ETV Bharat / entertainment

UI: ನಾಳೆ ಬಹುನಿರೀಕ್ಷಿತ ಯುಐ ಟೀಸರ್​ ಅನಾವರಣ - ಉಪ್ಪಿ ಅಭಿಮಾನಿಗಳಲ್ಲಿ ಕುತೂಹಲ - ಉಪೇಂದ್ರ ಮುಂದಿನ ಸಿನಿಮಾ

ಬಹುನಿರೀಕ್ಷಿತ ಯುಐ ಟೀಸರ್ ನಾಳೆ ಬೆಳಗ್ಗೆ 10 ಗಂಟೆಗೆ​ ಅನಾವರಣಗೊಳ್ಳಲಿದೆ.

ಯುಐ ಟೀಸರ್​
UI teaser
author img

By ETV Bharat Karnataka Team

Published : Sep 10, 2023, 5:53 PM IST

ಕನ್ನಡ ಚಿತ್ರರಂಗದ ರಿಯಲ್​ ಸ್ಟಾರ್​ ಉಪೇಂದ್ರ ಅಭಿನಯದ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಯುಐ'. ಶೀರ್ಷಿಕೆಯಿಂದಲೇ ದಕ್ಷಿಣ ಚಿತ್ರರಂಗದಲ್ಲಿ ಸಖತ್​ ಸದ್ದು ಮಾಡುತ್ತಿದೆ. ಕಥೆ ಕುರಿತು ಕಿಂಚಿತ್ತೂ ಸುಳಿವು ಬಿಟ್ಟುಕೊಟ್ಟಿಲ್ಲ ಚಿತ್ರತಂಡ. ಉಪ್ಪಿ ನಟನೆಯ ಅಥವಾ ನಿರ್ದೇಶನದ ಪ್ರತೀ ಸಿನಿಮಾ ಕೂಡ ವಿಭಿನ್ನ. ಹಾಗಾಗಿ ಉಪ್ಪಿ ಮುಂದಿನ ಸಿನಿಮಾ ಮೇಲೆ ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ.

ಪ್ಯಾನ್​​ ಇಂಡಿಯಾ ಮಟ್ಟದಲ್ಲಿ ನಿರ್ಮಾಣ ಆಗುತ್ತಿರುವ ಯುಐ ಚಿತ್ರದಲ್ಲಿ ನಟ ಉಪೇಂದ್ರ ನಟಿಸುವುದರ ಜೊತೆಗೆ ಆ್ಯಕ್ಷನ್​ ಕಟ್​ ಕೂಡ ಹೇಳಿದ್ದಾರೆ. ಉಪ್ಪಿ 2 ಸಿನಿಮಾ ಬಳಿಕ ಉಪೇಂದ್ರ ಡೈರೆಕ್ಟರ್​ ಕ್ಯಾಪ್​ ತೊಟ್ಟ ಚಿತ್ರವಿದು. ಉಪ್ಪಿ 2 ಸಿನಿಮಾ 2015ರಲ್ಲಿ ತೆರೆಕಂಡಿತ್ತು. ಉಪೇಂದ್ರ ಅವರ ನಟನೆಗೆ ಮಾತ್ರವಲ್ಲ, ನಿರ್ದೇಶನ ಶೈಲಿಗೂ ಕೂಡ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇವರು ನಟಿಸುವುದರ ಜೊತೆ ನಿರ್ದೇಶನ ಮಾಡಿರುವ ಯುಐ ಚಿತ್ರದ ಟೀಸರ್​ ನಾಳೆ ಬೆಳಗ್ಗೆ 10 ಗಂಟೆಗೆ ಅನಾವರಣಗೊಳ್ಳಲಿದೆ. ಹೀಗಾಗಿ ಅಭಿಮಾನಿಗಳಲ್ಲಿ ಸಿನಿಮಾ ಕುರಿತ ಕುತೂಹಲ ಹೆಚ್ಚಾಗಿದೆ.

