ETV Bharat / entertainment

ಈ ಭೂಮಿ ಮೇಲಿರುವ ಅತ್ಯಂತ ಕ್ರೂರವಾದ ಸ್ಥಳವದು.. ಟೈಟಾನಿಕ್​ ಮುಳುಗಿದ್ದ ಸ್ಥಳಕ್ಕೆ 33 ಬಾರಿ ಭೇಟಿ ನೀಡಿದ್ದ ಜೇಮ್ಸ್ ಕ್ಯಾಮರೂನ್ - ರಿಮೋಟ್ ಕಂಟ್ರೋಲ್ ವಾಹನ

ಟೈಟಾನಿಕ್ ಖ್ಯಾತಿಯ ಜೇಮ್ಸ್ ಕ್ಯಾಮರೂನ್ ಟೈಟಾನಿಕ್ ಅವಶೇಷಗಳು ಇರುವ ಸ್ಥಳಕ್ಕೆ 30 ಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದು, ಪರಿಶೋಧಕರಿಗೆ ಅಪಾಯಗಳ ಬಗ್ಗೆ ಎಚ್ಚರಿಕೆ ಸಹ ನೀಡಿದ್ದರು.

titanic james cameron  cameron made more than 30 dives  more than 30 dives to the titanic wreckage  ಭೂಮಿ ಮೇಲಿರುವ ಅತ್ಯಂತ ಕ್ರೂರವಾದ ಸ್ಥಳ ಅದು  ಟೈಟಾನಿಕ್​ ಮುಳುಗಿದ್ದ ಸ್ಥಳಕ್ಕೆ 33 ಬಾರಿ ಭೇಟಿ  33 ಬಾರಿ ಭೇಟಿ ನೀಡಿದ್ದ ಜೇಮ್ಸ್ ಕ್ಯಾಮರೂನ್  ಟೈಟಾನಿಕ್ ಖ್ಯಾತಿಯ ಜೇಮ್ಸ್ ಕ್ಯಾಮರೂನ್  ಟೈಟಾನಿಕ್ ಅವಶೇಷಗಳ ಇರುವ ಸ್ಥಳ  ಟೈಟಾನಿಕ್ ಎವರ್ ಗ್ರೀನ್ ಚಿತ್ರ  ರಿಮೋಟ್ ಕಂಟ್ರೋಲ್ ವಾಹನ  ಭೂಮಿಯ ಮೇಲಿನ ಅತ್ಯಂತ ಕ್ರೂರವಾದ ಸ್ಥಳ
ಭೂಮಿ ಮೇಲಿರುವ ಅತ್ಯಂತ ಕ್ರೂರವಾದ ಸ್ಥಳ ಅದು
author img

By

Published : Jun 23, 2023, 12:27 PM IST

ಜೇಮ್ಸ್ ಕ್ಯಾಮರೂನ್ ಅವರು 'ಅವತಾರ್', 'ಅವತಾರ್ 2' ಸೇರಿದಂತೆ ಹಲವು ಬೃಹತ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರ ಸಿನಿಮಾಗಳಲ್ಲಿ ಟೈಟಾನಿಕ್ ಎವರ್ ಗ್ರೀನ್ ಚಿತ್ರ. ಜಗತ್ತಿನ ಅತ್ಯಂತ ಐಷಾರಾಮಿ ಹಡಗು ಹೇಗೆ ಅಪಘಾತಕ್ಕೀಡಾಗಿ ಸಮುದ್ರದಲ್ಲಿ ಮುಳುಗಿತು ಎಂಬುದನ್ನು ಭಾವನಾತ್ಮಕವಾಗಿ ತೋರಿಸಿದ್ದಾರೆ. ಇವರು ಟೈಟಾನಿಕ್ ಹಡಗು ದುರಂತದ ಸ್ಥಳಕ್ಕೆ ಇದುವರೆಗೆ 33 ಬಾರಿ ಭೇಟಿ ನೀಡಿದ್ದಾರೆ. 13 ಸಾವಿರ ಅಡಿ ಆಳದಲ್ಲಿ ಉಳಿದುಕೊಂಡಿರುವ ಇತಿಹಾಸದ ಜೀವಂತ ಸಾಕ್ಷಿಯನ್ನು ಸಾಕ್ಷ್ಯಚಿತ್ರದ ರೂಪದಲ್ಲಿ ತಂದಿದ್ದಾರೆ.

