ETV Bharat / entertainment

ಸಿದ್ದಾರ್ಥ್​ ಆನಂದ್​ರ ಸಿನಿಮಾಗೆ ಜೊತೆಯಾಗಲಿದ್ದಾರೆ ಟೈಗರ್​ ಶ್ರಾಫ್ -​ ಜಾಹ್ನವಿ ಕಪೂರ್​​ - ಫೈಟರ್​ ತೆರೆಗೆ ಬರಲು ಸಿದ್ದತೆ ನಡೆಸಿದೆ

ಹಾಲಿವುಡ್​​ನ​ ರ‍್ಯಾಂಬೊ ರಿಮೇಕ್​ ಚಿತ್ರಕ್ಕೆ ಸಿದ್ದಾರ್ಥ್​ ಆನಂದ್​ ಆ್ಯಕ್ಷನ್​ ಕಟ್​​ ಹೇಳಲು ಸಜ್ಜಾಗಿದ್ದಾರೆ.

Tiger Shroff as Jahnavi in ​​Siddharth Anand's Rambo

author img

By ETV Bharat Karnataka Team

Published : Sep 13, 2023, 3:35 PM IST

ಬೆಂಗಳೂರು: ಸಿನಿಮಾ ನಿರ್ದೇಶಕ ಸಿದ್ಧಾರ್ಥ್​ ಆನಂದ್​ ಅವರ ಬಹುನಿರೀಕ್ಷಿತ ಚಿತ್ರ 'ಫೈಟರ್'​ ತೆರೆಗೆ ಬರಲು ಸಿದ್ದತೆ ನಡೆಸಿದೆ. ಇದೆ ವೇಳೆ, ಅವರು ತಮ್ಮ ಮುಂದಿನ ಸಿದ್ದತೆಯನ್ನು ನಡೆಸಿದ್ದಾರೆ. ಹಾಲಿವುಡ್​ನ ಕ್ಲಾಸಿಕಲ್​ ರ‍್ಯಾಂಬೊ ಚಿತ್ರವನ್ನು ಅವರು ಭಾರತದ ಸನ್ನಿವೇಶಕ್ಕೆ ಅಳವಡಿಸಿಕೊಳ್ಳಲು ಸಿದ್ದರಾಗಿದ್ದಾರೆ. ಕಳೆದ ಆರು ವರ್ಷಗಳಿಂದ ಈ ಚಿತ್ರ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದರೂ ಅನೇಕ ಕಾರಣದಿಂದ ಇದು ವಿಳಂಬ ಆಗುತ್ತಿದೆ. ಇನ್ನು ಈ ಚಿತ್ರದಲ್ಲಿ ಬಾಲಿವುಡ್​ ನಟ ಟೈಗರ್​ ಶ್ರಾಫ್​ ಮತ್ತು ಜಾಹ್ನವಿ ಪ್ರಮುಖ ಪಾತ್ರ ನಿರ್ವಹಣೆ ಮಾಡಲಿದ್ದು, ಈ ಇಬ್ಬರು ಇದೇ ಮೊದಲ ಬಾರಿಗೆ ಪರದೆ ಹಂಚಿಕೊಳ್ಳುತ್ತಿದ್ದಾರೆ. ಇದೊಂದು ಭರ್ಜರಿ ಸಾಹಸ ಚಿತ್ರವಾಗಿರಲಿದೆ.

ಸಿದ್ಧಾರ್ಥ್​ ಆನಂದ್​ ಅವರ ಆಪ್ತರ ಮೂಲದ ಪ್ರಕಾರ, ಹಾಲಿವುಡ್​ ಸಿನಿಮಾ ರ‍್ಯಾಂಬೊ ರಿಮೇಕ್​ ಚಿತ್ರಕ್ಕೆ ಸಿದ್ದಾರ್ಥ್​ ಆನಂದ್​ ಆ್ಯಕ್ಷನ್​ ಕಟ್​​ ಹೇಳಲು ಸಜ್ಜಾಗಿದ್ದಾರೆ. ಇದು ಆ್ಯಕ್ಷನ್​ ಚಿತ್ರವಾಗಿರುವ ಹಿನ್ನಲೆ ಟೈಗರ್​ ಶ್ರಾಫ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇವರಿಗೆ ನಟಿ ಜಾಹ್ನವಿ ಕಪೂರ್​ ಜೊತೆಯಾಗಲಿದ್ದಾರೆ. ಇನ್ನು ಜಾಹ್ನವಿ ಕಪೂರ್​ ಪಾತ್ರದ ಕುರಿತು ಚಿತ್ರ ತಂಡ ಇನ್ನು ಯಾವುದೇ ಅಧಿಕೃತಗೊಳಿಸಿಲ್ಲ. ಈ ಇಬ್ಬರು ನಟರು ದೀರ್ಘ ಕಾಲದ ಸ್ನೇಹಿತರಾಗಿದ್ದು, ಒಂದೇ ಪ್ರಾಜೆಕ್ಟ್​ನಲ್ಲಿ ಕೆಲಸ ಮಾಡಲು ಉತ್ಸುಕರಾಗಿದ್ದಾರೆ ಎಂದಿದ್ದಾರೆ.

