'ಅನಿಮಲ್' ಚಿತ್ರದ ಬಗ್ಗೆ ವಿಶೇಷ ವಿವರಣೆ ಸದ್ಯಕ್ಕೆ ಅಗತ್ಯವಿಲ್ಲ. ವಿಭಿನ್ನ ಕಥಾ ಹಂದರವಾಗಿ ಹೊರಹೊಮ್ಮಿದ ಚಿತ್ರ ದಾಖಲೆ ನಿರ್ಮಿಸಿದ್ದು ಇದೀಗ ಹಳೆಯ ಮಾತು. ಸದ್ಯ ಸಿನಿಮಾದ ಇಂಚಿಂಚು ಮಾಹಿತಿ ಟ್ರೆಂಡಿಂಗ್ ಆಗುತ್ತಿದ್ದು ಇದೀಗ ನಟಿ ತೃಪ್ತಿ ಡಿಮ್ರಿ ಕೂಡ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಅನಿಮಲ್ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ಕಾಣಿಸಿಕೊಂಡಿರುವ ತೃಪ್ತಿ, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾರೆ. ಚಿತ್ರದಲ್ಲಿ ಹೀಗೆ ಬಂದು ಹಾಗೇ ಹೋಗುವ ಕ್ಷಣ ಮಾತ್ರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಕೂಡಾ ನಟಿಯ ಪಾಪ್ಯುಲಾರಿಟಿ ದಿನೇ ದಿನೇ ಹೆಚ್ಚಾಗುತ್ತಿದೆ. ಗೂಗಲ್ನಲ್ಲಿ ನಟಿಯ ಹಿನ್ನೆಲೆ ಬಗ್ಗೆ ಇನ್ನಿಲ್ಲದ ಮಾಹಿತಿ ಕಲೆ ಹಾಕಲಾಗುತ್ತಿದೆ.
ಬಾಲಿವುಡ್ನ ಒಬ್ಬ ಕೌತುಕದ ಸುಂದರ ಗೊಂಬೆಯಾಗಿರುವ ತೃಪ್ತಿ ಡಿಮ್ರಿ ಯಾವೆಲ್ಲ ಚಿತ್ರಗಳಲ್ಲಿ ನಟಿಸಿದ್ದಾರೆ? ಇವರ ಮೊದಲ ಚಿತ್ರ ಯಾವುದು? ಯಾರು ಈಕೆ? ಎಲ್ಲಿಯವರು ಎಂದೆಲ್ಲಾ ಹುಡುಕಾಡಲು ಆರಂಭಿಸಿದ್ದಾರೆ. 'ಅನಿಮಲ್' ಚಿತ್ರದ ಬಿಡುಗಡೆಗೂ ಮುನ್ನ ಸಾಧಾರಣ ಸ್ಥಿತಿಯಲ್ಲಿದ್ದ ನಟಿಯ ಸೋಷಿಯಲ್ ಮೀಡಿಯಾ ಖಾತೆ ಇದೀಗ ಭರ್ತಿಯಾಗುತ್ತಿದೆ. ಪ್ರತಿಯೊಬ್ಬ ಜಾಲತಾಣ ಬಳಕೆದಾರನ ಕಣ್ಣು ತೃಪ್ತಿ ಮೇಲೆ ಬೀಳುತ್ತಿರುವುದರಿಂದ ನಟಿಯ ಹೆಸರು ಕೂಡ ಟ್ರೆಂಡಿಂಗ್ ಪಟ್ಟಿಗೆ ಸೇರಿಕೊಂಡಿದೆ. ಹೆಸರಾಂತ IMDb (Internet Movie Database) ಇತ್ತೀಚಿನ ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳ ಪಟ್ಟಿಯನ್ನು ಅನಾವರಣ ಮಾಡಿದ್ದು ಅಲ್ಲಿ ಡಿಮ್ರಿ ಅಗ್ರ ಸ್ಥಾನ ಪಡೆದಿದ್ದಾರೆ.
