ETV Bharat / entertainment

ಚಿನ್ನದ ಐಫೋನ್​ ವಾಪಸ್​ ಕೊಡಬೇಕಾದ್ರೆ ಊರ್ವಶಿ ಈ ಬೇಡಿಕೆ ಈಡೇರಿಸಬೇಕಂತೆ: ಅದೇನು? - ಈಟಿವಿ ಭಾರತ ಕನ್ನಡ

ಚಿನ್ನದ ಐಫೋನ್​ ಕಳೆದುಕೊಂಡಿದ್ದ ನಟಿ ಊರ್ವಶಿ ರೌಟೇಲಾಗೆ ಮೊಬೈಲ್​ ಕದ್ದ ವ್ಯಕ್ತಿಯಿಂದ ಇಮೇಲ್​ ಬಂದಿದೆ.

Urvashi Rautela
ಐಫೋನ್​ ವಾಪಸ್​ ಕೊಡಬೇಕಾದ್ರೆ ಊರ್ವಶಿ ರೌಟೇಲಾ ಈ ಬೇಡಿಕೆಯನ್ನು ಈಡೇರಿಸಬೇಕಂತೆ...ಅದೇನು?
author img

By ETV Bharat Karnataka Team

Published : Oct 19, 2023, 10:53 PM IST

ಅಕ್ಟೋಬರ್​ 14, ಶನಿವಾರದಂದು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್​ ಭಾರತ ಮತ್ತು ಪಾಕಿಸ್ತಾನ ವಿಶ್ವಕಪ್​ ಪಂದ್ಯದ ವೇಳೆ ಬಾಲಿವುಡ್​ ನಟಿ ಊರ್ವಶಿ ರೌಟೇಲಾ ಅವರು ತಮ್ಮ ಚಿನ್ನದ ಐಫೋನ್​ ಅನ್ನು ಕಳೆದುಕೊಂಡಿದ್ದರು. ಯಾರಿಗಾದರೂ ಈ ಬೆಲೆಬಾಳುವ ಮೊಬೈಲ್​ ಸಿಕ್ಕಿದರೆ ಹಿಂತಿರುಗಿಸುವಂತೆ ಮನವಿ ಮಾಡಿಕೊಂಡಿದ್ದರು. ಕೊನೆಗೂ ಮೊಬೈಲ್​ ಸಿಕ್ಕಿದೆ. ಆದರೆ ಕದ್ದಿರುವ ಕಳ್ಳ ಮಾತ್ರ ಬಹುದೊಡ್ಡ ಬೇಡಿಕೆಯನ್ನೇ ಊರ್ವಶಿ ಮುಂದಿಟ್ಟಿದ್ದಾನೆ.

ಹೌದು, ಸೌಂದರ್ಯವತಿ ಊರ್ವಶಿ ರೌಟೇಲಾ ಅವರು ತಾವು ಐಫೋನ್​ ಕಳೆದುಕೊಂಡ ಕೂಡಲೇ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಹಂಚಿಕೊಂಡಿದ್ದರು. ಇಂಡಿಯಾ ವರ್ಸಸ್​ ಪಾಕಿಸ್ತಾನ ಪಂದ್ಯದ ವೇಳೆ 24 ಕ್ಯಾರೆಟ್​ ರಿಯಲ್​ ಗೋಲ್ಡ್​​ ಐಫೋನ್ ಕಳೆದುಕೊಂಡಿದ್ದು, ಯಾರಿಗಾದರೂ ಸಿಕ್ಕಿದ್ದಲ್ಲಿ ಹಿಂತಿರುಗಿಸುವಂತೆ ವಿನಂತಿಸಿಕೊಂಡಿದ್ದರು. ಈ ಸಂಬಂಧ ನಟಿಗೊಂದು ಮೇಲ್​ ಬಂದಿದೆ. ಅದರಲ್ಲಿ ಮೊಬೈಲ್​ ನನ್ನ ಬಳಿ ಇರುವುದಾಗಿಯೂ, ವಾಪಸ್​ ನೀಡಬೇಕಾದರೆ ಬೇಡಿಕೆಯೊಂದನ್ನು ಈಡೇರಿಬೇಕಾಗಿ ಐಫೋನ್​ ಕದ್ದ ವ್ಯಕ್ತಿ ಹೇಳಿದ್ದಾನೆ.