ಇನ್ನು ಈ ರಿಮೇಕ್​ ಚಿತ್ರವೂ ಮುಂದಿನ ವರ್ಷ ಜನವರಿಯಿಂದ ಕಾರ್ಯಾರಂಭ ಮಾಡಲಿದೆ. ಯುರೋಪ್​ನಲ್ಲಿ ಈ ಹಿಂದೆ ಚಿತ್ರೀಕರಣ ಮಾಡದ ರೀತಿ ನಿರ್ಮಾಣ ಮಾಡಲು ಮುಂದಾಗಲಾಗಿದೆ. ಈ ಚಿತ್ರದ ಆ್ಯಕ್ಷನ್​ಕ್ಕಾಗಿ ಟೈಗರ್​ ಶ್ರಾಫ್​ ವಿಶ್ವದಲ್ಲಿ ಪ್ರಖ್ಯಾತ ತಜ್ಞರಿಂದ ತರಬೇತಿಗೆ ಪಡೆಯಲಿದ್ದು, ಗೊರಿಲ್ಲಾ ಯುದ್ಧ ತಂತ್ರ ಮತ್ತು ಶಸ್ತ್ರಾಸ್ತ್ರಗಳ ಬಳಕೆ ಬಗ್ಗೆ ತಿಳಿಯಲಿದ್ದಾರೆ ಮೂಲಗಳ ಪ್ರಕಾರ, ಭಾರತದ ರ‍್ಯಾಂಬೊ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆ್ಯಕ್ಷನ್​ ಹೊಂದಿರಲಿದ್ದು, ನೋಡಲು ಕಣ್ಣಿಗೆ ಹಬ್ಬದಂತೆ ಇರಲಿದೆ.

ಸಿದ್ಧಾರ್ಥ್​ ಆನಂದ್​, ರೋಹಿತ್​ ಧವನ್​ ಮತ್ತು ತಂಡ ಈ ಪ್ರಾಜೆಕ್ಟ್​ನಲ್ಲಿ ಜೊತೆಯಾಗಲಿದ್ದು, ಭಾರತೀಯ ನೆಲಕ್ಕೆ ತಕ್ಕಂತೆ ರ‍್ಯಾಂಬೊ ಚಿತ್ರದ ಅಳವಡಿಕೆ ನಡೆಯಲಿದೆ. ಟೈಗರ್​ ಶ್ರಾಫ್, ಭಾರತೀಯ ಸಶಸ್ತ್ರ ಪಡೆಗಳ ಅಧಿಕಾರಿ ಪಾತ್ರ ನಿರ್ವಹಿಸಲಿದ್ದಾರೆ. ಈ ಚಿತ್ರ 2025ಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ.

ಇನ್ನು ನಟ ಟೈಗರ್​ ಶ್ರಾಫ್​ ಸದ್ಯ ನಟ ಅಕ್ಷಯ್​​ ಕುಮಾರ್​ ಜೊತೆಗೆ 'ಬಡೇ ಮಿಯಾನ್​ ಚೋಟೆ ಮಿಯಾನ್​' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಕೃತಿ ಸನೋನ್​ ಜೊತೆಗ 'ಗನ್​ಪತ್'​​ನಲ್ಲಿ ನಟಿಸುತ್ತಿದ್ದಾರೆ. ಇನ್ನು ನಟಿ ಜಾಹ್ನವಿ ಕಪೂರ್​ 'ಮಿಸ್ಟರ್​ ಅಂಡ್​ ಮಿಸಸ್​ ಮಹಿ' ಚಿತ್ರದಲ್ಲಿ ರಾಜ್​ ಕುಮಾರ್​ ರಾವ್​ ಜೊತೆ ನಟಿಸುತ್ತಿದ್ದಾರೆ. ಜೊತೆಗೆ ಜ್ಯೂ. ಎನ್​ಟಿಆರ್​ ಜೊತೆಗೆ 'ದೇವುರ'ದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: Watch: ಮಲೇಷ್ಯಾ ಪ್ರಧಾನಿ ಭೇಟಿಯಾದ ರಜನಿಕಾಂತ್.. ಶಿವಾಜಿ ಸ್ಟೈಲ್​ನಲ್ಲಿ ತಲೈವಾ ಸ್ವಾಗತಿಸಿದ ಅನ್ವರ್ ಇಬ್ರಾಹಿಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.