ETV Bharat / entertainment

ಡಾಲಿ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಬೊಂಬಾಟ್ ಗಿಫ್ಟ್: 'ಅಣ್ಣ From Mexico' ಮೋಷನ್​ ಪೋಸ್ಟರ್ ಬಿಡುಗಡೆ - Anna From Mexico motion poster release

Anna From Mexico motion poster release: ಬಡವ ರಾಸ್ಕಲ್‌ ಚಿತ್ರತಂಡ ಮತ್ತೊಂದು ಸಿನಿಮಾ ಘೊಷಿಸಿದೆ. ನಟ ಧನಂಜಯ್‌ ಹುಟ್ಟುಹಬ್ಬದ ಪ್ರಯುಕ್ತ ‘ಅಣ್ಣ From Mexico’ ಚಿತ್ರದ ಟೀಸರ್‌, ಪೋಸ್ಟರ್‌ಗಳು ಬಿಡುಗಡೆಗೊಂಡಿವೆ.

Anna From Mexico
ಅಣ್ಣ From Mexico
author img

By ETV Bharat Karnataka Team

Published : Aug 23, 2023, 11:46 AM IST

ಸ್ಯಾಂಡಲ್​ವುಡ್​ನ ನಟರಾಕ್ಷಸ ಡಾಲಿ ಧನಂಜಯ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಧನು ಜನ್ಮದಿನದ ನಿಮಿತ್ತ ಹೊಸ ಸಿನಿಮಾಗಳ ಪೋಸ್ಟರ್, ಟೀಸರ್ ಉಡುಗೊರೆಯಾಗಿ ಸಿಕ್ಕಿದೆ. ಅದರಂತೆ, ಬಡವ ರಾಸ್ಕಲ್ ಚಿತ್ರತಂಡದಿಂದ ಡಾಲಿ ಬರ್ತ್ ಡೇಗೆ ಸ್ಪೆಷಲ್ ಗಿಫ್ಟ್​ವೊಂದು ಸಿಕ್ಕಿದೆ. 'ಬಡವ ರಾಸ್ಕಲ್' ತಂಡದಿಂದ ಮತ್ತೊಂದು ಹೊಸ ಸಿನಿಮಾ ಘೋಷಣೆ ಮಾಡಲಾಗಿದ್ದು, ಮಧ್ಯರಾತ್ರಿ 12 ಗಂಟೆಗೆ ಟೈಟಲ್ ಹಾಗೂ ಫಸ್ಟ್ ಲುಕ್ ಮೋಷನ್​ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಚಿತ್ರಕ್ಕೆ 'ಅಣ್ಣ From Mexico' ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ.

2021 ರಲ್ಲಿ ಡಾಲಿ ಧನಂಜಯ್ ಅಭಿನಯದಲ್ಲಿ ತೆರೆಗೆ ಬಂದ ಬಡವ ರಾಸ್ಕಲ್ ಸೂಪರ್ ಚಿತ್ರ ಸೂಪರ್​ ಹಿಟ್ ಆಗಿತ್ತು. ಈ ಚಿತ್ರದ ಮೂಲಕ ಧನಂಜಯ್ ನಿರ್ಮಾಪಕರಾಗಿ ಬಡ್ತಿ ಪಡೆದಿದ್ದರು. ತಮ್ಮದೇ ಡಾಲಿ ಪಿಕ್ಚರ್ಸ್ ಅಡಿ ಸಿನಿಮಾ ನಿರ್ಮಿಸಿ, ನಟಿಸಿದ್ದ ಬಡವ ರಾಸ್ಕಲ್ ಅನ್ನು ಶಂಕರ್ ಗುರು ನಿರ್ದೇಶಿಸಿದ್ದರು. ಮೊದಲ ಹೆಜ್ಜೆಯಲ್ಲಿಯೇ ಗೆದ್ದಿದ್ದ ಶಂಕರ್ ಗುರು, ಇದೀಗ ಮತ್ತೊಂದು ಚೆಂದದ ಕಥೆ ಮಾಡಿ ಡಾಲಿ ಫ್ಯಾನ್ಸ್ ರಂಜಿಸಲು ಮುಂದಾಗಿದ್ದಾರೆ. ಇದರ ಮೊದಲ ಭಾಗ ಎಂಬಂತೆ ಇಂದು ಅಣ್ಣ From Mexico ಎಂಬ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಕೊರಳಿಗೆ ಕರ್ನಾಟಕ ಮ್ಯಾಪ್ ಇರುವ ಪೆಂಡೆಂಟ್ ಆಭರಣ ಧರಿಸಿ, ಸೂಟ್​ ತೊಟ್ಟಿರುವ ಧನಂಜಯ್ ಲುಕ್ ರಿವೀಲ್ ಮಾಡದೇ ಚಿತ್ರತಂಡ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.