ಬೇಡಿಕೆ ಏನು?: ಊರ್ವಶಿ ರೌಟೇಲಾ ಅವರಿಗೆ ಮೊಬೈಲ್​ ನೀಡಬೇಕಂದ್ರೆ, ಆತ ತನ್ನ ಸಹೋದರನನ್ನು ಕ್ಯಾನ್ಸರ್​ನಿಂದ ರಕ್ಷಿಸಲು ನಟಿಯ ಸಹಾಯ ಕೇಳಿದ್ದಾನೆ. "ನಿಮ್ಮ ಫೋನ್​ ನನ್ನ ಬಳಿ ಇದೆ. ನಿಮಗೆ ಅದು ಬೇಕಾದರೆ, ನನ್ನ ಸಹೋದರನನ್ನು ಕ್ಯಾನ್ಸರ್​ನಿಂದ ರಕ್ಷಿಸಲು ನೀವು ನನಗೆ ಸಹಾಯ ಮಾಡಬೇಕು" ಎಂದು ಇಮೇಲ್​ನಲ್ಲಿ ಬರೆದಿದ್ದಾನೆ. ಥಂಬ್ಸ್​ ಅಪ್​ ನೀಡುವ ಮೂಲಕ ಊರ್ವಶಿ ಇಮೇಲ್​ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಅಬ್ಬಬ್ಬಾ! 190 ಕೋಟಿ ರೂ. ಮೌಲ್ಯದ ಮನೆ ಖರೀದಿಸಿದ ಚೆಲುವೆ ಊರ್ವಶಿ ರೌಟೇಲಾ

ಊರ್ವಶಿ ರೌಟೇಲಾ ಶನಿವಾರ ಸ್ಟೇಡಿಯಂಗೆ ಹೋಗುವ ಮುನ್ನ ಪಂದ್ಯದ ಟಿಕೆಟ್​ಗಳನ್ನು ತೋರಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದರು. ನಂತರ ಭಾರತ ಮತ್ತು ಪಾಕಿಸ್ತಾನ ಮ್ಯಾಚ್​ ಅನ್ನು ಆನಂದಿಸುತ್ತಿರುವ ನೋಟದೊಂದಿಗೆ ಅಭಿಮಾನಿಗಳನ್ನು ರಂಜಿಸಿದರು. ಈ ಹೈವೋಲ್ಟೇಜ್​ ಮ್ಯಾಚ್​ ನೋಡಲು ಬರುವಾಗ ರೂಪವತಿ ಬ್ಲೂ ಕಲರ್​ ಮಿನಿ ಬಾಡಿಕಾನ್​ ಡ್ರೆಸ್​ ಧರಿಸಿದ್ದರು.

2 ನಿಮಿಷದ ಹಾಡಿಗೆ 2 ಕೋಟಿ: ಮನಮೋಹಕ ಸುಂದರಿ ಊರ್ವಶಿ ರೌಟೇಲಾ ಸಿನಿಮಾಗಳಲ್ಲಿನ ವಿಶೇಷ ಹಾಡುಗಳಿಗೆ ಹೆಜ್ಜೆ ಹಾಕಿ, ಭಾರಿ ಮೊತ್ತದ ಹಣ ಪಡೆಯುತ್ತಾರೆ. ತಮ್ಮ ಚೆಲುವು ಮತ್ತು ನಟನೆಯಿಂದಲೇ ಉತ್ತರದಿಂದ ದಕ್ಷಿಣದವರೆಗೂ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ. ಈ ವರ್ಷ ಚಿರಂಜೀವಿ ಅಭಿನಯದ 'ವಾಲ್ತೇರು ವೀರಯ್ಯ' ಚಿತ್ರದಲ್ಲಿ 'ಬಾಸು ವೇರ್ ಈಸ್ ದಿ ಪಾರ್ಟಿ' ಹಾಡಿನಲ್ಲಿ ಸದ್ದು ಮಾಡಿದ್ದ ಊರ್ವಶಿ ನಂತರ 'ಏಜೆಂಟ್' ಚಿತ್ರದಲ್ಲಿ 'ವೈಲ್ಡ್ ಸಾಲಾ'ದಲ್ಲಿ ಹೆಚ್ಚು ಕ್ರೇಜ್ ಹುಟ್ಟಿಸಿದರು. ಈ ಎಲ್ಲಾ ಸಿನಿಮಾಗಳಿಗೆ ಅವರು ತೆಗೆದುಕೊಳ್ಳುತ್ತಿರುವ ಸಂಭಾವನೆ ಸದ್ಯ ಹಾಟ್​ ಟಾಪಿಕ್​ ಆಗಿದೆ. 2 ನಿಮಿಷದ ಹಾಡಿಗೆ ಅವರು 2 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.

ಇದನ್ನೂ ಓದಿ: 2 ಲಕ್ಷ ಮೌಲ್ಯದ ಬ್ಯಾಗ್​ ಹಿಡಿದು ಬಂದ ಊರ್ವಶಿ ರೌಟೇಲಾ: ಚೆಲುವೆಯ ವಿಡಿಯೋ ವೈರಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.