ETV Bharat / entertainment

ಕನ್ನಡದ ಯು- ಟರ್ನ್​ ಸಿನಿಮಾ ಹಿಂದಿಗೆ ರಿಮೇಕ್​: ಟ್ರೇಲರ್​ ಔಟ್​ - ಈಟಿವಿ ಭಾರತ ಕನ್ನಡ

ನಟಿ ಅಲಯ ಎಫ್ ಅಭಿನಯದ ಯು- ಟರ್ನ್ ಚಿತ್ರ​ದ ಟ್ರೇಲರ್​ ಇಂದು ಬಿಡುಗಡೆಯಾಗಿದೆ.

U-Turn
ಯು- ಟರ್ನ್
author img

By

Published : Apr 13, 2023, 5:18 PM IST

ಶ್ರದ್ಧಾ ಶ್ರೀನಾಥ್​ ಅಭಿನಯದ 2016 ರಲ್ಲಿ ತೆರೆ ಕಂಡಿದ್ದ ಯು- ಟರ್ನ್ ಚಿತ್ರ​ ಇದೀಗ ಹಿಂದಿಯಲ್ಲಿ ರಿಮೇಕ್​ ಆಗುತ್ತಿದೆ. ಈ ಸಿನಿಮಾದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಜವಾನಿ ಜಾನೆಮನ್​ ನಟಿ ಅಲಯ ಎಫ್​ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಆ್ಯಕ್ಷನ್​ ಥ್ರಿಲ್ಲರ್​ ಕಥೆಯಾಗಿದ್ದು, ಅಕ್ರಮವಾಗಿ ಯು - ಟರ್ನ್​ ತೆಗೆದುಕೊಳ್ಳುವ ವಾಹನ ಚಾಲಕರ ಸುತ್ತ ಸುತ್ತುತ್ತದೆ. ಅಲ್ಲದೇ ಈ ಒಂದು ಯು- ಟರ್ನ್​ ಅವರ ಬದುಕನ್ನೇ ಬದಲಾಯಿಸುತ್ತದೆ ಎಂಬುದು ಅವರಿಗೆ ತಿಳಿದಿರುವುದಿಲ್ಲ. ಇದುವೇ ಸಿನಿಮಾದ ಕಥಾಹಂದರ. ಅಲಯಾ ಅವರು ರಾಧಿಕಾ ಎಂಬ ಪತ್ರಕರ್ತೆಯ ಪಾತ್ರ ನಿರ್ವಹಿಸಿದ್ದಾರೆ.

ಯು - ಟರ್ನ್​ ಕಥೆ: ಚಿತ್ರದಲ್ಲಿ ಅವಳು (ರಾಧಿಕಾ) ಒಂದು ನಿರ್ದಿಷ್ಟ ಮೇಲ್ಸೆತುವೆಯಲ್ಲಿ ಸಂಭವಿಸುವ ಸರಣಿ ಅಪಘಾತಗಳನ್ನು ತನಿಖೆ ಮಾಡುತ್ತಾರೆ. ಆ ಸ್ಥಳದಲ್ಲಿ ಅಕ್ರಮವಾಗಿ ಯು - ಟರ್ನ್​ ತೆಗೆದುಕೊಳ್ಳುವ ವಾಹನ ಚಾಲಕರೇ ಈ ಅಪಘಾತಗಳಿಗೆ ಮೂಲ ಕಾರಣ ಎಂಬುದು ಆಕೆಗೆ ಅರಿವಾಗುತ್ತದೆ. ಬಳಿಕ ಅವಳು ಆ ವಾಹನ ಚಾಲಕರೊಂದಿಗೆ ವೈಯಕ್ತಿಕವಾಗಿ ವ್ಯವಹರಿಸಲು ಪ್ರಾರಂಭಿಸುತ್ತಾರೆ ಮತ್ತು ಸಮಸ್ಯೆಗಳನ್ನು ಪರಿಹರಿಸುತ್ತಾರೆ. ಅದಾಗ್ಯೂ ಒಬ್ಬ ಸವಾರ ಮರಣ ಹೊಂದುತ್ತಾನೆ. ಇದು ಅವಳ ತನಿಖೆ ಗಾಢವಾದ ತಿರುವು ಪಡೆದುಕೊಳ್ಳುತ್ತದೆ.

ಈ ಪ್ರಕರಣವನ್ನು ಬಯಲಿಗೆಳೆಯಲು ನಟ ಪ್ರಿಯಾಂಶು ಪೈನ್ಯುಲಿ ಅವರು ಇನ್ಸ್​ಪೆಕ್ಟರ್​ ಅರ್ಜುನ್​ ಸಿನ್ಹಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಧಿಕಾ ಮತ್ತು ಪೊಲೀಸರು ಎರಡು ಕಡೆಯಿಂದಲೂ ತನಿಖೆ ಪ್ರಾರಂಭಿಸುತ್ತಾರೆ. ಯು- ಟರ್ನ್​ ತೆಗೆದುಕೊಂಡವರೆಲ್ಲ ಸತ್ತರು. ರಾಧಿಕಾ ಅವರಲ್ಲಿ ಈ ಸಾವುಗಳಿಗೆ ಸಂಬಂಧಿಸಿರುವ ಬಲವಾದ ಪುರಾವೆಗಳಿವೆ. ಅದಾಗ್ಯೂ ಎಲ್ಲ ಘಟನೆಗಳು ಗೌಪ್ಯವಾಗಿಯೇ ಉಳಿದು ಬಿಡುತ್ತವೆ. ಹಾಗಾದರೆ ಅವರಿಬ್ಬರು ಜೊತೆಯಾಗಿ ಈ ಸಮಸ್ಯೆಗಳನ್ನು ಹೇಗೆ ಬಗೆಹರಿಸುತ್ತಾರೆ? ಎಂಬುದೇ ಯು- ಟರ್ನ್​ ಕಥೆ.