- " class="align-text-top noRightClick twitterSection" data="">
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ನ್ಯಾಷನಲ್ ಕ್ರಶ್ ಪಟ್ಟ ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಇಂದಿನ ಪಟ್ಟಿಯಲ್ಲಿ ತೃಪ್ತಿ ಡಿಮ್ರಿ ಮೊದಲ ಸ್ಥಾನ ಪಡೆದುಕೊಂಡರೆ, ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಎರಡನೇ ಸ್ಥಾನದಲ್ಲಿದ್ದಾರೆ. ಸುಹಾನಾ ಖಾನ್ 7ನೇ ಸ್ಥಾನದಲ್ಲಿದ್ದರೆ, ಅವರ ದಿ ಆರ್ಚೀಸ್ ಸಹ ನಟಿ ಖುಷಿ ಕಪೂರ್ 8ನೇ ಸ್ಥಾನದಲ್ಲಿದ್ದಾರೆ. ಕೆಜಿಎಫ್ ಸ್ಟಾರ್ ಯಶ್ 39ನೇ ಸ್ಥಾನದಲ್ಲಿದ್ದಾರೆ. 'ಅನಿಮಲ್' ಚಿತ್ರ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಹಣ ಗಳಿಕೆಯಲ್ಲಿ ದಾಖಲೆ ಮಾಡಿದೆ. ಚಿತ್ರದಲ್ಲಿ ರಣಬೀರ್, ಬಾಬಿ ಡಿಯೋಲ್, ಅನಿಲ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರೆ, ಕೆಲವೇ ಕೆಲವು ದೃಶ್ಯಗಳಲ್ಲಿ ಬರುವ ತೃಪ್ತಿ, ಎಲ್ಲರ ಹುಬ್ಬೇರುವಂತೆ ಮಾಡಿದ್ದು ಸುಳ್ಳಲ್ಲ.
2017ರಲ್ಲಿ ತೆರೆಕಂಡ ಶ್ರೇಯಸ್ ತಲ್ಪಾಡೆ ಅವರ ಕಾಮಿಡಿ ಚಿತ್ರ 'ಪೋಸ್ಟರ್ ಬಾಯ್ಸ್'ನಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ ಡಿಮ್ರಿ, ಬಳಿಕ ಹಲವು ಚಿತ್ರಗಳಲ್ಲಿ ಬಣ್ಣ ಹಚ್ಚಿದರು. ಸಾಜಿದ್ ಅಲಿ ನಿರ್ದೇಶನದ 2018ರಲ್ಲಿ ತೆರೆಕಂಡ ರೊಮ್ಯಾಂಟಿಕ್ ಚಿತ್ರ ಲೈಲಾ ಮಜ್ನು ಇವರು ನಟಿಸಿದ್ದ ಕೊನೆಯ ಚಿತ್ರವಾಗಿತ್ತು. ಐದು ವರ್ಷಗಳ ಬಳಿಕ ಅನಿಮಲ್ ಚಿತ್ರದ ಮೂಲಕ ದೊಡ್ಡ ಪರದೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ನಡುವೆ ಕೆಲವು ಒಟಿಟಿ ಚಿತ್ರಗಳಲ್ಲಿ ನಟಿಸಿದ್ದು ಉಂಟು. ಆನಂದ್ ತಿವಾರಿ ನಿರ್ದೇಶನದ ಮತ್ತು ವಿಕ್ಕಿ ಕೌಶಲ್ ನಟನೆಯ ಮೇರೆ ಮೆಹಬೂಬ್ ಮೇರೆ ಸನಮ್ ಇವರ ಮುಂದಿನ ಚಿತ್ರವಾಗಿದ್ದು ಫೆಬ್ರವರಿ 23, 2024 ರಂದು ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಟಾಪ್ 10 ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಶಾರುಖ್ ಖಾನ್ ನಂಬರ್ ಒನ್!