ಸಮುದ್ರದಲ್ಲಿ ನಾಪತ್ತೆಯಾದ ಟೈಟಾನ್ ಜಲಾಂತರ್ಗಾಮಿ ಕಥೆ ದುರಂತದಲ್ಲಿ ಕೊನೆಗೊಂಡಿದೆ. ತೀವ್ರ ಒತ್ತಡದ ಹೆಚ್ಚಳದಿಂದಾಗಿ ಕಿರು ಜಲಾಂತರ್ಗಾಮಿ 'ಟೈಟಾನ್' ಸ್ಫೋಟಗೊಂಡ ಹಿನ್ನೆಲೆ ಐವರು ಸಾವನ್ನಪ್ಪಿದ್ದಾರೆ ಎಂದು ಯುಎಸ್ ಕೋಸ್ಟ್ ಗಾರ್ಡ್ ಘೋಷಿಸಿದೆ. ರಿಮೋಟ್ ಕಂಟ್ರೋಲ್ ವಾಹನದ ಸಹಾಯದಿಂದ ಮಿನಿ ಜಲಾಂತರ್ಗಾಮಿ ನೌಕೆಯ ಅವಶೇಷಗಳನ್ನು ಗುರುತಿಸಲಾಗಿದೆ. ಜೇಮ್ಸ್ ಕ್ಯಾಮರೂನ್ ಈ ಹಿಂದೆ ಟೈಟಾನಿಕ್ ಮುಳುಗಿದ ಪ್ರದೇಶಕ್ಕೆ ಹಲವಾರು ಭೇಟಿಗಳ ಸಂದರ್ಭದಲ್ಲಿ ತಾವು ಅನುಭವಿಸಿದ್ದ ತೊಂದರೆಗಳ ಬಗ್ಗೆ ಹೇಳಿಕೊಂಡಿದ್ದಾರೆ.

"ಇದು ಭೂಮಿಯ ಮೇಲಿನ ಅತ್ಯಂತ ಕ್ರೂರವಾದ ಸ್ಥಳಗಳಲ್ಲಿ ಒಂದಾಗಿದೆ" ಎಂದು ಜೇಮ್ಸ್ ಕ್ಯಾಮರೂನ್ ಟೈಟಾನಿಕ್ ಮುಳುಗಿದ ಸ್ಥಳವನ್ನು ಒಂದೇ ತುಣುಕಿನಲ್ಲಿ ವಿವರಿಸಿದರು. ಜನ ಎಂದೂ ನೋಡದ ಸ್ಥಳಗಳನ್ನು ನೋಡುವ ಆಸಕ್ತಿ ಇದ್ದು, ಅದಕ್ಕಾಗಿಯೇ ಆ ಪ್ರದೇಶಕ್ಕೆ ಹೋಗಿದ್ದೇನೆ ಎಂದರು. ಇದಲ್ಲದೇ, 'ಎಕ್ಸ್‌ಪೆಡಿಶನ್: ಬಿಸ್ಮಾರ್ಕ್' ಮತ್ತು 'ಘೋಸ್ಟ್ಸ್ ಆಫ್ ದಿ ಅಬಿಸ್ ಮತ್ತು ಏಲಿಯನ್ಸ್ ಆಫ್ ದಿ ಡೀಪ್' ಸಾಕ್ಷ್ಯಚಿತ್ರಗಳನ್ನು ಸಮುದ್ರತಳದ ವಿಷಯದ ಮೇಲೆ ಚಿತ್ರೀಕರಿಸಲಾಗಿದೆ.