ಇದನ್ನೂ ಓದಿ: ಲೂಧಿಯಾನದ ಚಿಕ್ಕ ಅಡುಗೆ ಮನೆಯಿಂದ ಮಾಸ್ಟರ್​ ಶೆಫ್​ ಕಾರ್ಯಕ್ರಮದ ಟಾಪ್​ 5 ಸ್ಥಾನದವರೆಗೆ ಕುಲ್ದೀಪ್​ ಕೌರ್​ ಪಯಣ

ಚಿತ್ರದ ಬಗ್ಗೆ ಮಾತನಾಡಿದ ಅಲಯಾ, "ಯು- ಟರ್ನ್​ ಒಂದು ಥ್ರಿಲ್ಲರ್ ಸಿನಿಮಾ ಆಗಿದ್ದು, ಪ್ರೇಕ್ಷಕರನ್ನು ಕಾತುರದಿಂದ ಕೊಂಡೊಯ್ಯುತ್ತದೆ. ನಾನು ರಾಧಿಕಾ ಪಾತ್ರಕ್ಕೆ ಜೀವ ತುಂಬಿದ್ದು ನಿಜಕ್ಕೂ ನಂಬಲಾಗದ ಅನುಭವವಾಗಿದೆ. ಅವರು ನನ್ನಂತೆಯೇ ಕುತೂಹಲ ಹೊಂದಿರುತ್ತಾರೆ. ಆದರೆ, ತುಂಬಾ ಧೈರ್ಯಶಾಲಿ. ನಟಿಯಾಗಿ ನನಗೆ ಸವಾಲು ಹಾಕಿದ ಪಾತ್ರಗಳಲ್ಲಿ ಇದೂ ಒಂದು. ಆದರೆ, ಈ ಚಿತ್ರದ ಶೂಟಿಂಗ್​ ಪ್ರಕ್ರಿಯೆಯ ಮೂಲಕ ನಾನು ತುಂಬಾ ಕಲಿತಿದ್ದೇನೆ. ಇಂತಹ ಒಂದು ಕಥೆ ಭಾಗವಾಗಲು ನಿಜಕ್ಕೂ ಸಂತೋಷವಾಗಿದೆ" ಎಂದರು.

ಮುಂದುವರೆದು, "ಒಂದು ಯು- ಟರ್ನ್​ ನಿಮ್ಮ ಜೀವವನ್ನೇ ಕಳೆದುಕೊಳ್ಳಬಹುದು. ಸಿನಿಮಾ ವೀಕ್ಷಿಸುವ ಪ್ರೇಕ್ಷಕರು ಬಹಳಷ್ಟು ಆಶ್ಚರ್ಯಕರ ಸಂಗತಿಗಳನ್ನು ನೋಡುತ್ತಾರೆ ಎಂದು ನನಗೆ ಖಾತ್ರಿಯಿದೆ. ಹಾಗಾಗಿ ನೀವು ದಯವಿಟ್ಟು ತಪ್ಪಿಸಿಕೊಳ್ಳಬೇಡಿ" ಎಂದು ಹೇಳಿದರು. ಈ ಚೊಚ್ಚಲ ಚಿತ್ರಕ್ಕೆ ಆರಿಫ್​ ಖಾನ್​ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಶೋಭಾ ಕಪೂರ್ ಮತ್ತು ಏಕ್ತಾ ಕಪೂರ್ ಅವರ ಬಾಲಾಜಿ ಟೆಲಿಫಿಲ್ಮ್ಸ್ಅಡಿ ಹೊಸ ವಿಭಾಗವಾದ ಕಲ್ಟ್ ಮೂವೀಸ್ ನಿರ್ಮಾಣ ಮಾಡಿದೆ. ಚಿತ್ರದಲ್ಲಿ ರಾಜೇಶ್ ಶರ್ಮಾ, ಆಶಿಮ್ ಗುಲಾಟಿ, ಶ್ರೀಧರ್ ದುಬೆ, ಸಾಹಿಲ್ ತಾಖಿ, ಮತ್ತು ಅಪೂರ್ವ ಸುಮನ್ ಮುಂತಾದವರು ಇದ್ದಾರೆ. ಸಿನಿಮಾ ಇದೇ ಬರುವ ಏಪ್ರಿಲ್ 28 ರಂದು ಝೀ 5 ನಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: 'ಭೂಲ್​ ಚುಕ್​ ಮಾಫ್': ಮೊದಲ ಬಾರಿಗೆ ಜೋಡಿಯಾದ ಕಾರ್ತಿಕ್​ ಆರ್ಯನ್​, ಶ್ರದ್ಧಾ ಕಪೂರ್​ ​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.