ETV Bharat / entertainment

SPY: ನೇತಾಜಿ ಕಥಾಧಾರಿತ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ; ಮೊದಲ ದಿನದ ಕಲೆಕ್ಷನ್ ₹___​! - ಈಟಿವಿ ಭಾರತ ಕನ್ನಡ

ಟಾಲಿವುಡ್​ ನಟ ನಿಖಿಲ್​ ಸಿದ್ದಾರ್ಥ್ ಮುಖ್ಯಭೂಮಿಕೆಯಲ್ಲಿರುವ 'ಸ್ಪೈ' ಸಿನಿಮಾ ಬಿಡುಗಡೆಯಾದ ಮೊದಲ ದಿನ ಗಳಿಕೆಯ ವಿವರ ಇಲ್ಲಿದೆ.

spy
ಸ್ಪೈ
author img

By

Published : Jun 30, 2023, 10:16 PM IST

ಟಾಲಿವುಡ್​ ಚಿತ್ರರಂಗದ ಯಂಗ್​ ಹೀರೋ ನಿಖಿಲ್​ ಸಿದ್ದಾರ್ಥ್​ ನಟನೆಯ 'ಸ್ಪೈ' ನಿನ್ನೆಯಷ್ಟೇ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಸಾವಿನ ರಹಸ್ಯ ಕಥಾಹಂದರ ಹೊಂದಿರುವ ಈ ಚಿತ್ರ ಮೊದಲ ದಿನ ತಕ್ಕಮಟ್ಟಿಗೆ ಕಲೆಕ್ಷನ್​ ಮಾಡಿದೆ. ವಿಶ್ವದಾದ್ಯಂತ 11.7 ಕೋಟಿ ರೂಪಾಯಿ ಗಳಿಸಿದೆ.

ಇದು ಹೇಳಿಕೊಳ್ಳುವಷ್ಟು ಹಿಟ್​ ಕಲೆಕ್ಷನ್​ ಅಲ್ಲದೇ ಹೋದರೂ, ನಿಖಿಲ್ ವೃತ್ತಿ ಜೀವನದಲ್ಲಿ, ಮೊದಲ ದಿನವೇ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾ ಇದಾಗಿದೆ. ಏಕಾದಶಿ ಮತ್ತು ಬಕ್ರೀದ್​ ಹಬ್ಬದಂದೇ ಸಿನಿಮಾ ಬಿಡುಗಡೆಯಾದ್ದರಿಂದ ಉತ್ತಮ ಓಪನಿಂಗ್​ ಪಡೆದುಕೊಂಡಿದೆ. ಆದರೆ ಚಿತ್ರದ ಬಗ್ಗೆ ನೆಗೆಟಿವ್​ ಟಾಕ್​ ಕೂಡ ಕೇಳಿಬರುತ್ತಿದೆ. 2022ರಲ್ಲಿ ತೆರೆಕಂಡ 'ಕಾರ್ತಿಕೇಯ 2' ಬಳಿಕ ನಿಖಿಲ್ ಸಿದ್ದಾರ್ಥ್ ನಟಿಸುತ್ತಿರುವ ಆ್ಯಕ್ಷನ್ ಪ್ಯಾಕ್ಡ್ ಕಥಾಹಂದರವುಳ್ಳ ಚಿತ್ರವಿದು.

ಟ್ವಿಟರ್​ ವಿಮರ್ಶೆ: ಸ್ಪೈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾದ ಸ್ಟೋರಿ ಲೈನ್ ಚೆನ್ನಾಗಿದೆ ಎನ್ನುತ್ತಿದ್ದಾರೆ ಪ್ರೇಕ್ಷಕರು. ಇಲ್ಲಿಯವರೆಗೆ ತೆರೆ ಕಾಣದ ವಿಭಿನ್ನ ವಿಷಯವನ್ನು ನಿರ್ದೇಶಕರು ಚಿತ್ರೀಕರಿಸಿರುವ ರೀತಿ ಚೆನ್ನಾಗಿದೆ ಎಂಬ ಪ್ರಶಂಸೆ ವ್ಯಕ್ತವಾಗುತ್ತಿದೆ. ನೇತಾಜಿ ಅವರ ಸುತ್ತ ನಡೆಯುವ ಕಥೆ ಕುತೂಹಲಕರವಾಗಿದ್ದು, ಕಾಲಕಾಲಕ್ಕೆ ಪ್ರೇಕ್ಷಕರಲ್ಲಿ ಸಸ್ಪೆನ್ಸ್ ಹೆಚ್ಚಿಸುತ್ತಿದೆ. ಆದರೆ ಅವರಿಗೆ ತಕ್ಕಂತೆ ಸಾಹಸ ದೃಶ್ಯಗಳ ಗುಣಮಟ್ಟ ಹೆಚ್ಚಿಸಿದ್ದರೆ ಚೆನ್ನಾಗಿತ್ತು ಎಂಬುದು ಕೆಲವರ ಅಭಿಪ್ರಾಯ.

