ಡಾ. ಗಿರಿಧರ್ ಹೆಚ್.ಟಿ ನಿರ್ದೇಶನದ ಪರಿಮಳ ಡಿಸೋಜಾ ಚಿತ್ರಕ್ಕೆ ಮೂವರು ಮಾಜಿ ಮುಖ್ಯಮಂತ್ರಿಗಳು ಸಾಥ್ ನೀಡಿದ್ದಾರೆ. ಹೌದು, ಈ ಸಿನಿಮಾದ ಪೋಸ್ಟರ್ ಅನ್ನು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ಹೆಚ್.ಡಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರು ಒಮ್ಮತದಿಂದ ಬಿಡುಗಡೆ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಪೋಸ್ಟರ್ ಬಿಡುಗಡೆ ಮಾಡಿ ಇಡೀ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
![three ex chief minister unveiled parimala disoza movie poster](https://etvbharatimages.akamaized.net/etvbharat/prod-images/16612641_news.jpg)
ಬೆಂಗಳೂರು, ಬಿಡದಿ, ನೆಲಮಂಗಲ, ಕನಕಪುರ, ಹಾಸನ, ಚಿಕ್ಕಮಗಳೂರು ಸೇರಿದಂತೆ ಕರ್ನಾಟಕದ ಹಲವು ಸ್ಥಳಗಳಲ್ಲಿ 72 ದಿನಗಳಿಗೂ ಅಧಿಕ ಕಾಲ ಚಿತ್ರೀಕರಣ ಮಾಡಿರುವ ಸಸ್ಪೆನ್ಸ್, ಥ್ರಿಲ್ಲರ್, ಆ್ಯಕ್ಷನ್ ಜೊತೆಗೆ ಮನೋರಂಜನಾತ್ಮಕ ಕಥೆಯನ್ನು ಹೊಂದಿರುವ ಈ ಚಲನಚಿತ್ರಕ್ಕೆ ಜೋಗಿ ಪ್ರೇಮ್ ಅವರು ಒಂದು ಅತ್ಯುತ್ತಮ ಹಾಡನ್ನು ಹಾಡುವ ಮೂಲಕ ಶುಭ ಹಾರೈಸಿದ್ದಾರೆ.
![three ex chief minister unveiled parimala disoza movie poster](https://etvbharatimages.akamaized.net/etvbharat/prod-images/16612641_dgrfh.jpg)
ಮೀಸೆ ಅಂಜನಪ್ಪ, ಕ್ರಿಷ್ಣಪ್ಪ, ಉಗ್ರಮ್ ರೆಡ್ಡಿ, ವಿಷ್ಣು ಅಲ್ಲದೇ ಕೋಮಲಾ ಬನವಾಸೆ, ವಿನೋದ್ ಶೇಷಾದ್ರಿ, ಶ್ರೀನಿವಾಸ ಪ್ರಭು, ಭವ್ಯಾ, ಪೂಜಾ ರಾಮಚಂದ್ರ, ಶಿವಕುಮಾರ್ ಆರಾಧ್ಯ, ಶಂಖನಾದ ಅಂಜನಪ್ಪ ಮುಂತಾದವರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ.
ಸಾಹಿತಿಗಳಾದ ಡಾ.ವಿ ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ ಮತ್ತು ಕೆ. ಕಲ್ಯಾಣ್ ಅವರು ಸಾಹಿತ್ಯವನ್ನು ರಚಿಸಿದ್ದಾರೆ. ಇವರುಗಳ ಸಾಹಿತ್ಯಕ್ಕೆ ಖ್ಯಾತ ಹಿನ್ನೆಲೆ ಗಾಯಕರಾದ ರಾಜೇಶ್ ಕೃಷ್ಣನ್, ಶ್ರುತಿ ವಿ.ಎಸ್, ಸುಪ್ರಿಯಾ ರಾಮ್, ನಕುಲ್ ಅಭ್ಯಂಕರ್ ಮತ್ತು ಅನುರಾಧ ಭಟ್ ಅವರುಗಳು ಹಾಡಿದ್ದಾರೆ. ಕ್ರಿಸ್ಟೋಫರ್ ಜೇಸನ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.
![three ex chief minister unveiled parimala disoza movie poster](https://etvbharatimages.akamaized.net/etvbharat/prod-images/16612641_bvhdhfserh.jpg)
ಕೆ.ರಾಮ್ ಛಾಯಾಗ್ರಹಣ ಇದ್ದರೆ, ಚಿತ್ರದ ಸಂಕಲನವನ್ನು ಸಂಜೀವ್ ರೆಡ್ಡಿ ಮಾಡಿದ್ದಾರೆ. ಎಸ್.ಎಫ್.ಎಕ್ಸ್ ಹಾಗೂ 5.1 ಮಿಕ್ಸಿಂಗ್ ಅನ್ನು ಶಂಕರ್, ನೃತ್ಯ ನಿರ್ದೇಶನವನ್ನು ವಿಜಯನಗರ ಮಂಜು ಮಾಡಿದ್ದಾರೆ. ಅತ್ಯುತ್ತಮ ಆ್ಯಕ್ಷನ್ ಸನ್ನಿವೇಶಗಳಿಗೆ ಬಂಡೆ ಚಂದ್ರು ಅವರು ಸಾಹಸ ನಿರ್ದೇಶನ ಮಾಡಿದ್ದಾರೆ.
ವಿಲೇಜ್ ರೋಡ್ ಫಿಲಂಸ್ ಸಂಸ್ಥೆಯ ಮೂಲಕ ವಿನೋದ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಪರಿಮಳ ಡಿಸೋಜಾ ಸಿನಿಮಾ ಅನ್ನು ಅತಿ ಶೀಘ್ರದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.
ಇದನ್ನೂ ಓದಿ: ಪುನೀತ್ ಪರ್ವ ಕಾರ್ಯಕ್ರಮಕ್ಕೆ ರಾಜ್ ಕುಟುಂಬದಿಂದ ಸಿಎಂಗೆ ಆಹ್ವಾನ