ಇದನ್ನೂ ಓದಿ : ಹ್ಯಾಪಿ ಬರ್ತ್‌ಡೇ ! ಸ್ಯಾಂಡಲ್​ವುಡ್​ ಜನಪ್ರಿಯ ನಟ ಡಾಲಿ ಧನಂಜಯ್​ ಸಿನಿಪಯಣ

' ಅಣ್ಣ From Mexico ' ಶಂಕರ್ ಗುರು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಎರಡನೇ ಸಿನಿಮಾವಾಗಿದೆ. ಪಕ್ಕ ಆ್ಯಕ್ಷನ್ ಚಿತ್ರವಾಗಿದ್ದು, ಅಜ್ಜಿ ಮತ್ತು ಮೊಮ್ಮಗನ ಬಾಂಧವ್ಯದ ಕಥೆ ಸಿನಿಮಾದಲ್ಲಿರಲಿದೆ. ಹಾಗೆಯೇ, ಸತ್ಯ ರಾಯಲ್ ನಿರ್ಮಾಣದಲ್ಲಿ ತಯಾರಾಗಲಿರುವ ಈ ಸಿನಿಮಾಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಲಿದ್ದು, ಮುಂದಿನ ನವೆಂಬರ್ ತಿಂಗಳಿನಿಂದ ಚಿತ್ರೀಕರಣ ಶುರುವಾಗಲಿದೆ. ಮೆಕ್ಸಿಕೋ ಸೇರಿದಂತೆ ಹಲವೆಡೆ ಶೂಟಿಂಗ್​ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಇದನ್ನೂ ಓದಿ : ಬಹುಭಾಷಾ ಸುಂದರಿ ಜೊತೆ ಡಾಲಿ ಧನಂಜಯ್ ಲಾಂಗ್ ಡ್ರೈವ್​​.. ತೋತಾಪುರಿ 2 ಮೇಕಿಂಗ್ ವಿಡಿಯೋ ರಿವೀಲ್

ಇನ್ನು 1986ರ ಆಗಸ್ಟ್ 23 ರಂದು ಹಾಸನ ಜಿಲ್ಲೆಯ ಕಾಳೇನಹಳ್ಳಿಯಲ್ಲಿ ಜನಿಸಿದ ಧನಂಜಯ್, 37 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ರತ್ನನ್ ಪ್ರಪಂಚ, ಬಡವ ರಾಸ್ಕಲ್, ಗುರುದೇವ ಹೊಯ್ಸಳ, ಮಾನ್ಸೂನ್ ರಾಗ, ಹೆಡ್ ಬುಷ್ ಹೀಗೆ ಒಂದಾದ ಬಳಿಕ ಒಂದರಂತೆ ಚಿತ್ರಗಳನ್ನು ಮಾಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರು ಸಂಪಾದಿಸಿದ್ದಾರೆ.

ಇದನ್ನೂ ಓದಿ : ಜಗ್ಗೇಶ್​ ಜೊತೆ ' ತೋತಾಪುರಿ 2 ' ಸಿನಿಮಾದಲ್ಲಿ ಡಾಲಿ ಧನಂಜಯ್​ ಪಾತ್ರವೇನು ಗೊತ್ತಾ ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.