ರಾ ಏಜೆಂಟ್ ಆಗಿ ನಿಖಿಲ್ ಅವರ ಆ್ಯಕ್ಷನ್ ಅದ್ಭುತವಾಗಿದೆ. ಜೊತೆಗೆ ಸಾಹಸ ದೃಶ್ಯಗಳೂ ಚೆನ್ನಾಗಿವೆ. ಸಿನಿಮಾಟೋಗ್ರಫಿ ಹಾಗೂ ನಿರ್ದೇಶನದ ಬಗ್ಗೆಯೂ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಚಿತ್ರದಲ್ಲಿ ನಿಖಿಲ್ ಪಾತ್ರದ ಪ್ರಾಮುಖ್ಯತೆಯಿಂದಾಗಿ ಉಳಿದ ನಟರಿಗೆ ಹೆಚ್ಚಿನ ಸ್ಕೋಪ್ ಇಲ್ಲ ಎನ್ನಲಾಗಿದೆ. ಇನ್ನೊಂದೆಡೆ ಸಂಗೀತವೂ ಈ ಸಿನಿಮಾಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಅದರಲ್ಲೂ ಹಿನ್ನೆಲೆ ಸಂಗೀತ ಸಿನಿಮಾದ ಹೈಲೈಟ್ ಅಂತಲೇ ಹೇಳಬಹುದು.

SPY ಚಿತ್ರತಂಡ: ಸಿನಿಮಾವನ್ನು ಗ್ಯಾರಿ ಬಿ.ಹೆಚ್​​ ನಿರ್ದೇಶನ ಮಾಡಿದ್ದಾರೆ. ಹಲವು ಹಲವು ಹಿಟ್ ಸಿನಿಮಾಗಳ ನಿರ್ಮಾಪಕ ಕೆ. ರಾಜಶೇಖರ್ ರೆಡ್ಡಿ ಅವರು ಇಡೀ ಎಂಟರ್‌ಟೈನ್‌ಮೆಂಟ್‌ನಡಿ ಚರಣ್ ರಾಜ್ ಉಪ್ಪಲಪತಿ ಜೊತೆಗೂಡಿ ನಿರ್ಮಾಣ ಮಾಡಿದ್ದಾರೆ. ನಾಯಕನಾಗಿ ನಿಖಿಲ್​ ಸಿದ್ದಾರ್ಥ್​, ನಾಯಕಿಯಾಗಿ ಐಶ್ವರ್ಯ ಮೆನನ್ ಮತ್ತು ಸನ್ಯಾ ಠಾಕೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಾಹುಬಲಿ ಬಲ್ಲಾಳದೇವ ಪಾತ್ರಧಾರಿ ರಾಣಾ ದಗ್ಗುಬಾಟಿ ಕೂಡ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Darling Krishna: 'ಕೌಸಲ್ಯಾ ಸುಪ್ರಜಾ ರಾಮ' ಬಿಡುಗಡೆಗೆ ಮುಹೂರ್ತ ಫಿಕ್ಸ್; ಹೈಪ್​, ಬಿಲ್ಡಪ್​ ಬೇಡ ಅಂತಿದ್ದಾರೆ ನಿರ್ದೇಶಕರು!

ಸಿನಿಮಾಗೆ ರಾಜಶೇಖರ್ ರೆಡ್ಡಿ ಅವರೇ ಕಥೆ ಕೂಡ ಬರೆದಿದ್ದಾರೆ. ಬಿ. ಹೆಚ್. ನಿರ್ದೇಶನದ ಜೊತೆಗೆ ಸಂಕಲನದ ಹೊಣೆ ಹೊತ್ತಿದ್ದಾರೆ. ಆ್ಯಕ್ಷನ್ ಪ್ಯಾಕ್ಡ್ ಸ್ಪೈ ಥ್ರಿಲ್ಲರ್ ಸಿನಿಮಾದಲ್ಲಿ‌ ನಿಖಿಲ್‌ ಅಲ್ಲದೇ ಅಭಿನವ್ ಗೋಮತಮ್, ಮಕರಂದ್ ದೇಶಪಾಂಡೆ, ನಿತಿನ್ ಮೆಹ್ತಾ, ರವಿವರ್ಮ, ಕೃಷ್ಣ ತೇಜ, ಪ್ರಿಶಾ ಸಿಂಗ್, ಸೋನಿಯಾ ನರೇಶ್ ಸೇರಿದಂತೆ ಹಲವರಿದ್ದಾರೆ. ಜೂನಿಯನ್ ಅಮರು ಸೂರಿಸೆಟ್ಟಿ ಛಾಯಾಗ್ರಹಣ, ಶ್ರೀಚರಣ್ ಪಕಳ ಸಂಗೀತ, ಅರ್ಜುನ್ ಸೂರಿಸೆಟ್ಟಿ ಕಲಾ ನಿರ್ದೇಶನವಿದೆ.

ಇದನ್ನೂ ಓದಿ: Satyaprem Ki Katha: ಮೊದಲ ದಿನವೇ 9 ಕೋಟಿ ರೂ ಕಲೆಕ್ಷನ್​ ಮಾಡಿದ ಕಾರ್ತಿಕ್ ಕಿಯಾರಾ ಪ್ರೇಮಕಥೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.