ಹೈದರಾಬಾದ್(ತೆಲಂಗಾಣ): ನಟಸಿಂಹಂ ನಂದಮೂರಿ ಬಾಲಕೃಷ್ಣ ಧೈರ್ಯದ ಕಥೆ ಗೊತ್ತಿರುವಂಥದ್ದೇ. ಪರದೆಯ ಎದುರು ಅಥವಾ ಪರದೆಯ ಹಿಂದಿನ ಯಾವುದೇ ಸಾಹಸಕ್ಕೂ ಬಾಲಕೃಷ್ಣ ಯಾವಾಗಲೂ ಸದಾ ಸಿದ್ಧವಿರುವ ವ್ಯಕ್ತಿ. ಈಗ ಅದೇ ಧೈರ್ಯವನ್ನು ಅವರ ಹಿರಿಮಗಳು ಕೂಡಾ ತೋರಿಸಿದ್ದಾರೆ.
ಹೆರಿಟೇಜ್ ಫುಡ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ನಾರಾ ಬ್ರಾಹ್ಮಣಿ ಅವರು ಇತ್ತೀಚೆಗಷ್ಟೇ ಲಡಾಖ್ಗೆ ಬೈಕ್ ಟ್ರಿಪ್ ಹೋಗಿದ್ದರು. ಈ ಟ್ರಿಪ್ನ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಅವರು ಪರ್ವತದ ಇಳಿಜಾರಿನಲ್ಲಿ ಮೋಟಾರ್ ಸೈಕಲ್ ಸವಾರಿ ಮಾಡುತ್ತಿರುವುದನ್ನು ನೀವು ನೋಡಬಹುದು. ಈ ದೃಶ್ಯಗಳಿಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಯುವ ಉದ್ಯಮಿ ಮತ್ತು ವಿವಿಧ ಸಂಸ್ಥೆಗಳ ಸಿಇಒಗಳನ್ನು ಸದಸ್ಯರನ್ನಾಗಿ ಹೊಂದಿರುವ ಯಂಗ್ ಪ್ರೆಸಿಡೆಂಟ್ಸ್ ಆರ್ಗನೈಸೇಶನ್ (ವೈಪಿಒ) ಇತ್ತೀಚೆಗೆ ಆಯೋಜಿಸಿದ್ದ ‘ದಿ ಲಡಾಖ್ ಕ್ವೆಸ್ಟ್’ ಹೆಸರಿನ ಸಾಹಸದಲ್ಲಿ ಬ್ರಾಹ್ಮಣಿ ಭಾಗವಹಿಸಿದ್ದರು. ಬ್ರಾಹ್ಮಣಿ ಹಳದಿ ಬಣ್ಣದ ಬೈಕ್ ಓಡಿಸಿದ್ದಾರೆ. ಈ ಪ್ರವಾಸದಲ್ಲಿ 'Java Yedgy Motorcycles' ಎಂಬ ಕಿರುಚಿತ್ರ ನಿರ್ಮಿಸಲಾಗಿದೆ. ಪ್ರವಾಸದಲ್ಲಿದ್ದ ಎಲ್ಲರೂ ತಮ್ಮ ಅದ್ಭುತ ಅನುಭವಗಳನ್ನು ಹೇಳಿಕೊಂಡಿದ್ದಾರೆ.
- " class="align-text-top noRightClick twitterSection" data="">
'ಈಗ ಸಮಯ ಬೆಳಗ್ಗೆ 6.30 ಆಗಿದೆ. ಲಡಾಖ್ ತುಂಬಾ ಅದ್ಭುತ ಮತ್ತು ಸುಂದರವಾಗಿದೆ. ನಾವು ಥಕ್ಸೆದಿಂದ ಆರಾಮ್‌ಗೆ ಹೊರಡುತ್ತಿದ್ದೇವೆ. ನಾವು ನಿಜವಾದ ಆಧ್ಯಾತ್ಮಿಕ ಅನುಭವಕ್ಕಾಗಿ ಎದುರು ನೋಡುತ್ತಿದ್ದೇವೆ. ನಾವಿಲ್ಲಿ ಧ್ಯಾನ ಮಾಡುತ್ತೇವೆ' ಎಂದು ಬ್ರಾಹ್ಮಣಿ ವಿಡಿಯೋದಲ್ಲಿ ತಮ್ಮ ಅನುಭವದ ಮಾತುಗಳನ್ನಾಡಿದ್ದಾರೆ.
ಈ ವಿಡಿಯೋ ನೋಡಿದ ನೆಟ್ಟಿಗರು ಹಾಗೂ ನಂದಮೂರಿ ಅಭಿಮಾನಿಗಳು ಬ್ರಾಹ್ಮಣಿ ಅವರ ಡೇರಿಂಗ್ ಅನ್ನು ಕೊಂಡಾಡಿದ್ದಾರೆ. 'ಬ್ರಾಹ್ಮಣಿ ಗ್ರೇಟ್, ನಮ್ಮ ಬಾಲಯ್ಯ ಬಾಬು ಮಗಳು ಸೂಪರ್..' ಎಂದೆಲ್ಲ ಹೇಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಹಿರಿಯ ಒಡಿಯಾ ನಟಿ ಜರಾನಾ ದಾಸ್ ನಿಧನ