ಅದ್ಧೂರಿಯಾಗಿ ಸೆಟ್ಟೇರಿದ್ದ ಯುಐ ಚಿತ್ರ ಈಗಾಗಲೇ ಶೂಟಿಂಗ್​ ಪೂರ್ಣಗೊಳಿಸಿ ಪೋಸ್ಟ್​​ ಪ್ರೊಡಕ್ಷನ್​ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಕೆಪಿ ಶ್ರೀಕಾಂತ್​ ಮತ್ತು ನವೀನ್​ ಬಂಡವಾಳ ಹೂಡಿರುವ ಈ ಸಿನಿಮಾದಲ್ಲಿ ರೀಷ್ಮಾ ನಾಣಯ್ಯ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ. ಈಗಾಗಲೇ ವಿಭಿನ್ನ ರೀತಿಯಲ್ಲಿ ಪ್ರಮೋಶನ್​ ಪ್ರಾರಂಭಿಸಿದೆ.

ಚಿತ್ರತಂಡ ಎಡಿಟಿಂಗ್​ ಕೆಲಸ ಚುರುಕುಗೊಳಿಸಿದೆ. ಚಿತ್ರದಲ್ಲಿ 200ಕ್ಕೂ ಹೆಚ್ಚು ಕ್ಯಾಮರಾಗಳನ್ನು ಬಳಸಿಕೊಳ್ಳಲಾಗಿದೆ. 3ಡಿ ಬಾಡಿ ಸ್ಕ್ಯಾನ್​ ಕೂಡ ಬಳಸಿಕೊಳ್ಳಲಾಗಿದೆ. ಈ ತಂತ್ರಜ್ಞಾನ ಬಳಸಿದ ಮೊದಲ ಚಿತ್ರವಿದು. ಆಧುನಿಕ ಟೆಕ್ನಾಲಜಿ ಬಳಸಿಕೊಳ್ಳಲಾಗಿದ್ದು, ಕನ್ನಡದಲ್ಲಿ ಹೊಸ ಪ್ರಯತ್ನ. ಸಿನಿಮಾ 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ ಎಂದು ವರದಿ ಆಗಿದೆ. ಹಲವು ವಿಶೇಷತೆಗಳಿಂದ ಗಮನ ಸೆಳೆಯುತ್ತಿರುವ ಈ ಸಿನಿಮಾ ಎಷ್ಟರ ಮಟ್ಟಿಗೆ ಯಶಸ್ಸು ಕಾಣಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: Morocco earthquake: ನಿರಾಶ್ರಿತರ ನೋವಿಗೆ ಮಿಡಿದ ಪ್ರಧಾನಿ ಮೋದಿ.. ಪಿಎಂ ಟ್ವೀಟ್​ಗೆ ನೋರಾ ಫತೇಹಿ ಧನ್ಯವಾದ

ಸಿನಿಮಾ ಕುರಿತು ಚಿತ್ರತಂಡ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಈಗಾಗಲೇ ಚಿತ್ರತಂಡ ವಿಭಿನ್ನ ಪ್ರಚಾರ ಆರಂಭಿಸಿದ್ದು, ನಾಳೆ ಟೀಸರ್​ ಅನಾವರಣಗೊಳಿಸಲಿದೆ. ಈ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಲಿದ್ದಾರೆ ರಿಯಲ್​ ಸ್ಟಾರ್ ಉಪ್ಪಿ. ಸಿನಿಮಾ ಬಿಡುಗಡೆ ದಿನಾಂಕ ಇನ್ನಷ್ಟೇ ಘೋಷಣೆ ಆಗಬೇಕಿದೆ.

ಇದನ್ನೂ ಓದಿ: 59ನೇ ವಯಸ್ಸಿನಲ್ಲೂ ಫಿಟ್‌ & ಫೈನ್, ಯುವಕರನ್ನು ನಾಚಿಸುವ ಚಾರ್ಮ್! ಬರ್ತ್‌ಡೇ ದಿನ ಹೊಸ ಸಿನಿಮಾ ಘೋಷಿಸಿದ ರಮೇಶ್‌ ಅರವಿಂದ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.