ETV Bharat / entertainment

'ಸಪ್ತ ಸಾಗರದಾಚೆ ಎಲ್ಲೋ‌' ಟೈಟಲ್ ಟ್ರ್ಯಾಕ್ ಬಿಡುಗಡೆ - etv bharat karnataka

ರಕ್ಷಿತ್ ಶೆಟ್ಟಿ ನಾಯಕರಾಗಿ ನಟಿಸಿರುವ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ.

Etv Bharat
Etv Bharat
author img

By

Published : Aug 8, 2023, 10:43 PM IST

ರಕ್ಷಿತ್ ಶೆಟ್ಟಿ ನಾಯಕರಾಗಿ ನಟಿಸಿ, ನಿರ್ಮಾಣ ಮಾಡಿರುವ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದೆ. ಚರಣ್ ರಾಜ್ ಸಂಗೀತ ಸಂಯೋಜಿಸಿರುವ ಹಾಗೂ ಧನಂಜಯ್ ರಂಜನ್ ಬರೆದಿರುವ ಶೀರ್ಷಿಕೆ ಗೀತೆಯನ್ನು ಕಪಿಲ್ ಕಪಿಲನ್ ಸೊಗಸಾಗಿ ಹಾಡಿದ್ದಾರೆ. ಹಾಡು ಬಿಡುಗಡೆಯಾದ ಕ್ಷಣದಿಂದಲೇ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಚಿತ್ರ ಬಿಡುಗಡೆಗೆ ರಕ್ಷಿತ್ ಶೆಟ್ಟಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಹೇಮಂತ್ ಎಂ.ರಾವ್ ನಿರ್ದೇಶಿಸಿದ್ದಾರೆ. ರುಕ್ಮಿಣಿ ವಸಂತ್, ಚೈತ್ರ ಜೆ.ಆಚಾರ್, ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯುತ ಕುಮಾರ್​​, ಪವಿತ್ರ ಲೋಕೇಶ್, ರಮೇಶ್ ಇಂದಿರಾ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ತಾರಾಗಣದಲ್ಲಿದ್ದಾರೆ. ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಹಾಗೂ ಸುನೀಲ್ ಭಾರದ್ವಾಜ್ ಸಂಕಲನ ಚಿತ್ರಕ್ಕಿದೆ. ಚಿತ್ರದ ಭಾಗ 1 ಸೆಪ್ಟೆಂಬರ್ 1ರಂದು ಬಿಡುಗಡೆಯಾಗಲಿದ್ದು, ಭಾಗ 2 ಅಕ್ಟೋಬರ್ 20ಕ್ಕೆ ತೆರೆ ಕಾಣಲಿದೆ.

ಇದನ್ನೂ ಓದಿ: ಹಾಸ್ಟೆಲ್ ಹುಡುಗರಿಂದ ಪ್ರೇಕ್ಷಕರಿಗೆ ಬಿಗ್​ ಆಫರ್​.. ಬುಕ್​ ಮೈ ಶೋನಲ್ಲಿ 2 ಟಿಕೆಟ್​ ತಗೊಂಡ್ರೆ 1 ಫ್ರೀ

ರೋಮ್ಯಾಂಟಿಕ್ ಮೂಡ್​ನಲ್ಲಿ ಧನ್ಯಾ ರಾಮ್ ಕುಮಾರ್- ದಿಗಂತ್​: ಮತ್ತೊಂದೆಡೆ, ಕ್ರೇಜಿಸ್ಟಾರ್ ರವಿಚಂದ್ರನ್ ಹಾಗು ದೂದ್ ಪೇಡಾ ದಿಗಂತ್ ಮೊದಲ ಬಾರಿ ತೆರೆ ಹಂಚಿಕೊಳ್ಳುತ್ತಿರುವ ಸಿನಿಮಾ 'ದ ಜಡ್ಜ್​​ಮೆಂಟ್'. ಗುರುರಾಜ ಕುಲಕರ್ಣಿ ಆ್ಯಕ್ಷನ್​ ಕಟ್ ಹೇಳುತ್ತಿರುವ ದ ಜಡ್ಜ್​​ಮೆಂಟ್ ಚಿತ್ರದ ಶೂಟಿಂಗ್​​ ಬೆಂಗಳೂರಿನಲ್ಲಿ ಭರದಿಂದ ಸಾಗಿದೆ. ಪ್ರಸ್ತುತ ಬೆಂಗಳೂರಿನ ಡೆಕ್ ಆಫ್ ಬ್ರೆವ್ಯುಸ್ ಪಬ್​ನಲ್ಲಿ ದಿಗಂತ್ ಹಾಗೂ ಧನ್ಯಾ ರಾಮ್ ಕುಮಾರ್ ಜೋಡಿಯ ರೋಮ್ಯಾಂಟಿಕ್ ಹಾಡನ್ನು ನಿರ್ದೇಶಕ ಗುರುರಾಜ್ ಚಿತ್ರೀಕರಿಸಿದ್ದಾರೆ. ಹಾಡಿನಲ್ಲಿ ದಿಗಂತ್-ಧನ್ಯಾ ಬೊಂಬಾಟ್ ಸ್ಟೆಪ್ ಹಾಕಿದ್ದಾರೆ.

ಇವರ ಜೊತೆಗೆ ಕಲಾವಿದರಾದ ಅಶ್ವಿನ್, ಸುಶೀಲ್ ನಾಗ್ ಮತ್ತು ಸುವೀಷ್ ಸಾಥ್ ನೀಡಿದ್ದಾರೆ. ಹಾಡಿಗಾಗಿ ಸುಮಾರು 75 ನೃತ್ಯ ಕಲಾವಿದರು ಮತ್ತು 50 ಸಹ ಕಲಾವಿದರನ್ನು ಬಳಸಿಕೊಳ್ಳಲಾಗಿದೆ. ಹಾಡು ಸಂಯೋಜಿಸಿದ ಅನೂಪ್ ಸೀಳಿನ್ ಮತ್ತು ಸಾಹಿತ್ಯ ರಚಿಸಿರುವ ಪ್ರಮೋದ್ ಮರವಂತೆ ಸಹ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ನಮ್ಮ ಹಾಡು ಈ ವರ್ಷದಲ್ಲಿ ಸೂಪರ್ ಹಿಟ್ ಆಗೋದು ಪಕ್ಕಾ ಅಂತಾರೆ ಚಿತ್ರತಂಡದವರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.