ಉಗ್ರಂ. ಇದು 2014ರಲ್ಲಿ ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ ಸಿನಿಮಾ. ಯಾವುದೇ ನಿರೀಕ್ಷೆ ಇಲ್ಲದೇ ಚಿತ್ರಮಂದಿರಕ್ಕೆ ಬಂದು ಬ್ಲಾಕ್ ಬಸ್ಟರ್ ಆಗಿದ್ದ ಈ ಚಿತ್ರ ನಟ ಶ್ರೀಮುರಳಿ ಸೇರಿದಂತೆ ನಿರ್ದೇಶಕ, ಸಂಗೀತ ನಿರ್ದೇಶಕ, ಕ್ಯಾಮರಾಮ್ಯಾನ್ ಸೇರಿದಂತೆ ಸಾಕಷ್ಟು ಹೊಸ ಕಲಾವಿದರಿಗೆ ಹೆಸರು ತಂದುಕೊಟ್ಟಿದೆ. ಅದರಲ್ಲೂ ಶ್ರೀಮುರಳಿಗೆ ಸಿನಿಮಾ ಮರುಜೀವ ಕೊಟ್ಟು ಇಡೀ ಸೌತ್ ಸಿನಿಮಾ ಇಂಡಸ್ಟ್ರಿಯೇ ತಿರುಗಿ ನೋಡುವಂತೆ ಮಾಡಿತ್ತು.
ಸಾಮಾನ್ಯವಾಗಿ ಕನ್ನಡ ಸಿನಿಮಾಗಳು ಹಿಂದಿ, ತೆಲುಗು, ತಮಿಳು ಭಾಷೆಗಳಿಗೆ ರಿಮೇಕ್ ಆಗೋದು ಕಾಮನ್. ಅದೇ ರೀತಿ ಮರಾಠಿಯಲ್ಲಿ ಉಗ್ರಂ ಸಿನಿಮಾ ರೀಮೇಕ್ ಆಗುತ್ತಿದೆ. ಉಗ್ರಮ ರಿಲೀಸ್ ಆಗಿ 8 ವರ್ಷಗಳೇ ಕಳೆದಿವೆ. ಇದೀಗ ಈ ಚಿತ್ರವನ್ನು ಮರಾಠಿಯಲ್ಲಿ ಸುಮಿತ್ ಕಕ್ಕಡ್ ನಿರ್ದೇಶನ ಮಾಡುತ್ತಿದ್ದಾರೆ. ಮರಾಠಿ ಸಿನಿಮಾದ ಪಾತ್ರವರ್ಗ ಕೂಡ ಅಂತಿಮಗೊಂಡಿದೆಯಂತೆ. ವರದಿಗಳ ಪ್ರಕಾರ, ಕನ್ನಡದಲ್ಲಿ ನಟಿ ಹರಿಪ್ರಿಯ ನಟಿಸಿದ್ದ ಪಾತ್ರದಲ್ಲಿ ಶಾನ್ವಿ ಶ್ರೀವತ್ಸವ್ ನಟಿಸುತ್ತಿದ್ದಾರೆ. ನಾಯಕನಾಗಿ ಶರದ್ ಖೇಳ್ಕರ್ ನಟಿಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಹುಲಿಗೆಮ್ಮ ದೇವಿ ಅವತಾರದಲ್ಲಿ ನಟಿ ಪ್ರಿಯಾಂಕ ಉಪೇಂದ್ರ: ಕೊಪ್ಪಳದಲ್ಲಿಂದು ಸಿನಿಮಾ ಮುಹೂರ್ತ