ವಿಶ್ವಾದ್ಯಂತ ಪ್ರಶಂಸೆ ಗಳಿಸಿದ ‘ಟೈಟಾನಿಕ್’ ಸಿನಿಮಾ ನಿರ್ಮಾಣದ ಹಿಂದಿನ ಕುತೂಹಲಕಾರಿ ಸತ್ಯವನ್ನೂ ಜೇಮ್ಸ್ ಕ್ಯಾಮರೂನ್ ಬಹಿರಂಗಪಡಿಸಿದ್ದಾರೆ. ಹಡಗು ಮುಳುಗಿದ ಪ್ರದೇಶವನ್ನು ನೋಡುವ ಆಸೆಯಿಂದ ಟೈಟಾನಿಕ್ ಚಿತ್ರವನ್ನು ನಿರ್ಮಿಸಿದೆ. ಹೀಗಾಗಿ ಈ ಚಿತ್ರ ನಿರ್ದೇಶಿಸಿದೆ ಹೊರತು ಇದನ್ನು ಸಿನಿಮಾ ಮಾಡುವ ಉದ್ದೇಶ ನನಗಿರಲಿಲ್ಲ ಎಂದರು. ಟೈಟಾನಿಕ ಸಿನಿಮಾ ಹಿನ್ನೆಲೆ ನಾನು ಜಲಾಂತರ್ಗಾಮಿ ನೌಕೆಯಲ್ಲಿ ಸಮುದ್ರದ ತಳದಲ್ಲಿ ಪ್ರಯಾಣಿಸಿದೆ. ಟೈಟಾನಿಕ್ ವಿಶ್ವದ ಅತಿದೊಡ್ಡ ಹಡಗು ದುರಂತಗಳಲ್ಲಿ ಒಂದಾಗಿದೆ. ಒಬ್ಬ ಡೈವರ್​ ಆಗಿ ನಾನು ಟೈಟಾನಿಕ್​ ಚಿತ್ರವನ್ನು ಉತ್ತಮವಾಗಿ ತೋರಿಸಲು ಬಯಸಿದ್ದೆ. ಅದಕ್ಕಾಗಿಯೇ ನಾನು ಆ ಪ್ರದೇಶಕ್ಕೆ ಹಲವು ಬಾರಿ ಭೇಟಿ ನೀಡಿದ್ದೇನೆ. ಸಿನಿಮಾ ನಿರ್ಮಾಣವನ್ನು ನಾನು ಸಾಹಸ ಎಂದು ಪರಿಗಣಿಸುತ್ತೇನೆ. ಅಂತಹ ಚಿತ್ರಗಳ ನಿರ್ಮಾಣಕ್ಕಾಗಿ ನಾನು ನಿರಂತರವಾಗಿ ದುಡಿಯುತ್ತಿರುತ್ತೇನೆ ಎಂದು ಹೇಳಿದ್ದಾರೆ.

ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್‌ಗಾಗಿ ಕ್ಯಾಮೆರಾನ್ ಯಾರೂ ಮಾಡದ ಕೆಲಸವನ್ನು ಮಾಡಿದ್ದಾರೆ. ವಿಶ್ವದ ಅತ್ಯಂತ ಆಳವಾದ ಸಮುದ್ರ ಪ್ರದೇಶವಾದ ಪೆಸಿಫಿಕ್ ಮಹಾಸಾಗರದ ಮರೀನಾ ಟ್ರೆಂಚ್‌ನ ತಳಕ್ಕೆ ಒಬ್ಬರೇ ಹೋಗಿ ಬಂದಿದ್ದಾರೆ. "ನಾನು ಪ್ರಪಂಚದ ಅತ್ಯಂತ ದೂರದ ಸ್ಥಳಕ್ಕೆ ಹೋಗಿದ್ದೇನೆ. ಹಾಗಾದರೆ ಈ ಗ್ರಹದಲ್ಲಿ ನಾನೊಬ್ಬನೇ ಇದ್ದೇನಾ? ಅನ್ನಿಸಿತು.. ಅಲ್ಲಿ ಜನರೇ ಇರಲಿಲ್ಲ. ಏನಾದರೂ ಅಪಘಾತ ಸಂಭವಿಸಿದರೆ ರಕ್ಷಿಸುವವರು ಯಾರೂ ಇರುವುದಿಲ್ಲ'' ಎಂದು ಆ ಭಾವನೆ ಹಂಚಿಕೊಂಡರು. 1995 ರಲ್ಲಿ ಜೇಮ್ಸ್ ಕ್ಯಾಮರೂನ್ ಮೊದಲ ಬಾರಿಗೆ ರಷ್ಯಾದ ಜಲಾಂತರ್ಗಾಮಿ ನೌಕೆಯಲ್ಲಿ ಪ್ರಯಾಣಿಸಿದರು ಮತ್ತು ಟೈಟಾನಿಕ್ ಮುಳುಗುವ ಪ್ರದೇಶದ ವಿಡಿಯೋವನ್ನು ಹಂಚಿಕೊಂಡರು. ಸದ್ಯ ಮುಳುಗಿರುವ ಟೈಟಾನ್ ಬಗ್ಗೆ ಕ್ಯಾಮರಾನ್ ಎಲ್ಲಿಯೂ ಪ್ರತಿಕ್ರಿಯಿಸಿಲ್ಲ.

ಓದಿ: ಟೈಟಾನಿಕ್ ಅವಶೇಷ ನೋಡಲು ತೆರಳಿದ ಬಿಲಿಯನೇರ್ ಸೇರಿ ಐವರು ಸಾವು: ಸಬ್‌ಮರ್ಸಿಬಲ್ ಸ್ಫೋಟಿಸಿ ದುರಂತ!!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.