವನ್​ ಕೊನೆಯದಾಗಿ 'ಬವಾಲ್​' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಅವರು ತಮ್ಮ 18ನೇ ಪ್ರಾಜೆಕ್ಟ್​ನಲ್ಲಿ ತೊಡಗಿಸಿಕೊಂಡಿದ್ದಾರೆ. ತಾತ್ಕಾಲಿಕವಾಗಿ ಈ ಸಿನಿಮಾಗೆ VD 18 ಎಂದು ಹೆಸರಿಡಲಾಗಿದೆ. ಜವಾನ್​ ನಿರ್ದೇಶಕ ಅಟ್ಲೀ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ತಮಿಳು ನಿರ್ದೇಶಕ ಕಾಲೀಸ್​ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ.

ಇದನ್ನೂ ಓದಿ: 'ಸತ್ಯಭಾಮ' ಟೀಸರ್​ ಔಟ್​: ಆ್ಯಕ್ಷನ್​ ಮೂಡ್​ನಲ್ಲಿ ಪೊಲೀಸ್​ ಅಧಿಕಾರಿ ಕಾಜಲ್​ ಅಗರ್ವಾಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.